ಟ್ವಿಶಾ ಶರ್ಮಾ ಸಾವಿನ ಪ್ರಕರಣ: 10 ದಿನಗಳಿಂದ ತಲೆಮರೆಸಿಕೊಂಡಿದ್ದ ಪತಿ ಕೊನೆಗೂ ಅರೆಸ್ಟ್

 ಭೋಪಾಲ್: ತನ್ನ ಪತ್ನಿ ಟ್ವಿಶಾ ಶರ್ಮಾ ಸಾವಿಗೀಡಾದ ನಂತರ ಕಳೆದ 10 ದಿನಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಪತಿ ಸಮರ್ಥ ಸಿಂಗ್‌ನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ವೃತ್ತಿಯಿಂದ ವಕೀಲನಾಗಿರುವ ಸಮರ್ಥ ಸಿಂಗ್, ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ತನ್ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹಿಂಪಡೆದ ಕೆಲವೇ ಗಂಟೆಗಳಲ್ಲಿ ಜಬಲಪುರ ನ್ಯಾಯಾಲಯಕ್ಕೆ ಶರಣಾಗಲು ಬಂದಿದ್ದ. ಆದರೆ, ಭೋಪಾಲ … Continued

ಸಿನಿಮೀಯ ಸ್ಟೈಲ್‌ನಲ್ಲಿ ಐಎಎಸ್ ಕೋಚಿಂಗ್‌ ಅಕಾಡೆಮಿ ನಿರ್ದೇಶಕಿ ಅಪಹರಣ: 1.89 ಕೋಟಿ ರೂ. ಸುಲಿಗೆ ಮಾಡಿ ಆಸ್ಪತ್ರೆ ಐಸಿಯುವಿನಲ್ಲಿ ಅಡಗಿದ್ದ ಆರೋಪಿ…!

ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಅತ್ಯಂತ ಭೀಕರ ಹಾಗೂ ಸಿನಿಮೀಯ ಮಾದರಿಯ ಹೈಪ್ರೊಫೈಲ್‌  ಅಪಹರಣ ಹಾಗೂ ಸುಲಿಗೆ ಪ್ರಕರಣವೊಂದು ನಡೆದಿದೆ. ದೆಹಲಿ ಮೂಲದ ಪ್ರಖ್ಯಾತ ‘ಶುಭ್ರಾ ರಂಜನ್ ಐಎಎಸ್ ಅಕಾಡೆಮಿ’ಯ ನಿರ್ದೇಶಕಿಯನ್ನು ಅಪಹರಿಸಿ, ನಾಲ್ಕು ಗಂಟೆಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡು, ಹಣೆ ಮೇಲೆ ಪಿಸ್ತೂಲ್ ಇಟ್ಟು ಬರೋಬ್ಬರಿ 1.89 ಕೋಟಿ ರೂಪಾಯಿಗಳನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡ … Continued

10ನೇ ತರಗತಿಯ ವಿದ್ಯಾರ್ಥಿಗೆ 30 ಸೆಕೆಂಡುಗಳಲ್ಲಿ 27 ಬಾರಿ ಇರಿದ ಅಪ್ರಾಪ್ತರು…!

ಭೋಪಾಲ : ಮಧ್ಯಪ್ರದೇಶದ ರಾಜಧಾನಿ ಭೋಪಾಲದಲ್ಲಿರುವ ಸ್ನೂಕರ್ ಕ್ಲಬ್‌ನಲ್ಲಿ 10 ನೇ ತರಗತಿಯ ವಿದ್ಯಾರ್ಥಿಯೊಬ್ಬನಿಗೆ 30 ಸೆಕೆಂಡುಗಳಲ್ಲಿ 27 ಬಾರಿ ಇರಿದ ಘಟನೆ ನಡೆದಿದೆ. ಇನ್ನೂ ಹೆಚ್ಚು ಆಘಾತಕಾರಿ ಎಂಬಂತೆ, ಆರೋಪಿಗಳೇ ಸಿಸಿಟಿವಿ ದೃಶ್ಯಾವಳಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಇಬ್ಬರು ಅಪ್ರಾಪ್ತ ವಯಸ್ಕರು ಕ್ಲಬ್‌ಗೆ ಪ್ರವೇಶಿಸುವುದನ್ನು ತೋರಿಸುತ್ತದೆ, ಕೆಲವೇ ಕ್ಷಣಗಳಲ್ಲಿ, ಅವರು 10 … Continued

ಅಪ್ರಾಪ್ತ ಶಾಲಾ ಬಾಲಕಿ ಮೇಲೆ ಅತ್ಯಾಚಾರ, ಬ್ಲ್ಯಾಕ್‌ಮೇಲ್ ; ಆರೋಪಿಗೆ ಕೋರ್ಟ್‌ ಆವರಣದಲ್ಲೇ ಥಳಿಸಿದ ವಕೀಲರು…

ಭೋಪಾಲ್: ನಗರವನ್ನೇ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, 11ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ 19 ವರ್ಷದ ಆರೋಪಿಗೆ ವಕೀಲರು ಮತ್ತು ಸಾರ್ವಜನಿಕರು ನ್ಯಾಯಾಲಯದ ಆವರಣದಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಭೋಪಾಲ್ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಈ ಹೈಡ್ರಾಮಾ ನಡೆದಿದೆ. ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ ಆರೋಪದಡಿ ಬಂಧಿತನಾಗಿದ್ದ ಓಸಾಫ್ ಅಲಿ ಖಾನ್ … Continued

ಭೋಪಾಲ್ ಆಸ್ಪತ್ರೆ ಲಿಫ್ಟ್‌ನಲ್ಲೇ ಮಹಿಳಾ ಸಿಬ್ಬಂದಿ ದರೋಡೆ ಮಾಡಿದ ಯುವಕ : ವೀಡಿಯೊ ವೈರಲ್‌

ಭೋಪಾಲ್: ದೇಶದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳಲ್ಲಿ ಒಂದಾದ ಭೋಪಾಲದ ಏಮ್ಸ್ (AIIMS) ಆಸ್ಪತ್ರೆಯ ಲಿಫ್ಟ್‌ನೊಳಗೆ ನಡೆದ ಭೀಕರ ದರೋಡೆ ಪ್ರಕರಣವು ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸಿದೆ. ಭಾನುವಾರ ನಡೆದ ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು  ಹೊರಬಿದ್ದಿದೆ. ಗೈನೆಕಾಲಜಿ ವಿಭಾಗದಲ್ಲಿ ಅಟೆಂಡೆಂಟ್ ಆಗಿ ಕೆಲಸ ಮಾಡುತ್ತಿರುವ ವರ್ಷಾ ಸೋನಿ ಎಂಬವರು ದರೋಡೆಗೆ ಒಳಗಾದವರು. ಅವರು ರಕ್ತನಿಧಿಯ ಹಿಂಭಾಗದಲ್ಲಿರುವ … Continued

ಕುಡಿದ ಮತ್ತಿನಲ್ಲಿ ಗಂಡನಿಗೆ 12 ಬಾರಿ ಕಚ್ಚಿ ಗಾಯಗೊಳಿಸಿ, ಆಸಿಡ್ ಎರಚಿದ ಪತ್ನಿ…!

ಭೋಪಾಲ : ಮಧ್ಯಪ್ರದೇಶದ ಭೋಪಾಲದಲ್ಲಿ 61 ವರ್ಷದ ವ್ಯಕ್ತಿಯೊಬ್ಬನ ಮೇಲೆ ಆತನ ಪತ್ನಿ ಹಲ್ಲೆ ನಡೆಸಿದ್ದು, ಜಗಳದ ವೇಳೆ ಆತನಿಗೆ 12 ಬಾರಿ ಕಚ್ಚಿದ್ದಾಳೆ ಹಾಗೂ ಆಸಿಡ್ ಎರಚಿದ ಘಟನೆ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ. ಭೋಪಾಲದ ನಿಶಾತಪುರದ ವಿಶ್ವಕರ್ಮ ನಗರದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 61 ವರ್ಷದ ವ್ಯಕ್ತಿಯ ಮೇಲೆ ಆತನ ಪತ್ನಿ … Continued

₹ 1,800 ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ವಶ : ಇಬ್ಬರ ಬಂಧನ

ನವದೆಹಲಿ/ಭೋಪಾಲ್: ಗುಜರಾತ್‌ನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮತ್ತು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಜಂಟಿಯಾಗಿ ನಡೆಸಿದ ಕಾರ್ಯಾಚರಣೆ ವೇಳೆ ಮಧ್ಯಪ್ರದೇಶದ ಭೋಪಾಲ್ ಬಳಿಯ ಬಾಗ್ರೋಡಾ ಕೈಗಾರಿಕಾ ಪ್ರದೇಶದಲ್ಲಿ ಬೃಹತ್ ಡ್ರಗ್ಸ್ ತಯಾರಿಕಾ ದಂಧೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ದಾಳಿಯ ಸಂದರ್ಭದಲ್ಲಿ ಅಧಿಕಾರಿಗಳು ಸುಮಾರು ₹ 1,800 ಕೋಟಿ ಮೌಲ್ಯದ ಮೆಫೆಡ್ರೋನ್ (MD) ಔಷಧಗಳನ್ನು … Continued

ಸರಿಯಾಗಿ ಅಡುಗೆ ಮಾಡಲಿಲ್ಲ ಎಂಬ ಕಾರಣಕ್ಕೆ ಅಜ್ಜಿಗೆ ಬರ್ಬರವಾಗಿ ಥಳಿಸಿದ ಮೊಮ್ಮಗ-ಆತನ ಪತ್ನಿ : ವೀಡಿಯೊ ವೈರಲ್‌, ಇಬ್ಬರ ಬಂಧನ

ಭೋಪಾಲ್: ಭೋಪಾಲ್‌ನಲ್ಲಿ ವ್ಯಕ್ತಿ ಮತ್ತು ಆತನ ಪತ್ನಿ ತನ್ನ ಅಜ್ಜಿಯ ಮೇಲೆ ಕರುಣೆಯಿಲ್ಲದೆ ಕೋಲಿನಿಂದ ಹಲ್ಲೆ ಮಾಡಿದ ಕರುಳು ಹಿಂಡುವ ವೀಡಿಯೊ ಬುಧವಾರ ವೈರಲ್ ಆಗಿದ್ದು, ನಂತರ ನಗರದಿಂದ ಪರಾರಿಯಾಗಲು ಪ್ರಯತ್ನಿಸುತ್ತಿದ್ದ ದಂಪತಿಯನ್ನು ಬಂಧಿಸಲಾಗಿದೆ. ಈ ಅಮಾನವೀಯ ವರ್ತನೆಗೆ ಸುಮಾರು 80 ಹರೆಯದ ವೃದ್ಧೆ ಈ ದಂಪತಿಗಳ ಇಚ್ಛೆಯಂತೆ ಆಹಾರವನ್ನು ಬೇಯಿಸದಿರುವುದೇ ಕಾರಣ ಎಂದು ಪೊಲೀಸ್ … Continued

ತನ್ನ ಅರ್ಧ ವಯಸ್ಸಿಗಿಂತ ಕಡಿಮೆ ವಯಸ್ಸಿನ ಮಹಿಳೆಯನ್ನು ಮದುವೆಯಾದ 103 ವರ್ಷದ ವ್ಯಕ್ತಿ…!

ಭೋಪಾಲ್: 104 ವರ್ಷದ ಸ್ವಾತಂತ್ರ್ಯ ಹೋರಾಟಗಾರರಾದ ಹಬೀಬ್ ನಜರ್ ಸಾಹೇಬ್ ಅವರು ಕೆಲದಿನಗಳಿಂದ ಸುದ್ದಿಯಲ್ಲಿದ್ದಾರೆ. ವಾಸ್ತವವಾಗಿ, ಅವರ ಒಂದು ವೀಡಿಯೊ ವೈರಲ್ ಆಗುತ್ತಿದೆ, ಅದರಲ್ಲಿ ಅವರು ತಮ್ಮ 103 ನೇ ವಯಸ್ಸಿನಲ್ಲಿ ವಿವಾಹವಾದರು ಎಂದು ಹೇಳಲಾಗುತ್ತಿದೆ. ಈ ವೀಡಿಯೊ ಈಗ ಚರ್ಚೆಗೆ ಕಾರಣವಾಗಿದೆ. ಯಾಕೆಂದರೆ ಈಗ ಅವರ ವಯಸ್ಸು 104 ವರ್ಷಗಳು. ಅವರು ಮದುವೆಯಾದ ಮಹಿಳೆಗೆ … Continued

ಧೋತಿ-ಕುರ್ತಾ ಧರಿಸಿ ಕ್ರಿಕೆಟ್ ಆಡಿದ ವೇದ ಪಂಡಿತರು ; ಸಂಸ್ಕೃತದಲ್ಲೇ ಕಾಮೆಂಟರಿ, ಮಾತುಕತೆ; ವಿಜೇತ ತಂಡಕ್ಕೆ ಅಯೋಧ್ಯಾ ಪ್ರವಾಸದ ಬಹುಮಾನ | ವೀಕ್ಷಿಸಿ

ಭೋಪಾಲ: ಸಂಸ್ಕೃತವನ್ನು ಉತ್ತೇಜಿಸುವ ಉದ್ದೇಶ ಹೊಂದಿರುವ ವಾರ್ಷಿಕ ಪಂದ್ಯಾವಳಿಯ ಭಾಗವಾಗಿ ಧೋತಿ-ಕುರ್ತಾವನ್ನು ಧರಿಸಿರುವ ಮತ್ತು ಹಣೆಯ ಮೇಲೆ ಕುಂಕುಮ-ತಿಲಕ ಇಟ್ಟುಕೊಂಡ ವೈದಿಕರು ಭೋಪಾಲಿನ ಕ್ರಿಕೆಟ್ ಪಿಚ್‌ನಲ್ಲಿ ಆಯೋಜಿಸಿರುವ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಆಟವಾಡಿದ್ದಾರೆ. ಪಾಶ್ಚಿಮಾತ್ಯ ದೇಶಗಳಿಗೆ ಧ್ಯಾನದ ಅಭ್ಯಾಸವನ್ನು ಪರಿಚಯಿಸಿದ ಮಹರ್ಷಿ ಮಹೇಶ ಯೋಗಿ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದ ವಿಜೇತರಿಗೆ ಈ ವರ್ಷ ಅಯೋಧ್ಯೆ … Continued