ಅಯೋಧ್ಯೆ ರಾಮ ಮಂದಿರ: ಕ್ಯೂ ನಿರ್ವಹಣೆಗಾಗಿ ಟ್ರಸ್ಟ್ ಟಿಟಿಡಿಯಿಂದ ನೆರವು ಕೋರಿದ ರಾಮಮಂದಿರ ಟ್ರಸ್ಟ್

ಅಯೋಧ್ಯೆ : ಅಯೋಧ್ಯೆಗೆ ಭೇಟಿ ನೀಡುವ ಶ್ರೀರಾಮ ಭಕ್ತರಿಗೆ ಸುರಕ್ಷಿತ ಮಾರ್ಗ ಮತ್ತು ಸಂಚಾರ ಕಲ್ಪಿಸಲು ಒಂದು ಪ್ರಮುಖ ಹೆಜ್ಜೆಯಾಗಿ ಅಯೋಧ್ಯೆ ರಾಮಮಂದಿರ ಟ್ರಸ್ಟ್ ಈಗ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಅನ್ನು ಸಂಪರ್ಕಿಸಿದೆ.
ಭಕ್ತರ ದಟ್ಟಣೆ ತಪ್ಪಿಸಲು ಸುವ್ಯವಸ್ಥೆ, ಸರತಿ ಸಾಲು ನಿರ್ವಹಣಾ ವ್ಯವಸ್ಥೆ ಇತ್ಯಾದಿಗಳ ಕುರಿತು ಅಯೋಧ್ಯೆ ರಾಮಮಂದಿರ ಟ್ರಸ್ಟ್‌ನ ಪ್ರತಿನಿಧಿಗಳಿಗೆ ಟಿಟಿಡಿ ಅಧಿಕಾರಿಗಳು ಮಾಹಿತಿ ನೀಡಿದ್ದು, ಜನಸಂದಣಿ ನಿರ್ವಹಣೆ ಕುರಿತು ಚರ್ಚೆ ನಡೆಯುತ್ತಿದೆ.
ಶನಿವಾರ ಸಂಜೆ ದೇವಸ್ಥಾನದ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಟಿಟಿಡಿ ಕಾರ್ಯನಿರ್ವಹಣಾಧಿಕಾರಿ (ಇಒ) ಎ.ವಿ.ಧರ್ಮಾ ರೆಡ್ಡಿ ನೇತೃತ್ವದ ಅಧಿಕಾರಿಗಳ ತಂಡವು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರತಿನಿಧಿಗಳಿಗೆ ಭಕ್ತರ ಒಳಹರಿವು ನಿಯಂತ್ರಣ ಮತ್ತು ಸರದಿ ಸಾಲುಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದೆ..

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಆಹ್ವಾನದ ಮೇರೆಗೆ ಟಿಟಿಡಿ ಅಧಿಕಾರಿಗಳು ಶನಿವಾರ ಅಯೋಧ್ಯೆಗೆ ತಲುಪಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಬಾಲ ರಾಮನ ದೇವಸ್ಥಾನಕ್ಕೆ ಬರುವ ಭಕ್ತರಿಗೆ ತೃಪ್ತಿಕರ ದರ್ಶನ ನೀಡಲು ಯಾವ ರೀತಿಯ ವ್ಯವಸ್ಥೆ ಮಾಡಬೇಕು ಎಂದು ಟಿಟಿಡಿ ಇಒ ಅವರನ್ನು ಕೇಳಲಾಯಿತು. ಕ್ಯೂ ಲೈನ್‌ಗಳ ನಿರ್ವಹಣೆಗೆ ಸಂಬಂಧಿಸಿದಂತೆ ಟಿಟಿಡಿ ಎಂಜಿನಿಯರಿಂಗ್ ಅಧಿಕಾರಿಗಳು ಹಲವಾರು ಸಲಹೆಗಳನ್ನು ನೀಡಿದ್ದಾರೆ.
ನವದೆಹಲಿಯ ಟಿಟಿಡಿ ಇಂಜಿನಿಯರಿಂಗ್ ವಿಭಾಗದ ತಜ್ಞರು ಕೂಡ ಇವರೊಂದಿಗೆ ಸೇರಿಕೊಳ್ಳಲಿದ್ದಾರೆ. ದೇವಾಲಯದ ಪಟ್ಟಣವನ್ನು ತಲುಪಿದ ನಂತರ, ಧರ್ಮ ರೆಡ್ಡಿ ಮತ್ತು ಅವರ ತಂಡವು ರಾಮ್ ಲಲ್ಲಾಗೆ ಪ್ರಾರ್ಥನೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ದೇವಸ್ಥಾನದಲ್ಲಿನ ಸೌಲಭ್ಯಗಳನ್ನು ಅವರು ಪರಿಶೀಲಿಸಲಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| 'ತೃಣಮೂಲ ಕಾಂಗ್ರೆಸ್ಸಿಗಿಂತ ಬಿಜೆಪಿಗೆ ಮತ ಹಾಕುವುದು ಉತ್ತಮ' ಎಂದ ಕಾಂಗ್ರೆಸ್‌ ಹಿರಿಯ ನಾಯಕ...! ಟಿಎಂಸಿ ಕೆಂಡ

ಕಾರ್ಯನಿರ್ವಾಹಕ ಅಧಿಕಾರಿ ರಾಮಮಂದಿರದಲ್ಲಿ ಸರತಿ ಸಾಲುಗಳ ವ್ಯವಸ್ಥೆ ಮತ್ತು ಅವುಗಳ ನಿರ್ವಹಣೆಯ ಬಗ್ಗೆ ವಿವರವಾದ ವರದಿಯನ್ನು ಸಿದ್ಧಪಡಿಸುವ ಸಾಧ್ಯತೆಯಿದೆ, ಇದರಿಂದ ಭಕ್ತರು ತ್ವರಿತ ಮತ್ತು ಆರಾಮದಾಯಕ ದರ್ಶನವನ್ನು ಪಡೆಯಬಹುದಾಗಿದೆ.
ಪ್ರತಿದಿನ ಸರಾಸರಿ 80,000 ಭಕ್ತರು ತಿರುಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ, ಇದು ದೇಶದ ಅತಿ ಹೆಚ್ಚು ಭೇಟಿ ನೀಡುವ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಯಾತ್ರಿಕರ ಒಳಹರಿವು ಹರಿಯುವ ಹಬ್ಬಗಳ ಸಮಯದಲ್ಲಿ ಇನ್ನೂ ಜನರ ಸಂಖ್ಯೆ ಹೆಚ್ಚಿರುತ್ತದೆ. ಟಿಟಿಡಿ (TTD) ಪರಿಣಾಮಕಾರಿ ಜನಸಂದಣಿ ನಿರ್ವಹಣೆಯ ದಾಖಲೆಯನ್ನು ಹೊಂದಿದೆ.
ಅಯೋಧ್ಯಾ ಟ್ರಸ್ಟ್ ನ ಪ್ರತಿನಿಧಿಗಳಾದ ಡಾ.ಅನಿಲ ಮಿಶ್ರಾ, ಗೋಪಾಲಜಿ , ಜಗದೀಶ ಆಫ್ಲೆ, ಗಿರೀಶ ಸಹಸ್ರ ಭೋಜನಿ, ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ರಾಘವುಲು, ಟಿಟಿಡಿಯ ತಾಂತ್ರಿಕ ಸಲಹೆಗಾರ ಡಿ.ಎಸ್.ಎನ್. ಮೂರ್ತಿ, ಡಾ. ಜಿ.ರಾಮಚಂದ್ರರೆಡ್ಡಿ, ಎಸ್‌ಇ-2 ಜಗದೀಶ್ವರರೆಡ್ಡಿ, ಉಪ ಇಇಗಳಾದ ಬಾಬು ಹಾಗೂ ನಾಗರಾಜ ಮತ್ತಿತರರಿದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement