ವೀಡಿಯೊ..| ಆಘಾತಕಾರಿ ಘಟನೆ ; ಫುಟ್ಬಾಲ್ ಪಂದ್ಯ ನಡೆಯುತ್ತಿದ್ದಾಗಲೇ ಸಿಡಿಲು ಬಡಿದು ಆಟಗಾರ ಸಾವು

ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯ ನಡೆಯುತ್ತಿದ್ದಾಗಲೇ ಸಿಡಿಲು ಬಡಿದು ಆಟಗಾರ ಸಾವಿಗೀಡಾದ ಆಘಾತಕಾರಿ ಘಟನೆ ನಡೆದಿದೆ. ಇಂಡೋನೇಷ್ಯಾದಲ್ಲಿ ಈ ಆಘಾತಕಾರಿ ಘಟನೆ ಸಂಭವಿಸಿದ್ದು, ಕಳೆದ ಶನಿವಾರ ಮಧ್ಯಾಹ್ನ ಫುಟ್ಬಾಲ್ ಪಂದ್ಯ ನಡೆಯುತ್ತಿದ್ದ ವೇಳೆ ಸಿಡಿಲು ಬಡಿದು ಫುಟ್ಬಾಲ್ ಆಟಗಾರ ಕ್ರೀಡಾಂಗಣದಲ್ಲೇ ಮೃತಪಟ್ಟಿದ್ದಾನೆ. ಇಂಡೋನೇಷ್ಯಾದ 2 FLO FC ಬಂಡಂಗ್ ಮತ್ತು FBI ಸುಬಾಂಗ್ ನಡುವಿನ ಫುಟ್ಬಾಲ್ ಪಂದ್ಯದ … Continued

ಕೆಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಏರಿಕೆ : ವಿಮಾನ ನಿಲ್ದಾಣಗಳಲ್ಲಿ ಮತ್ತೆ ಮಾಸ್ಕ್ ಕಡ್ಡಾಯ….!

ಇತ್ತೀಚಿನ ವಾರಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳ ತ್ವರಿತ ಹೆಚ್ಚಳದ ಮಧ್ಯೆ ವಿವಿಧ ಆಗ್ನೇಯ ಏಷ್ಯಾದ ದೇಶಗಳು ಮತ್ತೆ ನಿರ್ಬಂಧಗಳನ್ನು ವಿಧಿಸಿವೆ ಮತ್ತು ಮುಖದ ಮಾಸ್ಕ್ ಅನ್ನು ಕಡ್ಡಾಯಗೊಳಿಸಿವೆ ಎಂದು ವರದಿಯಾಗಿದೆ. ಈ ದೇಶಗಳಲ್ಲಿನ ಅಂತಾರಾಷ್ಟ್ರೀಯ ಪ್ರಯಾಣಿಕರು ಮತ್ತು ಸ್ಥಳೀಯರಿಗೆ ಮತ್ತೆ ವಿಮಾನ ನಿಲ್ದಾಣದಲ್ಲಿ ಮಾಸ್ಕ್‌ ಗಳನ್ನು ಧರಿಸಲು ಸೂಚಿಸಲಾಗಿದೆ. ಕಠಿಣ ಕ್ರಮಗಳ ಭಾಗವಾಗಿ, ವಿಮಾನ ನಿಲ್ದಾಣಗಳಲ್ಲಿ … Continued

ಹಿಜಾಬ್‌ ಸರಿಯಾಗಿ ಧರಿಸಿಲ್ಲವೆಂದು 14 ವಿದ್ಯಾರ್ಥಿನಿಯರ ತಲೆ ಬೋಳಿಸಿದ ಶಿಕ್ಷಕಿ…!

ಇಂಡೋನೇಷ್ಯಾದ ಮುಖ್ಯ ದ್ವೀಪದಲ್ಲಿರುವ ಶಾಲೆಯೊಂದು 14 ಬಾಲಕಿಯರ ತಲೆಯನ್ನು ಭಾಗಶಃ ಬೋಳಿಸುವ ಮೂಲಕ ವಿವಾದವನ್ನು ಸೃಷ್ಟಿಸಿದೆ. ಈ ವಿದ್ಯಾರ್ಥಿಗಳು ಹಿಜಾಬ್ (ಶಿರಸ್ತ್ರಾಣವನ್ನು) ಸರಿಯಾಗಿ ಧರಿಸಲಿಲ್ಲ ಎಂಬ ಕಾರಣಕ್ಕೆ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ. 27 ಕೋಟಿ ಜನರಿರುವ ದ್ವೀಪಸಮೂಹದ ರಾಷ್ಟ್ರವಾದ ಇಂಡೋನೇಶಿಯಾದ ಸಂಪ್ರದಾಯವಾದಿಗಳು ಹೆಚ್ಚಿನ ಸಂಖ್ಯೆಗಳಲ್ಲಿರುವ ಭಾಗಗಳಲ್ಲಿ ಮುಸ್ಲಿಮ್ ಮತ್ತು … Continued

ಅಗ್ನಿ ಅವಘಡದಿಂದ ಮಸೀದಿಯ ದೈತ್ಯ ಗುಮ್ಮಟ ಕುಸಿತ: ಕುಸಿತದ ವೀಡಿಯೊ ವೈರಲ್

ಜಕಾರ್ತಾ: ಇಂಡೋನೇಷ್ಯಾದ ಜಕಾರ್ತಾ ಇಸ್ಲಾಮಿಕ್ ಸೆಂಟರ್ ಗ್ರ್ಯಾಂಡ್ ಮಸೀದಿಯ ದೈತ್ಯ ಗುಮ್ಮಟವು ಬುಧವಾರ ದೊಡ್ಡ ಬೆಂಕಿಯ ನಂತರ ಕುಸಿದಿದೆ. ಸಾಮಾಜಿಕ ಮಾಧ್ಯಮದ ದೃಶ್ಯಾವಳಿಗಳು ಮಸೀದಿಯ ಬೃಹತ್‌ ಗುಮ್ಮಟ ಕುಸಿದ ಕ್ಷಣವನ್ನು ತೋರಿಸಿದೆ, ಆದಾಗ್ಯೂ, ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಗಲ್ಫ್ ಟುಡೇ ವರದಿ ಮಾಡಿದೆ. ಅದರ ನವೀಕರಣದ ಸಮಯದಲ್ಲಿ ಗುಮ್ಮಟವು ಬೆಂಕಿ … Continued

ಫುಟ್ಬಾಲ್ ಪಂದ್ಯದ ವೇಳೆ ದೊಂಬಿ ನಂತರ ಕಾಲ್ತುಳಿತದಲ್ಲಿ 129 ಮಂದಿ ಸಾವು, ನೂರಾರು ಜನರಿಗೆ ಗಾಯ

ಜಕಾರ್ತಾ: ಇಂಡೋನೇಷ್ಯಾದ ಪೂರ್ವ ಜಾವಾ ಪ್ರಾಂತ್ಯದಲ್ಲಿ ರಾತ್ರಿಯಿಡೀ ನಡೆದ ಗಲಭೆಯಲ್ಲಿ ಜನಸಂದಣಿಯಲ್ಲಿ ಕಾಲ್ತುಳಿತದ ನಂತರ ಕನಿಷ್ಠ 129 ಜನರು ಸಾವಿಗೀಡಾಗಿದ್ದಾರೆ ಮತ್ತು 180 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ಪೂರ್ವ ಜಾವಾದ ಮಲಾಂಗ್ ರೀಜೆನ್ಸಿಯಲ್ಲಿ ನಡೆದ ಪಂದ್ಯದಲ್ಲಿ ಅರೆಮಾ ತಂಡ ಸೋತ ನಂತರ ಜಾವಾನೀಸ್ ಕ್ಲಬ್‌ಗಳಾದ ಅರೆಮಾ ಮತ್ತು ಪರ್ಸೆಬಯಾ … Continued

ಇಂಡೋನೇಷ್ಯಾದಲ್ಲಿ ಭೂ ಕುಸಿತ: ೨೩ ಜನರ ಸಾವು

ಜಕಾರ್ತಾ: ಪೂರ್ವ ಇಂಡೋನೇಷ್ಯಾದಲ್ಲಿ ಭಾರಿ ಮಳೆಯಿಂದಾಗಿ ಉಂಟಾದ ಭೂ ಕುಸಿತದಿಂದಾಗಿ ೨೩ ಜನರು ಸಾವಿಗೀಡಾಗಿದ್ದಾರೆ. ಪೂರ್ವ ನುಸಾ ತೆಂಗರಾ ಪ್ರಾಂತದ ಫ್ಲೋರ್ಸ್‌ ದ್ವೀಪದಲ್ಲಿರುವ ಲ್ಯಾಮೆನೆಲೆ ಗ್ರಾಮದಲ್ಲಿ ಶನಿವಾರ ಮಧ್ಯರಾತ್ರಿ ಭೂ ಕುಸಿತ ಉಂಟಾಗಿದೆ. ಸುಮಾರು ೫೦ ಮನೆಗಳಿಗೆ ಹಾನಿಯಾಗಿದೆ. ಓಯಾಂಗ್‌ ಬಯಾಂಗ್‌ ಗ್ರಾಮದ ಮನೆಗಳ ಅವಶೇಷಗಳಡಿಯಲ್ಲಿ ಸಿಲುಕಿದ್ದ ೨೦ ಶವಗಳನ್ನು ಹೊರತೆಗೆಯಲಾಗಿದೆ. ೯ ಜನರು ಗಾಯಗೊಂಡಿದ್ದಾರೆ. … Continued