ಹಿಮಾಚಲ ಪ್ರದೇಶ ಕಿನ್ನೌರ್​ನಲ್ಲಿ ಭೂ ಕುಸಿತ; ಅವಶೇಷಗಳ ಅಡಿಯಲ್ಲಿ 40 ಜನ ಪ್ರಯಾಣಿಕರಿದ್ದ ಬಸ್

ಹಿಮಾಚಲ ಪ್ರದೇಶದ ಕಿನ್ನೌರ್​ನಲ್ಲಿ ಭಾರೀ ಭೂ ಕುಸಿತ ಸಂಭವಿಸಿದೆ. 40 ಪ್ರಯಾಣಿಕರು ಹೊತ್ತೊಯ್ಯುತ್ತಿದ್ದ ಬಸ್​ ಸಂಚಾರ ನಡೆಸುವಾಗ ಈ ಅವಘಡ ನಡೆದಿದ್ದು, ಪ್ರಾಯಾಣಿಕರು ಅವಶೇಷಗಳ ಅಡಿ ಸಿಲುಕಿರಬಹುದು ಎಂದು ಶಂಕಿಸಲಾಗಿದೆ.
ಜನರ ರಕ್ಷಣಾ ಕಾರ್ಯಾಚರಣೆಗೆ ಪೊಲೀಸರೊಂದಿಗೆ ಸ್ಥಳೀಯ ಆಡಳಿತ ಕೂಡ ಮುಂದಾಗಿದ್ದು, ಎನ್​ಡಿ ಆರ್​ಎಫ್​ ಗೆ ಕೂಡ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಅವಘಡದಲ್ಲಿ ಬಸ್​ ಸೇರಿದಂತೆ ಕಾರೊಂದು ಸಿಲುಕಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಹೆಚ್ಚಿನ ಮಾತಿ ನಿರೀಕ್ಷೆಯಲ್ಲಿದ್ದೇವೆ ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್​ ಠಾಕೂರ್​ ತಿ​​ಳಿಸಿದ್ದಾರೆ.
ಕಿನ್ನೌರ್​ನ ರೆಕಾಂಗ್​ ಪಿಯೋ ಶಿಮ್ಲಾ ಹೆದ್ದಾರಿಯಲ್ಲಿ ಇಂದು(ಬುಧವಾರ) ಮಧ್ಯಾಹ್ನ 12. 45ರ ಸುಮಾರಿಗೆ ಈ ಭೂ ಕುಸಿತ ಸಂಭವಿಸಿದೆ. ಕಿನ್ನೌರ್ ನಿಂದ ಹರಿದ್ವಾರಕ್ಕೆ ಪ್ರಯಾಣಿಸುತ್ತಿದ್ದ ಹಿಮಾಚಲ ಪ್ರದೇಶದ ರಾಜ್ಯ ಸಾರಿಗೆ ಬಸ್‌ ಜೊತೆ ಇತರೆ ವಾಹನಗಳು ಕೂಡ ಅವಶೇಷಗಳ ಅಡಿ ಸಿಲುಕಿವೆ.ರಕ್ಷಣಾ ಕಾರ್ಯಚಾರಣೆ ತಂಡ ಬಸ್​ ಚಾಲಕ ಮತ್ತೊಬ್ಬ ವ್ಯಕ್ತಿಯನ್ನು ರಕ್ಷಿಸಿದ್ದು,, ಇತರರ ಪ್ರಾಣ ರಕ್ಷಣೆಗೆ ಮುಂದಾಗಿದ್ದಾರೆ. ಕಡಿದಾದ ಗುಡ್ಡದ ರಸ್ತೆಯಲ್ಲಿ ಭೂ ಕುಸಿತ ಸಂಭವಿಸಿದ್ದು ಕಲ್ಲುಗಳು ಬೀಳುತ್ತಿರುವುದು ರಕ್ಷಣಾ ಕಾರ್ಯಾಚಾರಣೆಗೆ ಅಡ್ಡಿಯಾಗಿದೆ.ಈ ರಕ್ಷಣಾ ಕಾರ್ಯಚಾರಣೆಗೆ ಇಂಡೋ ಟಿಬೆಟಿಯನ್​ ಗಡಿ ಪೊಲೀಸರನ್ನು (ಐಟಿಬಿಪಿ) ಕೂಡ ಕಳುಹಿಸಲಾಗಿದೆ.
ರಾಜ್ಯದ ಹಲವು ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಭೂ ಕುಸಿತವಾಗುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಭಾರೀ ಮಳೆಗೆ ಸಿಮೌರ್​ ಜಿಲ್ಲೆಯ 100 ಮೀ ರಸ್ತೆ ಸಂಪೂರ್ಣವಾಗಿ ಕುಸಿಯುತ್ತಿರುವ ವಿಡಿಯೋಗಳು ವೈರಲ್​ ಆಗಿದ್ದವು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : ಬಿಹಾರದಲ್ಲಿ ಎನ್‌ ಡಿ ಎ ಸೀಟು ಹಂಚಿಕೆ ಅಂತಿಮ ; ಈ ಬಾರಿ ಬಿಜೆಪಿಯೇ ದೊಡ್ಡಣ್ಣ...ಆ ಸ್ಥಾನ ಬಿಟ್ಟುಕೊಟ್ಟ ಜೆಡಿಯು...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement