ವಿಡಿಯೋ | ಕಾಲ್ನಡಿಗೆಯಲ್ಲೇ ತಿರುಪತಿಯ ತಿರುಮಲ ಬೆಟ್ಟದ 3550 ಮೆಟ್ಟಿಲು ಏರಿದ ಕರ್ನಾಟಕದ 116 ವರ್ಷದ ವೃದ್ಧೆ !

ತಿರುಪತಿಯ ತಿರುಮಲ ಶ್ರೀ ವೆಂಕಟೇಶ್ವರ ದೇವರ ಮೇಲಿನ ಅಚಲ ಭಕ್ತಿಯಿಂದ ಕರ್ನಾಟಕದ 116 ವರ್ಷದ ವೃದ್ಧೆಯೊಬ್ಬರು ಕಾಲ್ನಡಿಗೆಯಲ್ಲೇ ತಿರುಮಲ ಬೆಟ್ಟ ಏರಿರುವ ವಿದ್ಯಮಾನ ಈಗ ವ್ಯಾಪಕ ಗಮನ ಸೆಳೆದಿದೆ. ಯಾವುದೇ ಆಯಾಸವಿಲ್ಲದೆ, ಯಾರ ಸಹಾಯವನ್ನೂ ಪಡೆಯದೆ, ಕೈಯಲ್ಲಿ ಕೇವಲ ಒಂದು ಕೋಲನ್ನು ಆಧಾರವಾಗಿಸಿಕೊಂಡು, ಸುಮಾರು 3,550 ಮೆಟ್ಟಿಲುಗಳನ್ನು ಏರಿ ತಿರುಮಲ ತಲುಪಿರುವುದು ಆಶ್ಚರ್ಯಚಕಿತರನ್ನಾಗಿಸಿದೆ. ಈ ವೃದ್ಧೆಯ … Continued

ತನಗೆ ಕಚ್ಚಿದ ಹಾವಿನ ತಲೆಯನ್ನೇ ಹಿಡಿದು ಕಚ್ಚಿದ ವ್ಯಕ್ತಿ ; ಅದು ಸತ್ತ ನಂತರ ಅದರ ಮೇಲೆಯೇ ಮಲಗಿದ ; ಆದರೆ…

ಶ್ರೀಕಾಳಹಸ್ತಿ: ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ತೊಟ್ಟಂಬೆಡು ಮಂಡಲದ ಚಿಯ್ಯವರಂ ಎಂಬಲ್ಲಿ ವ್ಯಕ್ತಿಯೊಬ್ಬ ತನಗೆ ಕಪ್ಪು ವಿಷಕಾರಿ ಹಾವು ಕಚ್ಚಿದ ನಂತರ ಅದರ ತಲೆಯನ್ನು ಕಚ್ಚಿದ ಘಟನೆ ವಿಚಿತ್ರ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅಲ್ಲದೆ, ನಂತರ ಆತ ಸತ್ತ ಹಾವನ್ನು ತೆಗೆದುಕೊಂಡು ಮನಗೆ ಬಂದು ಅದರ ಮೇಲೆಯೇ ಮಲಗಿದ್ದಾನೆ…! ಗುರುವಾರ ರಾತ್ರಿ ನಡೆದ ಈ ಘಟನೆ … Continued

ವೀಡಿಯೊ…| ತಿರುಪತಿ : ಚಲಿಸುತ್ತಿರುವ ಬೈಕ್ ಮೇಲೆ ಹಾರಿದ ಚಿರತೆ ; ಕೂದಲೆಳೆ ಅಂತರದಿಂದ ಪಾರಾದ ಬೈಕ್‌ ಹಿಂಬದಿ ಸವಾರ…

ತಿರುಪತಿ: ಚಲಿಸುತ್ತಿದ್ದ ವಾಹನದ ಮೇಲೆ ಚಿರತೆಯೊಂದು ನುಗ್ಗಿದ್ದರಿಂದ ಬೈಕ್ ಸವಾರ ಮತ್ತು ಹಿಂಬದಿ ಸವಾರ ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ತಡರಾತ್ರಿ ನಡೆದ ಆಂಧ್ರಪ್ರದೇಶದ ತಿರುಪತಿ ಬಳಿ ನಡೆದಿದೆ. ಈ ಘಟನೆ ತಡರಾತ್ರಿ ನಡೆದಿದ್ದು, ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದೆ. ಈ ಘಟನೆ ಶುಕ್ರವಾರ ಸಂಜೆ 7 ಗಂಟೆಯ ಸುಮಾರಿಗೆ ಅಲಿಪಿರಿಯ ಜೂ ಪಾರ್ಕ್ ರಸ್ತೆಯಲ್ಲಿ ಸಂಭವಿಸಿದ್ದು, … Continued

ತಿರುಪತಿ ದೇವಸ್ಥಾನದ ಆವರಣದಲ್ಲಿ ನಮಾಜ್ ; ಭುಗಿಲೆದ್ದ ವಿವಾದ

ಹೈದರಾಬಾದ್: ಗುರುವಾರ ತಿರುಪತಿಯ ತಿರುಮಲದ ದೇವಸ್ಥಾನದ ಆವರಣದ ಬಳಿ ತಿರುಮಲ ಕಲ್ಯಾಣ ಮಂಟಪದ ಸಮೀಪ ವ್ಯಕ್ತಿಯೊಬ್ಬ ಹಜರತ್ ಕ್ಯಾಪ್ ಧರಿಸಿ ನಮಾಜ್ ಮಾಡಿರುವ ವೀಡಿಯೊ ವೈರಲ್‌ ಆದ ನಂತರ ವಿವಾದ ಭುಗಿಲೆದ್ದಿದೆ. ಈ ಘಟನೆ ಭಕ್ತರಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊದಲ್ಲಿ ಆ ವ್ಯಕ್ತಿ ಹಜರತ್ ಕ್ಯಾಪ್ ಧರಿಸಿ ನಮಾಜ್ ಮಾಡುತ್ತಿರುವುದನ್ನು ತೋರಿಸಲಾಗಿದೆ. ಸ್ಥಳದಲ್ಲಿ … Continued

ಹಿಂದೂ ಧಾರ್ಮಿಕ ಪದ್ಧತಿಗಳನ್ನು ಅನುಸರಿಸದ 18 ಉದ್ಯೋಗಿಗಳ ವಿರುದ್ಧ ತಿರುಪತಿ ದೇವಸ್ಥಾನ ಮಂಡಳಿಯಿಂದ ಕ್ರಮ

ತಿರುಪತಿ : ಟಿಟಿಡಿ ಉತ್ಸವ ಮತ್ತು ಆಚರಣೆಗಳಲ್ಲಿ ಹಿಂದೂ ಧಾರ್ಮಿಕ ಆಚರಣೆಗಳನ್ನು ಅನುಸರಿಸದ 18 ನೌಕರರ ವಿರುದ್ಧ ತಿರುಮಲ ತಿರುಪತಿ ದೇವಸ್ಥಾನಮ್ (TTD) ಕ್ರಮ ಕೈಗೊಂಡಿದೆ. ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟಿಟಿಡಿ ಪ್ರಕಟಣೆ ತಿಳಿಸಿದೆ. “ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರ ನಿರ್ದೇಶನವನ್ನು ಅನುಸರಿಸಿ, … Continued

ತಿರುಪತಿ ವೈಕುಂಠ ಏಕಾದಶಿ ಟೋಕನ್ ಕೌಂಟರಿನಲ್ಲಿ ಕಾಲ್ತುಳಿತ: 6 ಭಕ್ತರು ಸಾವು, ಹಲವರಿಗೆ ಗಾಯ

ತಿರುಪತಿ : ತಿರುಪತಿಯಲ್ಲಿ ಬುಧವಾರ (ಜನವರಿ 8) ರಾತ್ರಿ ವೈಕುಂಠ ಏಕಾದಶಿ ಆಚರಣೆ ನಿಮಿತ್ತ ಸ್ಥಾಪಿಸಲಾಗಿದ್ದ ಟೋಕನ್ ಕೌಂಟರ್‌ಗಳಲ್ಲಿ ಕಾಲ್ತುಳಿತ ಉಂಟಾಗಿ ದುರಂತ ಸಂಭವಿಸಿದೆ. ತಮಿಳುನಾಡಿನ ಸೇಲಂನ ಮಹಿಳೆ ಸೇರಿದಂತೆ 6  ಭಕ್ತರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ತಿರುಪತಿಯ ಬೈರಾಗಿಪಟ್ಟೇಡಾದ ಎಂಜಿಎಂ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ತಾತ್ಕಾಲಿಕ ಕೌಂಟರ್‌ನಲ್ಲಿ ಮಹಿಳೆ ಸೇರಿದಂತೆ … Continued

ತಿರುಪತಿ ಲಡ್ಡು ವಿವಾದ: ತನಿಖೆಗೆ ಸಿಬಿಐ ಉಸ್ತುವಾರಿಯಲ್ಲಿ ಎಸ್‌ಐಟಿ ರಚಿಸಿ ಸುಪ್ರೀಂ ಕೋರ್ಟ್‌ ಆದೇಶ

ನವದೆಹಲಿ: ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಬಗ್ಗೆ ತನಿಖೆ ನಡೆಸಲು ಸಿಬಿಐನ ಇಬ್ಬರು ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ತಂಡ ರಚಿಸಿ ಶುಕ್ರವಾರ ಆದೇಶಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್‌. ಗವಾಯಿ … Continued

ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ನಡೆದಿರುವ ಅಕ್ರಮಗಳ ತನಿಖೆಗೆ ವಿಶೇಷ ತನಿಖಾ ತಂಡ

ಹೈದರಾಬಾದ್: ದೇವಸ್ಥಾನದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಕಂಡುಬಂದ ಆರೋಪದ ಹಿನ್ನೆಲೆಯಲ್ಲಿ ತಿರುಪತಿ ದೇವಸ್ಥಾನದ ಅವ್ಯವಹಾರದ ತನಿಖೆಗಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಉಂಡವಳ್ಳಿ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯ್ಡು, “ಇನ್‌ಸ್ಪೆಕ್ಟರ್ ಜನರಲ್ ಅಥವಾ ಅದಕ್ಕಿಂತ ಉನ್ನತ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚಿಸಲಾಗುವುದು. ಇದು ಈ ಬಗ್ಗೆ ತನಿಖೆ … Continued

ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ; 11 ದಿನಗಳ ಪ್ರಾಯಶ್ಚಿತಕ್ಕೆ ಮುಂದಾದ ಆಂಧ್ರ ಡಿಸಿಎಂ ಪವನ ಕಲ್ಯಾಣ

 ಅಮರಾವತಿ: ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಕಲಬೆರಕೆ ಮಾಡಿದ್ದಕ್ಕಾಗಿ ವೆಂಕಟೇಶ್ವರ ದೇವರಿಗೆ ಪ್ರಾಯಶ್ಚಿತ್ತ ಮಾಡಲು 11 ದಿನಗಳ ಕಠಿಣ ವ್ರತ ಕೈಗೊಳ್ಳುವುದಾಗಿ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ ಕಲ್ಯಾಣ ಶನಿವಾರ ಹೇಳಿದ್ದಾರೆ. ಗುಂಟೂರು ಜಿಲ್ಲೆಯ ನಂಬೂರಿನ ಶ್ರೀ ದಶಾವತಾರ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರದಿಂದ ವ್ರತ ಆರಂಭಿಸುವುದಾಗಿ ನಟ-ರಾಜಕಾರಣಿ ಪವನ ಕಲ್ಯಾಣ ತಿಳಿಸಿದ್ದಾರೆ. “11 ದಿನಗಳ … Continued

ವೀಡಿಯೊ…| ಮೈಮೇಲೆ 25 ಕೆಜಿ ಚಿನ್ನಾಭರಣ ಧರಿಸಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬಂದ ಕುಟುಂಬ…!

ತಿರುಪತಿ: ಪುಣೆಯ ಭಕ್ತರು ಬುಧವಾರ (August 23) ಮುಂಜಾನೆ ಸುಮಾರು 25 ಕೆಜಿ ಚಿನ್ನವನ್ನು ಧರಿಸಿ ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇಬ್ಬರು ಪುರುಷರು, ಒಬ್ಬ ಮಹಿಳೆ ಮತ್ತು ಒಬ್ಬ ಬಾಲಕ ದೇವಸ್ಥಾನಕ್ಕೆ ಭೇಟಿ ನೀಡುವಾಗ ಹಲವಾರು ಚಿನ್ನದ ಸರಗಳು, ಚಿನ್ನದ ಸನ್‌ ಗ್ಲಾಸುಗಳು, ಬಳೆಗಳು, ನೆಕ್ಲೇಸುಗಳು, ‘7’ ಸಂಖ್ಯೆಯ ಚಿನ್ನದ … Continued