ತಿರುಪತಿ ದೇವಸ್ಥಾನಕ್ಕೆ ರೇಷ್ಮೆ ಬದಲಿಗೆ ‘ಪಾಲಿಯೆಸ್ಟರ್‌’ ಶಾಲುಗಳ ಪೂರೈಕೆ ; ಬೃಹತ್‌ ಹಗರಣ ಬೆಳಕಿಗೆ

ಹೈದರಾಬಾದ್ : ಶುದ್ಧ ರೇಷ್ಮೆ ಎಂದು ಹೇಳಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ (Tirumala Venkateswara Temple)  ಸುಮಾರು ಹತ್ತು ವರ್ಷಗಳ ಕಾಲ ಕಳಪೆ ಗುಣಮಟ್ಟದ ಪಾಲಿಯೆಸ್ಟರ್ ಶಾಲುಗಳನ್ನು (Dupattas) ಪೂರೈಸಿದ ಬೃಹತ್ ವಂಚನೆಯು ಬೆಳಕಿಗೆ ಬಂದಿದ್ದು, ದೇವಸ್ಥಾನ ಆಡಳಿತ ಮತ್ತು ಭಕ್ತರಲ್ಲಿ ತೀವ್ರ ಆಘಾತ ಮೂಡಿಸಿದೆ. ತಿರುಮಲ ತಿರುಪತಿ ದೇವಸ್ಥಾನಂ (TTD) ನ … Continued

ತಿರುಪತಿ ದೇವಸ್ಥಾನದಲ್ಲಿ ದರ್ಶನಕ್ಕೆ ಕಾಯುವ ಸಮಯ 2 ತಾಸು ಕಡಿಮೆ ಮಾಡಲು ಎಐ (AI) ತಂತ್ರಜ್ಞಾನ ಬಳಸಲು ಟಿಟಿಡಿ ಯೋಜನೆ

 ತಿರುಪತಿ: ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿಯು ಉದ್ದದ ಸರತಿ ಸಾಲುಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಮತ್ತು ಯಾತ್ರಾರ್ಥಿಗಳು ದರ್ಶನಕ್ಕಾಗಿ ಕಾಯುವ ಸರಾಸರಿ ಸಮಯವನ್ನು ಕೇವಲ ಎರಡು ಗಂಟೆಗಳಿಗೆ ಇಳಿಸಲು ಮಹತ್ವಾಕಾಂಕ್ಷೆಯ ಡಿಜಿಟಲ್ ಅಭಿಯಾನವನ್ನು ಪ್ರಾರಂಭಿಸಲು ಯೋಜಿಸಿದೆ. ಈ ಉದ್ದೇಶಕ್ಕಾಗಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಟಿಟಿಡಿ ಅಧ್ಯಕ್ಷರಾದ ಬಿ.ಆರ್. ನಾಯ್ಡು ಅವರು ಎನ್‌ಡಿಟಿವಿ ಜೊತೆಗಿನ … Continued

ವೀಡಿಯೊ…| ಮಗ ಅಗ್ನಿ ಅವಘಡದಿಂದ ಪಾರಾಗಿದ್ದಕ್ಕೆ ತಿರುಪತಿಯಲ್ಲಿ ಮುಡಿಕೊಟ್ಟ ಆಂಧ್ರ ಡಿಸಿಎಂ ಪವನಕಲ್ಯಾಣ ಪತ್ನಿ ಅನ್ನಾ ಲೆಜ್ನೆವಾ ..

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಪವನಕಲ್ಯಾಣ ಅವರ ಪತ್ನಿ ಅನ್ನಾ ಲೆಜ್ನೆವಾ ಭಾನುವಾರ ಸಂಜೆ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಉಪವಾಸವನ್ನು ಪೂರ್ಣಗೊಳಿಸಿದರು. ಸಿಂಗಾಪುರದ ಶಾಲೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ತಮ್ಮ ಮಗ ಮಾರ್ಕ್ ಶಂಕರ್ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆಯ ನಂತರ ತಿರುಪತಿಗೆ ಭೇಟಿ ನೀಡಿದ್ದಾರೆ. … Continued

ಹಿಂದೂ ಧಾರ್ಮಿಕ ಪದ್ಧತಿಗಳನ್ನು ಅನುಸರಿಸದ 18 ಉದ್ಯೋಗಿಗಳ ವಿರುದ್ಧ ತಿರುಪತಿ ದೇವಸ್ಥಾನ ಮಂಡಳಿಯಿಂದ ಕ್ರಮ

ತಿರುಪತಿ : ಟಿಟಿಡಿ ಉತ್ಸವ ಮತ್ತು ಆಚರಣೆಗಳಲ್ಲಿ ಹಿಂದೂ ಧಾರ್ಮಿಕ ಆಚರಣೆಗಳನ್ನು ಅನುಸರಿಸದ 18 ನೌಕರರ ವಿರುದ್ಧ ತಿರುಮಲ ತಿರುಪತಿ ದೇವಸ್ಥಾನಮ್ (TTD) ಕ್ರಮ ಕೈಗೊಂಡಿದೆ. ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟಿಟಿಡಿ ಪ್ರಕಟಣೆ ತಿಳಿಸಿದೆ. “ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರ ನಿರ್ದೇಶನವನ್ನು ಅನುಸರಿಸಿ, … Continued

ತಿರುಪತಿ ಲಡ್ಡು ವಿವಾದ: ತನಿಖೆಗೆ ಸಿಬಿಐ ಉಸ್ತುವಾರಿಯಲ್ಲಿ ಎಸ್‌ಐಟಿ ರಚಿಸಿ ಸುಪ್ರೀಂ ಕೋರ್ಟ್‌ ಆದೇಶ

ನವದೆಹಲಿ: ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಬಗ್ಗೆ ತನಿಖೆ ನಡೆಸಲು ಸಿಬಿಐನ ಇಬ್ಬರು ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ತಂಡ ರಚಿಸಿ ಶುಕ್ರವಾರ ಆದೇಶಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್‌. ಗವಾಯಿ … Continued

ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ನಡೆದಿರುವ ಅಕ್ರಮಗಳ ತನಿಖೆಗೆ ವಿಶೇಷ ತನಿಖಾ ತಂಡ

ಹೈದರಾಬಾದ್: ದೇವಸ್ಥಾನದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಕಂಡುಬಂದ ಆರೋಪದ ಹಿನ್ನೆಲೆಯಲ್ಲಿ ತಿರುಪತಿ ದೇವಸ್ಥಾನದ ಅವ್ಯವಹಾರದ ತನಿಖೆಗಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಉಂಡವಳ್ಳಿ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯ್ಡು, “ಇನ್‌ಸ್ಪೆಕ್ಟರ್ ಜನರಲ್ ಅಥವಾ ಅದಕ್ಕಿಂತ ಉನ್ನತ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚಿಸಲಾಗುವುದು. ಇದು ಈ ಬಗ್ಗೆ ತನಿಖೆ … Continued

ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ; 11 ದಿನಗಳ ಪ್ರಾಯಶ್ಚಿತಕ್ಕೆ ಮುಂದಾದ ಆಂಧ್ರ ಡಿಸಿಎಂ ಪವನ ಕಲ್ಯಾಣ

 ಅಮರಾವತಿ: ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಕಲಬೆರಕೆ ಮಾಡಿದ್ದಕ್ಕಾಗಿ ವೆಂಕಟೇಶ್ವರ ದೇವರಿಗೆ ಪ್ರಾಯಶ್ಚಿತ್ತ ಮಾಡಲು 11 ದಿನಗಳ ಕಠಿಣ ವ್ರತ ಕೈಗೊಳ್ಳುವುದಾಗಿ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ ಕಲ್ಯಾಣ ಶನಿವಾರ ಹೇಳಿದ್ದಾರೆ. ಗುಂಟೂರು ಜಿಲ್ಲೆಯ ನಂಬೂರಿನ ಶ್ರೀ ದಶಾವತಾರ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರದಿಂದ ವ್ರತ ಆರಂಭಿಸುವುದಾಗಿ ನಟ-ರಾಜಕಾರಣಿ ಪವನ ಕಲ್ಯಾಣ ತಿಳಿಸಿದ್ದಾರೆ. “11 ದಿನಗಳ … Continued

ಅಯೋಧ್ಯೆ ರಾಮ ಮಂದಿರ: ಕ್ಯೂ ನಿರ್ವಹಣೆಗಾಗಿ ಟ್ರಸ್ಟ್ ಟಿಟಿಡಿಯಿಂದ ನೆರವು ಕೋರಿದ ರಾಮಮಂದಿರ ಟ್ರಸ್ಟ್

ಅಯೋಧ್ಯೆ : ಅಯೋಧ್ಯೆಗೆ ಭೇಟಿ ನೀಡುವ ಶ್ರೀರಾಮ ಭಕ್ತರಿಗೆ ಸುರಕ್ಷಿತ ಮಾರ್ಗ ಮತ್ತು ಸಂಚಾರ ಕಲ್ಪಿಸಲು ಒಂದು ಪ್ರಮುಖ ಹೆಜ್ಜೆಯಾಗಿ ಅಯೋಧ್ಯೆ ರಾಮಮಂದಿರ ಟ್ರಸ್ಟ್ ಈಗ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಅನ್ನು ಸಂಪರ್ಕಿಸಿದೆ. ಭಕ್ತರ ದಟ್ಟಣೆ ತಪ್ಪಿಸಲು ಸುವ್ಯವಸ್ಥೆ, ಸರತಿ ಸಾಲು ನಿರ್ವಹಣಾ ವ್ಯವಸ್ಥೆ ಇತ್ಯಾದಿಗಳ ಕುರಿತು ಅಯೋಧ್ಯೆ ರಾಮಮಂದಿರ ಟ್ರಸ್ಟ್‌ನ ಪ್ರತಿನಿಧಿಗಳಿಗೆ ಟಿಟಿಡಿ … Continued

ತಿರುಪತಿ ತಿಮ್ಮಪ್ಪನಿಗೆ ಚಿನ್ನದ ಶಂಖ ಅರ್ಪಿಸಿದ ನಾರಾಯಣಮೂರ್ತಿ-ಸುಧಾಮೂರ್ತಿ ದಂಪತಿ

ತಿರುಮಲ(ಆಂಧ್ರಪ್ರದೇಶ): ಇನ್ಫೋಸಿಸ್ ಸಂಸ್ಥೆ ಮಾಜಿ ಮುಖ್ಯಸ್ಥ ನಾರಾಯಣಮೂರ್ತಿ (N.R.Narayanamurthy) ಹಾಗೂ ಸುಧಾಮೂರ್ತಿ (Sudhamurthy) ದಂಪತಿ ತಿರುಪತಿ ತಿಮ್ಮಪ್ಪನಿಗೆ ಬಂಗಾರದ ಶಂಖವನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ. ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ದಂಪತಿ ಸರಳ ಜೀವನ ನಡೆಸುತ್ತಿದ್ದಾರೆ. ಅವರ ದಾಂಪತ್ಯ ಜೀವನಕ್ಕೆ ಈಗ ನಲವತ್ತೈದು ವರ್ಷ. ಈ ಸಂದರ್ಭದಲ್ಲಿ ಬಂಗಾರದ ಶಂಖವನ್ನು ಮಾಡಿಸಿ ತಿಮ್ಮಪ್ಪನಿಗೆ ಅರ್ಪಿಸಿದ್ದಾರೆ. ದಂಪತಿ ಚಿನ್ನದ ಅಭಿಷೇಕ … Continued