ವೀಡಿಯೊ..| ನಡುರಸ್ತೆಯಲ್ಲೇ ಆಟೋ ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ ಯುವತಿ ; ವೀಡಿಯೊ ವೈರಲ್‌ ಆದ ನಂತರ ದೂರು ದಾಖಲಿಸಿದ ಚಾಲಕ

ಲಕ್ನೋ: ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಪ್ರಯಾಣ ದರದ ಬಗ್ಗೆ ಉಂಟಾದ ಜಗಳದ ನಂತರ ಮಹಿಳೆಯೊಬ್ಬರು ಆಟೋ ಚಾಲಕನಿಗೆ ಥಳಿಸಿದ ವೀಡಿಯೊ ವೈರಲ್ ಆಗಿದೆ. ಪ್ರಿಯಾಂಶಿ ಪಾಂಡೆ ಎಂಬ ಯುವತಿ ಆಟೋ ಡ್ರೈವರ್ ವಿಮಲೇಶಕುಮಾರ ಶುಕ್ಲಾ ಎಂಬವರನ್ನು ಬೈಯುತ್ತ ಸೀಟಿನಿಂದ ಎಳೆಯಲು ಪ್ರಯತ್ನಿಸುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಕೈಮುಗಿದು ಬೇಡಿಕೊಂಡರೂ ಆಕೆ ಆತನಿಗೆ ಥಳಿಸುತ್ತಿರುವುದನ್ನು ವೀಡಿಯೊ ತೋರಿಸಿದೆ. ಆಟೋ … Continued

ಹತ್ರಾಸ್ ಕಾಲ್ತುಳಿತದ ಘಟನೆ : 6 ಮಂದಿ ಬಂಧನ, ಪ್ರಮುಖ ಆರೋಪಿ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಲಕ್ನೋ : ಹತ್ರಾಸ್‌ನಲ್ಲಿ ಸತ್ಸಂಗದ ನಂತರ ಸಂಭವಿಸಿದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಗುರುವಾರ ತಿಳಿಸಿದ್ದಾರೆ. ಅವರೆಲ್ಲರೂ ಸತ್ಸಂಗವನ್ನು ನಡೆಸುವ ಸಂಘಟನಾ ಸಮಿತಿಯ ಸದಸ್ಯರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಹತ್ರಾಸ್‌ನಲ್ಲಿ ನಾರಾಯಣ ಸಾಕರ್ ಹರಿ ಅಥವಾ ‘ಭೋಲೆ ಬಾಬಾ’ ನಡೆಸಿದ ಸತ್ಸಂಗದ ನಂತರ ನಡೆದ ಕಾಲ್ತುಳಿತದಲ್ಲಿ ಒಟ್ಟು … Continued

ಉತ್ತರ ಪ್ರದೇಶ ಕಾಲ್ತುಳಿತದ ಘಟನೆ : ಹೆಣಗಳ ರಾಶಿ ನೋಡಿ ಹೃದಯಾಘಾತದಿಂದ ಮೃತಪಟ್ಟ ಪೊಲೀಸ್‌ ಸಿಬ್ಬಂದಿ

ಲಕ್ನೋ : ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಫುಲ್ರೈ ಗ್ರಾಮದಲ್ಲಿ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 116 ಭಕ್ತರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಈ ವೇಳೆ ರಜನೀಶ್ ಎಂಬ ಪೋಲೀಸ್ ಪೇದೆಯೊಬ್ಬರು ಎಟಾಹ್ ಜಿಲ್ಲಾ ಆಸ್ಪತ್ರೆಯಲ್ಲಿ ದುರಂತ ದೃಶ್ಯವನ್ನು ನೋಡಿದ ನಂತರ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಸಾವಿಗೀಡಾದ ಘಟನೆಯೂ ನಡೆದಿದೆ ಎಂದು … Continued

ಅಯ್ಯೊ ದೇವ್ರೆ…| ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ ಪ್ರವೇಶ ಪತ್ರದಲ್ಲಿ ನಟಿ ಸನ್ನಿ ಲಿಯೋನ್ ಹೆಸರು- ಫೋಟೋ ಪ್ರಕಟ…!

ಉತ್ತರ ಪ್ರದೇಶ ಪೊಲೀಸರಿಗೆ ಮುಜುಗರ ಉಂಟುಮಾಡುವ ವಿದ್ಯಮಾನವೊಂದರಲ್ಲಿ, ಉತ್ತರ ಪ್ರದೇಶ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ಆಕೆಯ ಹೆಸರು ಮಾತ್ರವಲ್ಲದೆ ಆಕೆಯ ಫೋಟೋಗಳೂ ಕೂಡ ಪ್ರಕಟವಾಗಿದೆ…! ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಯ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ನಟಿ ಸನ್ನಿ ಲಿಯೋನ್ ಹೆಸರು ಮತ್ತು ಭಾವಚಿತ್ರ ಪ್ರಕಟವಾಗಿರುವುದು ಶನಿವಾರ ವೈರಲ್ ಆಗಿದೆ. ಈ ವಿಷಯ ತನಿಖೆಯಲ್ಲಿದೆ ಎಂದು … Continued

ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠೆ ದಿನ ಕಾರ್ಯಕ್ರಮ ಆಯೋಜನೆಗೆ ದೇಣಿಗೆ ಸ್ವೀಕರಿಸುತ್ತಿದ್ದ ವ್ಯಕ್ತಿಯ ಕೊಲೆ

ಉನ್ನಾವೊ (ಉತ್ತರ ಪ್ರದೇಶ) : ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಯ ದಿನವಾದ ಜನವರಿ 22 ರಂದು ಕಾರ್ಯಕ್ರಮವನ್ನು ಆಯೋಜಿಸಲು ಸ್ಥಳೀಯ ದೇವಸ್ಥಾನಕ್ಕೆ ದೇಣಿಗೆ ಸಂಗ್ರಹಿಸುತ್ತಿದ್ದಾಗ 35 ವರ್ಷದ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ದಾಳಿಕೋರರು ಬೇರೆ ಸಮುದಾಯದವರಾದ್ದರಿಂದ ಇದೊಂದು ಕೋಮು ಘಟನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ, ಆದರೆ ಪೊಲೀಸರು ವಿವಾದ … Continued