ಮೈ ಜುಂ ಎನ್ನುವ ವಿಡಿಯೋ : ತಲೆಗೆ ಕತ್ತಿ ಹೊಕ್ಕಿದ್ದರೂ ನಡೆದುಕೊಂಡೇ ಆಸ್ಪತ್ರೆಗೆ ಬಂದ ವ್ಯಕ್ತಿ

ಮುಂಬೈ: ಮುುಂಬೈನಲ್ಲಿ ನಡೆದ ಭೀಕರ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. ವ್ಯಕ್ತಿಯೊಬ್ಬನ ತಲೆಗೆ ಕತ್ತಿಯಿಂದ (Sickle) ಹಲ್ಲೆ ಮಾಡಲಾಗಿದ್ದು, ಆ ಕತ್ತಿ ತಲೆಯ ಒಳಭಾಗಕ್ಕೆ ಹೊಕ್ಕಿದ್ದರೂ ಸಹ ಆತ ಯಾವುದೇ ಆತಂಕವಿಲ್ಲದೆ ನಡೆದುಕೊಂಡೇ ಆಸ್ಪತ್ರೆಗೆ ಬಂದಿರುವ ದೃಶ್ಯ ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಮೇ 4ರಂದು ಮುಂಜಾನೆ ವಿಕ್ರೋಲಿಯ ಕಣ್ಣಂವರ್ ನಗರದಲ್ಲಿ ಇಸ್ಮಾ ಎಂಬ ಯುವಕನ ಮೇಲೆ ದುಷ್ಕರ್ಮಿಗಳು ಕತ್ದತಯಿಂದ ಹಲ್ಲೆ ನಡೆಸಿದ್ದಾರೆೆನ್ನಲಾಗಿದೆ. ಹೊಡೆತದ  ತೀವ್ರತೆಗೆ ಕತ್ತಿ ಆತನ ತಲೆಯೊಳಗೆ ಆಳವಾಗಿ ಇಳಿದಿತ್ತು. ತಲೆಗೆ ತೀವ್ರ ಗಾಯವಾಗಿದ್ದರೂ ಧೃತಿಗೆಡದ ಇಸ್ಮಾ, ಲೋಕಮಾನ್ಯ ತಿಲಕ್ ಮುನ್ಸಿಪಲ್ ಜನರಲ್ ಆಸ್ಪತ್ರೆಗೆ (ಸಿಯಾನ್ ಆಸ್ಪತ್ರೆ) ತಾವೇ ಬಂದಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ, ವ್ಯಕ್ತಿಯ ತಲೆಯ ಹಿಂಭಾಗದಲ್ಲಿ ಕತ್ತಿ ಆಳವಾಗಿ ಸಿಲುಕಿಕೊಂಡಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಇಂತಹ ಗಂಭೀರ ಗಾಯವಾಗಿದ್ದರೂ ಸಹ, ಆ ವ್ಯಕ್ತಿ ಪ್ರಜ್ಞೆ ತಪ್ಪದೆ ಆಸ್ಪತ್ರೆಯ ಒಳಗೆ ಓಡಾಡುತ್ತಿರುವುದು ಮತ್ತು ಮೊಬೈಲ್ ನೋಡುತ್ತಿರುವುದು ಕಂಡುಬಂದಿದೆ.
ಆತನ ಈ ಅಸಾಧಾರಣ ಸ್ಥಿತಿ ಮತ್ತು ಧೈರ್ಯವನ್ನು ಕಂಡು ಅಲ್ಲಿ ನೆರೆದಿದ್ದ ಸಾರ್ವಜನಿಕರು ಹಾಗೂ ಆಸ್ಪತ್ರೆ ಸಿಬ್ಬಂದಿ ದಂಗಾಗಿದ್ದಾರೆ.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

ಪ್ರಾಥಮಿಕ ಮಾಹಿತಿಯ ಪ್ರಕಾರ, ಅಪರಿಚಿತ ವ್ಯಕ್ತಿಯೊಬ್ಬ ಈತನ ಮೇಲೆ ಕತ್ತಯಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ದಾಳಿಯ ತೀವ್ರತೆಗೆ ಮಚ್ಚು ತಲೆಯೊಳಗೆ ಸಿಲುಕಿಕೊಂಡಿದೆ. ಆದರೆ, ಈ ಹಲ್ಲೆ ಏಕೆ ನಡೆಯಿತು? ಹಲ್ಲೆ ಮಾಡಿದವರು ಯಾರು? ಎಂಬ ಬಗ್ಗೆ ಇನ್ನು ಅಧಿಕೃತ ಮಾಹಿತಿ ಇಲ್ಲ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇನ್ನು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸುವ ಮೂಲಕ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಕಾಯಲಾಗುತ್ತಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement