ಇಂಡೋನೇಷ್ಯಾದ 1000 ವರ್ಷಗಳ ಹಿಂದಿನ ಶಿವ ದೇವಾಲಯದ ಪುನರುಜ್ಜೀವನಕ್ಕೆ ಭಾರತದ ನೆರವು ಘೋಷಿಸಿದ ಮೋದಿ; ಈ ದೇಗುಲದ ಮಹತ್ವವೇನು?

ನವದೆಹಲಿ/ಜಕಾರ್ತಾ : ಪ್ರಧಾನಿ ನರೇಂದ್ರ ಮೋದಿ ಅವರ ಇಂಡೋನೇಷ್ಯಾದ ಮೂರು ದಿನಗಳ ಅಧಿಕೃತ ಭೇಟಿ ಹಲವು ಮಹತ್ವದ ಫಲಿತಾಂಶಗಳನ್ನು ನೀಡಿದ್ದು, ರಕ್ಷಣೆ, ಸಾಗರ ಸಹಕಾರ, ಅಪರೂಪದ ಖನಿಜಗಳು, ತಂತ್ರಜ್ಞಾನ, ಡಿಜಿಟಲ್ ಪಾವತಿ ವ್ಯವಸ್ಥೆ ಹಾಗೂ ಶಿಕ್ಷಣ ಸೇರಿದಂತೆ 20ಕ್ಕೂ ಹೆಚ್ಚು ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಿವೆ. ಈ ಮಹತ್ವದ ಒಪ್ಪಂದಗಳ ನಡುವೆ ವಿಶೇಷ ಸಾಂಸ್ಕೃತಿಕ … Continued

ದೇಗುಲದ ಹಣ ದೇಗುಲಕ್ಕೇ ಬಳಕೆ: ಸರ್ಕಾರದಿಂದ ದೇವಸ್ಥಾನದಲ್ಲಿ ಬೋರ್ಡ್‌ ಅಳವಡಿಕೆ

ಬೆಂಗಳೂರು: “ಈ ದೇವಸ್ಥಾನದ (Hindu Temple) ಹಣವನ್ನು ಈ ದೇವಸ್ಥಾನದ ಅಭಿವೃದ್ಧಿಗೇ ಬಳಸುತ್ತೇವೆ. ಅನ್ಯ ಉದ್ದೇಶಕ್ಕೆ ಬಳಸುವುದಿಲ್ಲ” ಎಂದು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಎದ್ದು ಕಾಣುವಂತೆ ದೇವಸ್ಥಾನದಲ್ಲಿ ಬೋರ್ಡ್‌ ಹಾಕಲು ಮುಜರಾಯಿ ಇಲಾಖೆ (Muzrai Department) ಮುಂದಾಗಿದೆ. ಮುಜರಾಯಿ ದೇವಸ್ಥಾನದಲ್ಲಿ ಭಕ್ತರು ಸಲ್ಲಿಸುವ ಕಾಣಿಕೆಯ ಹಣವನ್ನು ಅನ್ಯ ಧರ್ಮದ ಪವಿತ್ರ ಸ್ಥಳಗಳಿಗೆ ಬಳಕೆ ಮಡಲಾಗುತ್ತಿದೆ ಎಂಬ … Continued

ಬ್ರಾಂಪ್ಟನ್ ಹಿಂದೂ ದೇವಾಲಯದ ಮೇಲೆ ಖಲಿಸ್ತಾನಿಗಳ ದಾಳಿ ಪ್ರಕರಣ ; ಕೆನಡಾ ಪೊಲೀಸರಿಂದ ಮತ್ತೊಬ್ಬನ ಬಂಧನ

ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ದೇವಾಲಯದ ಮೇಲೆ ಖಲಿಸ್ತಾನಿಗಳು ನಡೆಸಿದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಲ್ ಪ್ರಾದೇಶಿಕ ಪೊಲೀಸರು ಮತ್ತೊಬ್ಬನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಬ್ರಾಂಪ್ಟನ್‌ನ ಇಂದರ್‌ಜೀತ್ ಗೋಸಲ್ (35) ಎಂದು ಗುರುತಿಸಲಾಗಿದ್ದು, ಆತನ ಮೇಲೆ ಆಯುಧದಿಂದ ಹಲ್ಲೆ ನಡೆಸಿದ ಆರೋಪ ಹೊರಿಸಲಾಗಿದೆ. ಕಳೆದ ವಾರ, ಬ್ರಾಂಪ್ಟನ್‌ನ ಹಿಂದೂ ಮಂದಿರದಲ್ಲಿ ಭಾರತೀಯ ಅಧಿಕಾರಿಗಳು ಭಾಗವಹಿಸಿದ್ದ ದೂತಾವಾಸ ಕಾರ್ಯಕ್ರಮಕ್ಕೆ ಖಲಿಸ್ತಾನವನ್ನು … Continued

ಹಿಂದೂ ದೇವಾಲಯದ ಹೊರಗೆ ಖಲಿಸ್ತಾನಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೆನಡಾ ಪೋಲೀಸ್‌ ಅಮಾನತು

ಬ್ರಾಂಪ್ಟನ್‌ನ ಹಿಂದೂ ಸಭಾ ಮಂದಿರದಲ್ಲಿ ಭಕ್ತರ ಮೇಲೆ ದಾಳಿ ನಡೆಸಿದ ಖಲಿಸ್ತಾನಿ ಪರ ಗುಂಪುಗಳ ಜೊತೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೆನಡಾದ ಪೋಲೀಸರನ್ನು ಸೋಮವಾರ ಅಮಾನತುಗೊಳಿಸಲಾಗಿದೆ. ಹರಿಂದರ್ ಸೋಹಿ ಎಂದು ಗುರುತಿಸಲಾದ ಅಮಾನತುಗೊಂಡ ಪೋಲೀಸ್ ಆಗಿದ್ದಾನೆ. ಪ್ರತಿಭಟನೆಯಲ್ಲಿ ಇತರರು ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದಾಗ ಈತ ಖಲಿಸ್ತಾನ್ ಧ್ವಜವನ್ನು ಹಿಡಿದಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಅವರು ಪೀಲ್ ಪ್ರಾದೇಶಿಕ … Continued

ವೀಡಿಯೊ..| ಕೆನಡಾದ ಹಿಂದೂ ದೇವಾಲಯದಲ್ಲಿ ಭಕ್ತರ ಮೇಲೆ ದೊಣ್ಣೆಗಳಿಂದ ದಾಳಿ ನಡೆಸಿದ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳು

ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ದೇವಾಲಯವೊಂದರಲ್ಲಿ ಖಾಲಿಸ್ತಾನಿ ಪ್ರತ್ಯೇಕವಾದಿಗಳ ಗುಂಪೊಂದು ಭಾನುವಾರ ಭಕ್ತರ ಮೇಲೆ ಹಲ್ಲೆ ನಡೆಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋಗಳಲ್ಲಿ, ಹಿಂದೂ ಸಭಾ ಮಂದಿರದ ಹೊರಗೆ ಖಲಿಸ್ತಾನಿ ಧ್ವಜಗಳನ್ನು ಹಿಡಿದಿರುವ ವ್ಯಕ್ತಿಗಳ ಗುಂಪೊಂದು ದೊಣ್ಣೆಗಳಿಂದ ಜನರನ್ನು ಥಳಿಸುತ್ತಿರುವುದನ್ನು ಕಾಣಬಹುದು. ಹಿಂಸಾಚಾರವನ್ನು ಖಂಡಿಸಿದ ಕೆನಡಾದ ಸಂಸತ್ ಸದಸ್ಯ ಚಂದ್ರ ಆರ್ಯ ಅವರು ಖಲಿಸ್ತಾನಿಗಳು “ಕೆಂಪು ಗೆರೆಯನ್ನು … Continued

ಹಿಂದೂ ಧಾರ್ಮಿಕ ದತ್ತಿ ತಿದ್ದುಪಡಿ ವಿಧೇಯಕ ವಿಧಾನ ಪರಿಷತ್‌ನಲ್ಲಿ ತಿರಸ್ಕೃತ; ಸರ್ಕಾರಕ್ಕೆ ಭಾರೀ ಮುಖಭಂಗ

ಬೆಂಗಳೂರು : ಪ್ರತಿಪಕ್ಷಗಳ ಭಾರೀ ವಿರೋಧದ ನಡುವೆ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕ-2024 ಅನ್ನು ವಿಧಾನ ಪರಿಷತ್​ನಲ್ಲಿ ಶುಕ್ರವಾರ ತಿರಸ್ಕರಿಸಲಾಗಿದೆ. ಇದರಿಂದ ಕಾಂಗ್ರೆಸ್ ಸರ್ಕಾರಕ್ಕೆ ಮುಖಭಂಗವಾಗಿದೆ. ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆಯನ್ನು ವಿಧಾನ ಪರಿಷತ್‌ನಲ್ಲಿ … Continued

ಧಾರ್ಮಿಕ ದತ್ತಿ ವಿಧೇಯಕ ಅಂಗೀಕಾರ, ದೇವಸ್ಥಾನದ ಆದಾಯದ ಶೇ.10 ರಷ್ಟು ಹಣ ಸರ್ಕಾರಕ್ಕೆ

ಬೆಂಗಳೂರು : ಹಿಂದು ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿ ವಿಧೇಯಕ ವಿಧಾನಸಭೆಯಲ್ಲಿ ಬುಧವಾರ ಅಂಗೀಕಾರಗೊಂಡಿದೆ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮದಾಯ ದತ್ತಿಗಳ ವಿಧೇಯಕದಲ್ಲಿ ಬದಲಾವಣೆ ಮಾಡಲಾಗಿದೆ. ವಿಧೇಯಕದಲ್ಲಿ ಸರ್ಕಾರದ ಮುಜರಾಯಿ ಇಲಾಖೆಗೆ ದೇವಸ್ಥಾನಗಳು ನೀಡುತ್ತಿದ್ದ ಆದಾಯದ ಹಣವನ್ನು ದ್ವಿಗುಣಗೊಳಿಸಲಾಗಿದೆ. ಇನ್ನು ಮುಂದೆ 10 ಲಕ್ಷ ರೂ.ಗಳಿಂದ 1 ಕೋಟಿ ರೂ.ಗಳ ವರೆಗಿನ … Continued

ವೀಡಿಯೊಗಳು…| ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯ ಉದ್ಘಾಟಿಸಿದ ಮೋದಿ : ‘ಯುಎಇ 140 ಕೋಟಿ ಭಾರತೀಯರ ಹೃದಯ ಗೆದ್ದಿದೆ’ ಎಂದ ಭಾರತದ ಪ್ರಧಾನಿ

ಅಬುಧಾಬಿ : ಯುನೈಟೆಡ್‌ ಅರಬ್‌ ಎಮಿರೇಟ್ಸ್‌(ಯುಎಇ) ಅಬುಧಾಬಿಯಲ್ಲಿ ಬೋಚಸನ್‌ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (ಬಿಎಪಿಎಸ್) ಸೊಸೈಟಿ ನಿರ್ಮಿಸಿರುವ ವಿಸ್ತಾರವಾದ ಹಿಂದೂ ದೇವಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಿದರು. ಪ್ರಧಾನಿ ಮೋದಿ ಕೂಡ ಅರ್ಚಕರೊಂದಿಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಉದ್ಘಾಟನೆಯ ನಂತರ, ಪ್ರಧಾನಿ ಮೋದಿ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅವರಿಗೆ … Continued

ಫೆಬ್ರವರಿ 14 ರಂದು ಯುಎಇನಲ್ಲಿ ಮೊದಲ ಹಿಂದೂ ದೇವಾಲಯ ಉದ್ಘಾಟಿಸಲಿರುವ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 13 ರಿಂದ 14 ರ ವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಅಧಿಕೃತವಾಗಿ ಭೇಟಿ ನೀಡಲಿದ್ದಾರೆ, ಅವರು ಅಬುಧಾಬಿಯಲ್ಲಿ ದೇಶದ ಮೊದಲ ಹಿಂದೂ ದೇವಾಲಯವನ್ನು ಉದ್ಘಾಟಿಸಲಿದ್ದಾರೆ. ಫೆಬ್ರವರಿ 14 ರಂದು ಸ್ವಾಮಿ ಈಶ್ವರಚರಣದಾs ಮತ್ತು ಸ್ವಾಮಿ ಬ್ರಹ್ಮವಿಹಾರಿದಾs ಅವರ ನಿರ್ದೇಶನದ ಮೇರೆಗೆ ಪ್ರಧಾನಿ ಮೋದಿ ಅವರು … Continued

ಕೋರ್ಟ್‌ ಆದೇಶದ ಬೆನ್ನಲ್ಲೇ ಕಾಶಿ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ನಡೆದ ಪೂಜೆ, ಆರತಿ

ವಾರಾಣಸಿ: ವಾರಾಣಸಿ ಜಿಲ್ಲಾ ನ್ಯಾಯಾಲಯ ನೀಡಿದ ಆದೇಶದ ಮೇರೆಗೆ ಕಾಶಿಯ ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಬುಧವಾರ (ಜನವರಿ 31) ರಾತ್ರಿ ಪೂಜೆ ಸಲ್ಲಿಸಲಾಯಿತು ಎಂದು ಕಾಶಿ ವಿಶ್ವನಾಥ ದೇವಸ್ಥಾನದ ಟ್ರಸ್ಟ್‌ ಅಧ್ಯಕ್ಷ ನಾಗೇಂದ್ರ ಪಾಂಡೆ ತಿಳಿಸಿದ್ದಾರೆ. ವಿವಾದಿತ ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿರುವ ವಿಗ್ರಹಗಳಿಗೆ ಅರ್ಚಕರು ಪೂಜೆ ಸಲ್ಲಿಸಬಹುದು ಎಂದು ವಾರಾಣಸಿ ಜಿಲ್ಲಾ ನ್ಯಾಯಾಲಯ ಬುಧವಾರ (ಜನವರಿ … Continued