ವೀಡಿಯೊ…| ಮೈಮೇಲೆ 25 ಕೆಜಿ ಚಿನ್ನಾಭರಣ ಧರಿಸಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬಂದ ಕುಟುಂಬ…!

ತಿರುಪತಿ: ಪುಣೆಯ ಭಕ್ತರು ಬುಧವಾರ (August 23) ಮುಂಜಾನೆ ಸುಮಾರು 25 ಕೆಜಿ ಚಿನ್ನವನ್ನು ಧರಿಸಿ ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇಬ್ಬರು ಪುರುಷರು, ಒಬ್ಬ ಮಹಿಳೆ ಮತ್ತು ಒಬ್ಬ ಬಾಲಕ ದೇವಸ್ಥಾನಕ್ಕೆ ಭೇಟಿ ನೀಡುವಾಗ ಹಲವಾರು ಚಿನ್ನದ ಸರಗಳು, ಚಿನ್ನದ ಸನ್‌ ಗ್ಲಾಸುಗಳು, ಬಳೆಗಳು, ನೆಕ್ಲೇಸುಗಳು, ‘7’ ಸಂಖ್ಯೆಯ ಚಿನ್ನದ … Continued

ಆದಿತ್ಯ ಎಲ್‌1 ಉಡಾವಣೆ : ತಿರುಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಇಸ್ರೋ ವಿಜ್ಞಾನಿಗಳು

ತಿರುಪತಿ: ಸೂರ್ಯನ ಕುರಿತಾದ ಅಧ್ಯಯನ ನಡೆಸಲು ರವಾನಿಸಲಿರುವ ಆದಿತ್ಯ ಎಲ್‌1 ಮಿಷನ್‌ನ ಉಡಾವಣೆಗೆ (ಸೆಪ್ಟೆಂಬರ್ 2)ಮುನ್ನಾದಿನವಾದ ಶುಕ್ರವಾರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಿಜ್ಞಾನಿಗಳು ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಿರುಮಲ ಬೆಟ್ಟದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಶುಕ್ರವಾರ ಬೆಳಿಗ್ಗೆ ತೆರಳಿದ ವಿಜ್ಞಾನಿಗಳ ತಂಡ, ದೇವರ ಆಶೀರ್ವಾದ ಪಡೆದುಕೊಂಡಿತು. ಚಂದ್ರಯಾನ- … Continued

ನವೆಂಬರ್ 14ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಧ್ಯಕ್ಷತೆಯಲ್ಲಿ ದಕ್ಷಿಣ ವಲಯದ ಸಮನ್ವಯದ ಸಭೆ, ಸಿಎಂ ಬೊಮ್ಮಾಯಿ ಭಾಗಿ

ಬೆಂಗಳೂರು: ದಕ್ಷಿಣ ವಲಯದ ಸಮನ್ವಯಕ್ಕೆ ಸಂಬಂಧಿಸಿದಂತೆ ತಿರುಪತಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 14 ರಂದುಮುಖ್ಯಮಂತ್ರಿಗಳ ಸಭೆ ನಡೆಯಲಿದ್ದು, ನಾನು ಭಾಗವಹಿಸಲಿದ್ದೇನೆ. ಇದಕ್ಕೆ ಸಂಬಂಧಿಸಿದಂತೆ ಪೂರ್ವಭಾವಿಯಾಗಿ ಶುಕ್ರವಾರ ಸಭೆ ನಡೆಸಿ, ಸಮ್ಮೇಳನದಲ್ಲಿ ಪ್ರಸ್ತಾಪಿಸಬೇಕಾದ ಅಂಶಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ವಿಧಾನಸೌಧದ ಸಮ್ಮೇಳನ … Continued