ತಿರುಪತಿ ತಿಮ್ಮಪ್ಪನಿಗೆ ಚಿನ್ನದ ಶಂಖ ಅರ್ಪಿಸಿದ ನಾರಾಯಣಮೂರ್ತಿ-ಸುಧಾಮೂರ್ತಿ ದಂಪತಿ

ತಿರುಮಲ(ಆಂಧ್ರಪ್ರದೇಶ): ಇನ್ಫೋಸಿಸ್ ಸಂಸ್ಥೆ ಮಾಜಿ ಮುಖ್ಯಸ್ಥ ನಾರಾಯಣಮೂರ್ತಿ (N.R.Narayanamurthy) ಹಾಗೂ ಸುಧಾಮೂರ್ತಿ (Sudhamurthy) ದಂಪತಿ ತಿರುಪತಿ ತಿಮ್ಮಪ್ಪನಿಗೆ ಬಂಗಾರದ ಶಂಖವನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ.
ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ದಂಪತಿ ಸರಳ ಜೀವನ ನಡೆಸುತ್ತಿದ್ದಾರೆ. ಅವರ ದಾಂಪತ್ಯ ಜೀವನಕ್ಕೆ ಈಗ ನಲವತ್ತೈದು ವರ್ಷ. ಈ ಸಂದರ್ಭದಲ್ಲಿ ಬಂಗಾರದ ಶಂಖವನ್ನು ಮಾಡಿಸಿ ತಿಮ್ಮಪ್ಪನಿಗೆ ಅರ್ಪಿಸಿದ್ದಾರೆ.
ದಂಪತಿ ಚಿನ್ನದ ಅಭಿಷೇಕ ಶಂಖ ಮತ್ತು 2 ಕಿಲೋಗ್ರಾಂ ತೂಕದ ‘ಕೂರ್ಮಮ್’ (ಆಮೆ) ದಾನ ಮಾಡಿದರು. ಅವರು ದೇಣಿಗೆಯನ್ನು ಟಿಟಿಡಿ ಇಒ ಎ.ವಿ. ಧರ್ಮಾ ರೆಡ್ಡಿ ಅವರಿಗೆ ರಂಗನಾಯಕುಲ ಮಂಟಪದಲ್ಲಿ ಹಸ್ತಾಂತರಿಸಿದರು.

4.7 / 5. 3

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

ನಿಮ್ಮ ಕಾಮೆಂಟ್ ಬರೆಯಿರಿ

advertisement