ಭಾರೀ ಮಳೆಯಿಂದಾಗಿ ಅಮರನಾಥ ಮಾರ್ಗ ಮಧ್ಯೆ ಗುಡ್ಡ ಕುಸಿತ : ಸಂಕಷ್ಟದಲ್ಲಿ ಸಿಲುಕಿರುವ 80 ಕನ್ನಡಿಗರ ರಕ್ಷಣೆಗೆ ಸಿಎಂ ಸೂಚನೆ

ಬೆಂಗಳೂರು : ಅಮರನಾಥ ಯಾತ್ರೆಗೆ ತೆರಳುವ ಮಾರ್ಗ ಮಧ್ಯೆ ಭಾರಿ ಮಳೆಯಿಂದಾಗಿ ಗುಡ್ಡ ಕುಸಿತ ಉಂಟಾಗಿದ್ದು, ಕರ್ನಾಟಕದ ಸುಮಾರು 80 ಯಾತ್ರಾರ್ಥಿಗಳು ಮಾರ್ಗ ಮಧ್ಯೆ ಸಿಲುಕಿದ್ದಾರೆ. ತಮ್ಮನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಊರಿಗೆ ತೆರಳಲು ವ್ಯವಸ್ಥೆ ಮಾಡುವಂತೆ ವೀಡಿಯೊ ಮೂಲಕ ಪ್ರಧಾನಿ ಮೋದಿಗೆ ಅವರು ಮನವಿ ಮಾಡಿದ್ದಾರೆ. ಗದಗ ಜಿಲ್ಲೆಯ ವಿವಿಧ ಗ್ರಾಮಗಳು ಸೇರಿದಂತೆ ಕಾರ್ನಟಕದ … Continued

ವೀಡಿಯೊ | ಭಾರೀ ಮಳೆಗೆ ಭೂಕುಸಿತದ ವೇಳೆ ಬೃಹತ್ ಬಂಡೆ ಅಪ್ಪಳಿಸಿ ಕಾರುಗಳು ಪುಡಿಪುಡಿ : ಇಬ್ಬರು ಸಾವು, ಮೂವರಿಗೆ ಗಾಯ

ಕೊಹಿಮಾ-ದಿಮಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ ಸಂದರ್ಭದಲ್ಲಿ ಬೃಹತ್ ಬಂಡೆಗಳು ಉರುಳಿ ಮೂರು ಕಾರುಗಳನ್ನು ಜಖಂಗೊಳಿಸಿವೆ. ಪೊಲೀಸ್ ಚೆಕ್‌ಪೋಸ್ಟ್ ಬಳಿಯ ಚುಮೌಕೆಡಿಮಾದಲ್ಲಿ ಈ ಘಟನೆ ನಡೆದಿದ್ದು ಘಟನೆಯಲ್ಲಿ ಕನಿಷ್ಠ ಇಬ್ಬರು ಸಾವಿಗೀಡಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಘಟನೆಯ ವೈರಲ್ ವೀಡಿಯೊದಲ್ಲಿ ಬೃಹತ್ ಬಂಡೆಯು ಒಂದರ ನಂತರ ಒಂದರಂತೆ ಎರಡು ಕಾರುಗಳಿಗೆ ಅಪ್ಪಳಿಸುವುದನ್ನು ತೋರಿಸುತ್ತದೆ. … Continued

ಕುಮಟಾ: ತಂಡ್ರಕುಳಿಯ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಗುಡ್ಡ ಕುಸಿತ: ಮನೆಗೆ ಹಾನಿ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾದಿಂದ 10 ಕಿಮೀ ದೂರದ ತಂಡ್ರಕುಳೀಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಹೆದ್ದಾರಿ ಪಕ್ಕದ ಗುಡ್ಡ ಕುಸಿದಿದೆ. ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ಗುಡ್ಡ ಕುಸಿದು ಬೃಹತ್‌ ಬಂಡೆಗಲ್ಲು ರಾಷ್ಟ್ರೀಯ ಹೆದ್ದಾರಿಯ ಕೆಳಗೇ ಇರುವ ಗಣೇಶ ತುಳಸು ಅಂಬಿಗ ಎಂಬವರ ಮನೆಗೆ … Continued

ಕೊಡಗಿನಲ್ಲಿ ಬೆಟ್ಟ ಕುಸಿತದ ಆತಂಕ: 80 ಕುಟುಂಬಗಳ ಸ್ಥಳಾಂತರ

ಕೊಡಗು: ಕೊಡಗಿನಲ್ಲಿ ಧಾರಾಕಾರ ಮಳೆಯಿಂದಾಗಿ ಬೆಟ್ಟ ಕುಸಿತದ ಆತಂಕ ಎದುರಾಗಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ 80 ಕುಟುಂಬಗಳ 221 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಅಯ್ಯಪ್ಪ ಬೆಟ್ಟ ಹಾಗೂ ಮಲೆತಿರಿಕೆ ಬೆಟ್ಟಗಳ ಬುಡದಲ್ಲಿ ವಾಸಿಸುತ್ತಿರುವ ಸುಮಾರು 80 ಕುಟುಂಬಗಳ 221 ಮಂದಿಯನ್ನು ಅವರ ವಾಸಸ್ಥಾನಗಳಿಂದ ವಿರಾಜಪೇಟೆಯ ಸಂತ ಅನ್ನಮ್ಮ ಶಾಲೆಯಲ್ಲಿನ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗಿದೆ. ನಿರಂತರ … Continued

ಹಿಮಾಚಲ ಪ್ರದೇಶ ಕಿನ್ನೌರ್​ನಲ್ಲಿ ಭೂ ಕುಸಿತ; ಅವಶೇಷಗಳ ಅಡಿಯಲ್ಲಿ 40 ಜನ ಪ್ರಯಾಣಿಕರಿದ್ದ ಬಸ್

ಹಿಮಾಚಲ ಪ್ರದೇಶದ ಕಿನ್ನೌರ್​ನಲ್ಲಿ ಭಾರೀ ಭೂ ಕುಸಿತ ಸಂಭವಿಸಿದೆ. 40 ಪ್ರಯಾಣಿಕರು ಹೊತ್ತೊಯ್ಯುತ್ತಿದ್ದ ಬಸ್​ ಸಂಚಾರ ನಡೆಸುವಾಗ ಈ ಅವಘಡ ನಡೆದಿದ್ದು, ಪ್ರಾಯಾಣಿಕರು ಅವಶೇಷಗಳ ಅಡಿ ಸಿಲುಕಿರಬಹುದು ಎಂದು ಶಂಕಿಸಲಾಗಿದೆ. ಜನರ ರಕ್ಷಣಾ ಕಾರ್ಯಾಚರಣೆಗೆ ಪೊಲೀಸರೊಂದಿಗೆ ಸ್ಥಳೀಯ ಆಡಳಿತ ಕೂಡ ಮುಂದಾಗಿದ್ದು, ಎನ್​ಡಿ ಆರ್​ಎಫ್​ ಗೆ ಕೂಡ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಅವಘಡದಲ್ಲಿ … Continued

ಇಂಡೋನೇಷ್ಯಾದಲ್ಲಿ ಭೂ ಕುಸಿತ: ೨೩ ಜನರ ಸಾವು

ಜಕಾರ್ತಾ: ಪೂರ್ವ ಇಂಡೋನೇಷ್ಯಾದಲ್ಲಿ ಭಾರಿ ಮಳೆಯಿಂದಾಗಿ ಉಂಟಾದ ಭೂ ಕುಸಿತದಿಂದಾಗಿ ೨೩ ಜನರು ಸಾವಿಗೀಡಾಗಿದ್ದಾರೆ. ಪೂರ್ವ ನುಸಾ ತೆಂಗರಾ ಪ್ರಾಂತದ ಫ್ಲೋರ್ಸ್‌ ದ್ವೀಪದಲ್ಲಿರುವ ಲ್ಯಾಮೆನೆಲೆ ಗ್ರಾಮದಲ್ಲಿ ಶನಿವಾರ ಮಧ್ಯರಾತ್ರಿ ಭೂ ಕುಸಿತ ಉಂಟಾಗಿದೆ. ಸುಮಾರು ೫೦ ಮನೆಗಳಿಗೆ ಹಾನಿಯಾಗಿದೆ. ಓಯಾಂಗ್‌ ಬಯಾಂಗ್‌ ಗ್ರಾಮದ ಮನೆಗಳ ಅವಶೇಷಗಳಡಿಯಲ್ಲಿ ಸಿಲುಕಿದ್ದ ೨೦ ಶವಗಳನ್ನು ಹೊರತೆಗೆಯಲಾಗಿದೆ. ೯ ಜನರು ಗಾಯಗೊಂಡಿದ್ದಾರೆ. … Continued