ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

 ಹುಬ್ಬಳ್ಳಿ: ನಗರದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು, ಅತ್ಯಾಚಾರದಿಂದ ಜನಿಸಿದ ನವಜಾತ ಶಿಶುವನ್ನು ಬಾಲಕಿಯ ಪೋಷಕರು ಮತ್ತೊಂದು ಕುಟುಂಬಕ್ಕೆ ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ. ಇದರ ನಡುವೆಯೇ ಬಾಲಕಿ ಇದೀಗ ಮತ್ತೊಮ್ಮೆ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಅತ್ಯಾಚಾರದ ಆರೋಪಿ, ಬಾಲಕಿಯ ಪೋಷಕರು ಹಾಗೂ ಇಬ್ಬರು ಖಾಸಗಿ … Continued

ವೀಡಿಯೊ…| 7 ತಿಂಗಳ ಗರ್ಭಿಣಿಯಾಗಿದ್ದರೂ ವೇಟ್‌ ಲಿಫ್ಟಿಂಗ್ ಸ್ಪರ್ಧೆಯಲ್ಲಿ 145 ಕೆಜಿ ತೂಕ ಎತ್ತಿ ಪದಕ ಗೆದ್ದ ಸೋನಿಕಾ ಯಾದವ್

ಹೈದರಾಬಾದ್ : ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗಿಯಾದ 7 ತಿಂಗಳ ಗರ್ಭಿಣಿಯಾಗಿರುವ ದೆಹಲಿ ಪೊಲೀಸ್ ಪೇದೆಯೊಬ್ಬರು 145 ಕೆಜಿ ತೂಕ ಎತ್ತುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಪೊಲೀಸ್ ಕಾನ್ಸ್‌ಟೇಬಲ್ (Police Constable) ಸೋನಿಕಾ ಯಾದವ್ ಅವರು ಏಳು ತಿಂಗಳ ಗರ್ಭಿಣಿಯಾಗಿದ್ದರೂ, ಆಂಧ್ರ ಪ್ರದೇಶದಲ್ಲಿ ನಡೆದ ಆಲ್ ಇಂಡಿಯಾ ಪೊಲೀಸ್ ವೇಟ್‌ಲಿಫ್ಟಿಂಗ್ ಕ್ಲಸ್ಟರ್ 2025–26ರಲ್ಲಿ ಸ್ಪರ್ಧಿಸಿ … Continued

ಆಲ್ಬೇನಿಯಾ ಎಐ (AI)ಯ ಮಾನವರೂಪಿ ಸಚಿವೆ ‘ಡಯೆಲ್ಲಾ’ 83 ‘ಮಕ್ಕಳ ಗರ್ಭಿಣಿ…! ಪ್ರಧಾನಿಯ ಅಚ್ಚರಿ ಘೋಷಣೆ

ಆಲ್ಬೇನಿಯಾ ದೇಶದ ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಯಾದ ಮಾನವರೂಪಿ ಸಚಿವೆ, ‘ಡಯೆಲ್ಲಾ’ (Diella) ಗರ್ಭಿಣಿಯಾಗಿದ್ದಾಳೆ ಎಂದು ಪ್ರಧಾನ ಮಂತ್ರಿ ಎಡಿ ರಾಮಾ ಅವರು ಘೋಷಿಸಿದ್ದಾರೆ. ಹಾಗೂ ಸಂಸತ್ತಿನ ಪ್ರತಿ ಸದಸ್ಯರಿಗೂ ಒಬ್ಬರಂತೆ ಒಟ್ಟು 83 ‘ಮಕ್ಕಳಿಗೆ ಜನ್ಮನೀಡುವ ನಿರೀಕ್ಷೆಯಿದೆ ಎಂದು ಬಹಿರಂಗಪಡಿಸಿದ್ದಾರೆ. ಬರ್ಲಿನ್‌ನಲ್ಲಿ ನಡೆದ ಗ್ಲೋಬಲ್ ಡೈಲಾಗ್ (BGD) ಸಭೆಯಲ್ಲಿ ಮಾತನಾಡಿದ ರಾಮಾ ಅವರು, … Continued

ಐವಿಎಫ್‌ (IVF) ಇಲ್ಲದೆ 66ನೇ ವರ್ಷದಲ್ಲಿ 10ನೇ ಮಗುವಿಗೆ ಜನ್ಮ ನೀಡಿದ ಮಹಿಳೆ…! ಅವಳ ಹಿರಿಯ ಮಗನ ವಯಸ್ಸು 46 ವರ್ಷ…!!

66 ವರ್ಷದ ಜರ್ಮನ್ ಮಹಿಳೆ ತನ್ನ ಹತ್ತನೇ ಮಗುವಿಗೆ ಜನ್ಮ ನೀಡಿದ್ದಾಳೆ..! ಈಗಾಗಲೇ ಒಂಬತ್ತು ಮಕ್ಕಳ ತಾಯಿಯಾಗಿರುವ ಅಲೆಕ್ಸಾಂಡ್ರಾ ಹಿಲ್ಡೆಬ್ರಾಂಡ್ ಕಳೆದ ವಾರ, ಸಿಸೇರಿಯನ್ ಮೂಲಕ ಮಗ ಫಿಲಿಪ್‌ಗೆ ಜನ್ಮ ನೀಡಿದ್ದಾಳೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಮತ್ತು ಮಗು 7 ಪೌಂಡ್, 13 ಔನ್ಸ್ ತೂಕ ಹೊಂದಿದೆ. ತನ್ನ ವಯಸ್ಸಿನ ಕಾರಣದಿಂದ ಸ್ವಾಭಾವಿಕ … Continued

‘ಮಕ್ಕಳಿಲ್ಲದ ಮಹಿಳೆಯನ್ನು ಗರ್ಭ ಧರಿಸುವಂತೆ ಮಾಡಿ….10 ಲಕ್ಷ ರೂ. ಗಳಿಸಿ’: ಹೀಗೊಂದು ವಂಚನೆ ಜಾಲ ಭೇದಿಸಿದ ಪೊಲೀಸರು…!

ಪಾಟ್ನಾ :  ಮಕ್ಕಳಿಲ್ಲದ ಮಹಿಳೆಯರನ್ನು ಗರ್ಭ ಧರಿಸುವಂತೆ ಮಾಡಿದರೆ 10 ಲಕ್ಷ ರೂ.ಗಳನ್ನು ನೀಡುವುದಾಗಿ ನಂಬಿಸಿ ಮೋಸ ಮಾಡುವ ಒಂದು ವಿಶಿಷ್ಟ ಹಗರಣವೊಂದನ್ನು ಬಿಹಾರ ಪೊಲೀಸರು ಭೇದಿಸಿದ್ದಾರೆ. ಶುಕ್ರವಾರ, ಪೊಲೀಸರು ಗ್ಯಾಂಗ್ ಅನ್ನು ಬಂಧಿಸಿದ್ದಾರೆ. ಬಂಧಿತರನ್ನು ನವಾಡ ಜಿಲ್ಲೆಯ ಪ್ರಿನ್ಸ್ ರಾಜ, ಭೋಲಾಕುಮಾರ ಮತ್ತು ರಾಹುಲ್ ಕುಮಾರ ಎಂದು ಗುರುತಿಸಲಾಗಿದೆ. ಪೊಲೀಸರು ಅದನ್ನು ಭೇದಿಸಿ ಮೂವರನ್ನು … Continued