ವೀಡಿಯೊ..| ಖ್ಯಾತಿ ಪಡೆಯಲು ಜೀವಂತ ನಾಗರ ಹಾವಿನ ತಲೆ ಬಾಯಿಯೊಳಗೆ ಇಟ್ಟು ವೀಡಿಯೊ ಮಾಡಿದ ವ್ಯಕ್ತಿಯ ಪ್ರಾಣವೇ ಹೋಯ್ತು…!

ವೀಡಿಯೊ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿ ಖ್ಯಾತಿಗಳಿಸಲು ನಾಗರ ಹಾವಿನ ತಲೆಯನ್ನು ಬಾಯಿಗೆ ಹಾಕಿಕೊಂಡ ವ್ಯಕ್ತಿಯೊಬ್ಬ ಈ ದುಸ್ಸಾಹಸದ ವೇಳೆ ಸಾವಿಗೀಡಾಗಿದ್ದಾನೆ. ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯನ್ನು 20 ವರ್ಷದ ಶಿವರಾಜ ಎಂದು ಗುರುತಿಸಲಾಗಿದೆ. ಈಗ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಶಿವರಾಜ ರಸ್ತೆಯ ಮಧ್ಯದಲ್ಲಿ ನಿಂತು ನಾಗರಹಾವನ್ನು ಬಾಯಿಗೆ … Continued

ಹಾವು ಹಿಡಿಯುವವನನ್ನು ಕಚ್ಚಿದ ನಂತರ ಸತ್ತು ಹೋದ ಕಾಳಿಂಗ ಸರ್ಪ…! ಹಾವು ಸತ್ತಿದ್ದು ನಿಜ, ಆದ್ರೆ ಅಸಲಿಯತ್ತೇನು..?

ಹಾವುಗಳು ವಿಶ್ವದ ಅತ್ಯಂತ ಅಪಾಯಕಾರಿ ಸರೀಸೃಪಗಳಲ್ಲಿ ಒಂದಾಗಿದೆ. ಅನೇಕ ವಿಷಪೂರಿತ ಹಾವುಗಳು ಯಾವುದೇ ಜೀವಿಗಳನ್ನು ಒಂದೇ ಕಡಿತದಿಂದ ಸಾಯಿಸುವಷ್ಟು ಸಾಂರ್ಥ್ಯ ಹೊಂದಿವೆ. ಅತ್ಯಂತ ವಿಷಪೂರಿತ ಹಾವುಗಳಲ್ಲಿ ಕಾಳಿಂಗ ಸರ್ಪ ಸಹ ಒಂದಾಗಿದೆ. ಅದರ ವಿಷದ ಒಂದು ಅಥವಾ ಎರಡು ಹನಿಗಳು ವಯಸ್ಕ ಮನುಷ್ಯನನ್ನು ಕೆಲವೇ ಕ್ಷಣಗಳಲ್ಲಿ ಸಾಯಿಸಬಹುದಾಗಿದೆ. ಆದರೆ ಕಾಳಿಂಗ ಸರ್ಪ ಯಾರನ್ನಾದರೂ ಕಚ್ಚಿದ ನಂತರ … Continued

ಮೈ ಜುಂ ಎನ್ನುವ ವೀಡಿಯೊ..| ಮಧ್ಯಪ್ರದೇಶದಲ್ಲಿ ವ್ಯಕ್ತಿಯನ್ನು ಜೀವಂತವಾಗಿ ನುಂಗಲು ಯತ್ನಿಸಿದ 15 ಅಡಿ ಹೆಬ್ಬಾವು…

ಮಧ್ಯಪ್ರದೇಶದ ಜಬಲ್‌ಪುರದ ಕಲ್ಯಾಣಪುರ ಪ್ರದೇಶದಲ್ಲಿ 15 ಅಡಿ ಉದ್ದದ ಹೆಬ್ಬಾವಿನ ದಾಳಿಯಿಂದ ವ್ಯಕ್ತಿಯೊಬ್ಬರು ಸ್ವಲ್ಪದರಲ್ಲೇ ಬದುಕುಳಿದಿದ್ದಾರೆ. ಕ್ಯಾಮೆರಾದಲ್ಲಿ ಸೆರೆಯಾದ ಭಯಾನಕ ಘಟನೆಯಲ್ಲಿ ತೆರೆದ ಮೈದಾನದಲ್ಲಿ ಮಲವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿದ ಹೆಬ್ಬಾವು ವ್ಯಕ್ತಿಯ ಕುತ್ತಿಗೆಗೆ ಬಲವಾಗಿ ಸುತ್ತು ಹಾಕಿ ಹಿಡಿದುಕೊಂಡಿದೆ. ಸಕಾಲದಲ್ಲಿ ನೆರವಿಗೆ ಬಂದ ಗ್ರಾಮಸ್ಥರಿಂದ ವ್ಯಕ್ತಿಯ ಜೀವ ಉಳಿದಿದೆ. ಇಂಡಿಯಾ ಟುಡೇ … Continued

ಮಾರಣಾಂತಿಕ ಹಾವಿನ ವಿರುದ್ಧ ಹೋರಾಡಿ ಹಾವಿನ ಬಾಯಿಂದ ತನ್ನ ಮರಿಯನ್ನು ರಕ್ಷಿಸಿದ ಧೈರ್ಯಶಾಲಿ ತಾಯಿ ಇಲಿ | ವೀಕ್ಷಿಸಿ

ತಾಯಿಯ ಪ್ರವೃತ್ತಿಯ ಹೃದಯಸ್ಪರ್ಶಿ ಮತ್ತು ಧೈರ್ಯದ ಪ್ರದರ್ಶನದಲ್ಲಿ, ನಿರ್ಭೀತ ತಾಯಿ ಇಲಿ ತನ್ನ ಅಸಹಾಯಕ ಮರಿ ಇಲಿಯನ್ನು ರಕ್ಷಿಸಲು ಹಾವಿನ ವಿರುದ್ಧ ನಡೆಸಿದ ಹೋರಾಟವನ್ನು ಸೆರೆಹಿಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಹಾವಿನ ಮಾರಣಾಂತಿಕ ಹಿಡಿತದಲ್ಲಿ ಪುಟ್ಟ ಇಲಿ ಮರಿಯೊಂದು ಸಿಕ್ಕಿಹಾಕಿಕೊಂಡ ನಾಟಕೀಯ ದೃಶ್ಯವನ್ನು ವೀಡಿಯೊ ಚಿತ್ರಿಸುತ್ತದೆ. ಇಂತಹ ಅಪಾಯದ ಸ್ಥಿತಿಯಲ್ಲಿಯೂ ಎದೆಗುಂದದ ತಾಯಿ ಇಲಿ … Continued

ತನಗಿಂತ ಹತ್ತಿಪ್ಪತ್ತು ಪಟ್ಟು ದೊಡ್ಡ ಹಾವಿನ ಜೊತೆ ಹೋರಾಡಿ ಜೀವ ಉಳಿಸಿಕೊಂಡ ಪುಟ್ಟ ಕಪ್ಪೆಯ ರೋಚಕ ವೀಡಿಯೋ ನೋಡಿ

ವಿಶ್ವಾಸ, ಧೈರ್ಯ ಹಾಗೂ ಪ್ರಯತ್ನದಿಂದ ಎಂಥ ಸವಾಲನ್ನೂ ಎದುರಿಸಬಹುದು ಎಂಬುದನ್ನು ಪುಟ್ಟ ಕಪ್ಪೆಯೊಂದು ಮಾಡಿ ತೋರಿಸಿದೆ. ಈ ಪುಟ್ಟ ಕಪ್ಪೆ ಮಾರುದ್ದ ಹಾವಿನ ವಿರುದ್ಧ ಸತತ ಹೋರಾಟದ ಫಲವಾಗಿ ಸಾವಿನ ದವಡೆಯಲ್ಲಿದ್ದ ತನ್ನ ಪ್ರಾಣ ಉಳಿಸಿಕೊಂಡಿದೆ. ಆ ವೀಡಿಯೊದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತನಗಿಂತ ಹತ್ತಿಪ್ಪತ್ತು ಪಟ್ಟು ದೊಡ್ಡದಾದ ಮತ್ತು ಬಲಶಾಲಿಯಾದ ಹಾವಿನ ಬಾಯಿಗೆ … Continued