ಅಪ್ರಾಪ್ತ ಶಾಲಾ ಬಾಲಕಿ ಮೇಲೆ ಅತ್ಯಾಚಾರ, ಬ್ಲ್ಯಾಕ್‌ಮೇಲ್ ; ಆರೋಪಿಗೆ ಕೋರ್ಟ್‌ ಆವರಣದಲ್ಲೇ ಥಳಿಸಿದ ವಕೀಲರು…

ಭೋಪಾಲ್: ನಗರವನ್ನೇ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, 11ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ 19 ವರ್ಷದ ಆರೋಪಿಗೆ ವಕೀಲರು ಮತ್ತು ಸಾರ್ವಜನಿಕರು ನ್ಯಾಯಾಲಯದ ಆವರಣದಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಭೋಪಾಲ್ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಈ ಹೈಡ್ರಾಮಾ ನಡೆದಿದೆ. ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ ಆರೋಪದಡಿ ಬಂಧಿತನಾಗಿದ್ದ ಓಸಾಫ್ ಅಲಿ ಖಾನ್ … Continued

ವೀಡಿಯೊ…| ಕೋರ್ಟ್‌ ಆವರಣದಲ್ಲಿಯೇ ಬಡಿದಾಡಿಕೊಂಡ ಅತ್ತೆ-ಸೊಸೆ, ಸಂಬಂಧಿಕರು…! ವಿಡಿಯೋ ವೈರಲ್‌

ನ್ಯಾಯಾಲಯದ ವಿಚಾರಣೆಗೆಂದು ಬಂದಿದ್ದ ಅತ್ತೆ-ಸೊಸೆ ನಡುವೆ ಮಾರಾಮಾರಿ ನಡೆದ ಘಟನೆ ನಾಸಿಕ್‌ನಲ್ಲಿ ಗುರುವಾರ( ಫೆ.20) ಮಧ್ಯಾಹ್ನ ನಡೆದಿದೆ. ನ್ಯಾಯಾಲಯದ ಪ್ರವೇಶದ್ವಾರದಲ್ಲಿ ನಡೆದ ಹೊಡೆದಾಟವು ಅಲ್ಲಿದ್ದವರನ್ನು ಬೆಚ್ಚಿಬೀಳಿಸಿದೆ. ಕೋರ್ಟ್‌ ವಿಚಾರಣೆಗೆ ಹಾಜರಾಗಿದ್ದ ಅತ್ತೆ ಸೊಸೆ ನ್ಯಾಯಾಲಯದ ಆವರಣದಲ್ಲಿಯೇ ಜಗಳವಾಡಿದ್ದಾರೆ. ತೀವ್ರ ವಾಗ್ವಾದ ನಡೆದ ನಂತರ ಎರಡೂ ಕಡೆಯವರ ನಡುವೆ ದೊಡ್ಡ ಮಾರಾಮಾರಿಯೇ ನಡೆಯಿತು. ವೀಡಿಯೋದಲ್ಲಿ, ಕುಟುಂಬದ ಸದಸ್ಯರು … Continued

ನ್ಯಾಯಾಲಯದ ಆವರಣದೊಳಗೆ ಅಳಿಯನನ್ನು ಗುಂಡಿಕ್ಕಿ ಕೊಂದ ನಿವೃತ್ತ ಹಿರಿಯ ಪೊಲೀಸ್‌ ಅಧಿಕಾರಿ…!

ಚಂಡೀಗಢ : ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿಯನ್ನು ಅವರ ಮಾವ ಹಾಗೂ ಪಂಜಾಬ್ ಪೊಲೀಸ್‌ನ ನಿವೃತ್ತ ಸಹಾಯಕ ಇನ್ಸ್‌ಪೆಕ್ಟರ್ ಜನರಲ್ (ಎಐಜಿ) ಶನಿವಾರ ಗುಂಡಿಕ್ಕಿ ಕೊಂದ ಘಟನೆ ಶನಿವಾರ ಚಂಡೀಗಢ ನ್ಯಾಯಾಲಯದ ಆವರಣದಲ್ಲಿ ನಡೆದಿದೆ. ಕೌಟುಂಬಿಕ ವಿವಾದದ ಪ್ರಕರಣದ ವಿಚಾರಣೆಗಾಗಿ ಹರಪ್ರೀತ್ ಸಿಂಗ್ ಹಾಗೂ ಅವರ ಕುಟುಂಬ ಚಂಡೀಗಢ ಜಿಲ್ಲಾ ನ್ಯಾಯಾಲಯದಲ್ಲಿದ್ದಾಗ ಮಾಜಿ ಪೊಲೀಸ್ … Continued

ಬೆಳಗಾವಿ: ವಿಚಾರಣೆಗೆ ಕರೆತಂದಿದ್ದಾಗ ಕೋರ್ಟ್‌ ಆವರಣದಿಂದ ಪರಾರಿಯಾಗಿದ್ದ ಆರೋಪಿ ನಾಲ್ಕೇ ತಾಸಲ್ಲಿ ಸಿಕ್ಕಿಬಿದ್ದ..

ಬೆಳಗಾವಿ : ನ್ಯಾಯಾಲಯಕ್ಕೆ ವಿಚಾರಣೆಗೆಂದು ಕರೆತಂದಿದ್ದಾಗ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ ಆರೋಪಿಯನ್ನು ನಾಲ್ಕು ತಾಸಿನಲ್ಲಿ ಮತ್ತೆ ಬಂಧಿಸುವಲ್ಲಿ ಹಿರೇಬಾಗೇವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಹಲವು ಠಾಣೆಗಳಿಗೆ ಬೇಕಾಗಿದ್ದ ಅಬ್ದುಲ್ ಗನಿ ಶಬ್ಬೀರ್ ಶೇಕ್ ಗುರುವಾರ ವಿಚಾರಣೆಗಾಗಿ ಕರೆತಂದಿದ್ದಾಗ ಬೆಳಗಾವಿಯ ಜೆ ಎಂ ಎಫ್ ಸಿ ನ್ಯಾಯಾಲಯದ ಆವರಣದಿಂದ ಪೊಲೀಸರ ಸಮ್ಮುಖದಲ್ಲಿಯೇ ಓಡಿ … Continued

ಕೋರ್ಟ್ ಆವರಣದಲ್ಲೇ ಮಚ್ಚಿನಿಂದ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮಾಜಿ ಸೈನಿಕ..!

ಬೆಳಗಾವಿ: ಮಾಜಿ ಸೈನಿಕನೋರ್ವ ಕೋರ್ಟ್ ಆವರಣದಲ್ಲೇ ಪತ್ನಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕಾಲನ್ನೇ ಕತ್ತರಿಸಿದ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮಾಜಿ ಸೈನಿಕ ಶಿವಪ್ಪ ನಿಂಗಪ್ಪ ಅಡಕಿ (35), ತನ್ನ ಪತ್ನಿ ಜಯಮಾಲಾ (33) ಅವರ ಮೇಲೆ ಮಚ್ಚನಿಂದ ಹಲ್ಲೆ ಮಾಡಿದ್ದಾನೆ. ಪರಿಣಾಮ ಜಯಮಾಲಾ ಅವರ ತಲೆ, ಕೈ, ಕಾಲಿಗೆ … Continued