ರಾಜ್ಯದಲ್ಲಿ ಮಂಗಳವಾರ 74 ಮಂದಿಗೆ ಕೋವಿಡ್‌ ಸೋಂಕು, ಇಬ್ಬರು ಸಾವು

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ 74 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 464ಕ್ಕೆ ಏರಿಕೆಯಾಗಿದೆ. ಅಲ್ಲದೆ, ಕೊರೋನಾದಿಂದ ಇಬ್ಬರು ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 74 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 464ಕ್ಕೆ ಏರಿಕೆಯಾಗಿದೆ … Continued

ಕೋವಿಡ್‌ ಸೋಂಕು ಹೆಚ್ಚಳದ ನಂತರ ರಾಜ್ಯಗಳಿಗೆ ಕೋವಿಡ್‌ ಸಲಹೆ ನೀಡಿದ ಕೇಂದ್ರ

ನವದೆಹಲಿ: ಕೇರಳದ ತಿರುವನಂತಪುರಂನ 79 ವರ್ಷದ ಮಹಿಳೆ ಮಾದರಿಯಲ್ಲಿ ಕೊರೊನಾ ವೈರಸ್ ಉಪ-ರೂಪಾಂತರಿ JN.1 ಮೊದಲ ಪ್ರಕರಣ ಪತ್ತೆಯಾದ ನಂತರ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸಲಹೆಯನ್ನು ನೀಡಿದೆ. ಈ ಹಿಂದೆ, ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಪ್ರಯಾಣಿಕರಲ್ಲಿ ಸಿಂಗಾಪುರದಲ್ಲಿ ಜೆಎನ್.1 ಉಪ-ರೂಪಾಂತರಿ ಪತ್ತೆಯಾಗಿತ್ತು. ಹೀಗಾಗಿ “ಮುಂಬರುವ ಹಬ್ಬದ ಋತುವನ್ನು ಪರಿಗಣಿಸಿ, ನೈರ್ಮಲ್ಯ ಅನುಸರಿಸುವ ಮೂಲಕ ರೋಗ ಹರಡುವ … Continued

ಪುರುಷರೊಂದಿಗೆ ಸಲಿಂಗ ಕಾಮ ನಡೆಸಿದ ಇಟಾಲಿಯನ್ ವ್ಯಕ್ತಿಗೆ ಏಕಕಾಲದಲ್ಲಿ ಕಾಣಿಸಿಕೊಂಡ ಮಂಕಿಪಾಕ್ಸ್, ಕೋವಿಡ್, ಎಚ್‌ಐವಿ…!

ಸ್ಪೇನ್ ಪ್ರವಾಸದಿಂದ ಹಿಂದಿರುಗಿದ ಕೆಲವು ದಿನಗಳ ನಂತರ, ಜ್ವರ, ಆಯಾಸ ಮತ್ತು ನೋಯುತ್ತಿರುವ ಗಂಟಲು ಸೇರಿದಂತೆ ಹಲವಾರು ರೋಗಲಕ್ಷಣಗಳ ಸರಣಿಯನ್ನು ವರದಿ ಮಾಡಿದ್ದಾರೆ ಇಟಾಲಿಯನ್ ವ್ಯಕ್ತಿ. ಈ ವ್ಯಕ್ತಿಯು ಒಮ್ಮೆಗೆ ಮಂಕಿಪಾಕ್ಸ್, ಕೋವಿಡ್ -19 ಮತ್ತು ಎಚ್‌ಐವಿ (HIV)ಗೆ ಧನಾತ್ಮಕ ಪರೀಕ್ಷೆ ಮಾಡಿದ ಮೊದಲ ಪ್ರಕರಣವಾಗಿದೆ ಎಂದು ಮೇಲ್ ಆನ್‌ಲೈನ್ ವರದಿ ಮಾಡಿದೆ. ಈ ವರ್ಷದ … Continued

ಕೋವಿಡ್-19 ನಕಾಶೆಯಲ್ಲಿ ಚೀನಾ-ಪಾಕಿಸ್ತಾನ ಸೇರಿದ ಕಾಶ್ಮೀರ!

ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್-19 ಡ್ಯಾಶ್ ಬೋರ್ಡ್ ನಲ್ಲಿ ಪ್ರಕಟಿಸಿದ ವಿಶ್ವ ನಕಾಶೆಯಲ್ಲಿ ಕಾಶ್ಮೀರವನ್ನು ಚೀನಾ, ಪಾಕಿಸ್ತಾನಕ್ಕೆ ಸೇರಿಸಲಾಗಿದೆ. ಈ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಶಂತನು ಸೇನ್ ಈ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ. ತಪ್ಪು ಮಾಹಿತಿ ನೀಡುವ ನಕಾಶೆ … Continued

ಗೋವಾ- ಶೇ. 53 ಮರಣ ಲಸಿಕೆ ಪಡೆಯದವರು

ಪಣಜಿ: ಗೋವಾ ರಾಜ್ಯದಲ್ಲಿ ಮೂರನೇ ಅಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರಲ್ಲಿ ಶೇ. 53 ಜನರು ಲಸಿಕೆ ಪಡೆದಿರಲಿಲ್ಲ ಎಂದು ಗೋವಾ ಆರೋಗ್ಯ ಇಲಾಖೆ ಹೇಳಿದೆ. ಮೂರನೇ ಅಲೆಯಲ್ಲಿ ಈ ವರೆಗೆ 91 ಜನರು ಮೃತಪಟ್ಟಿದ್ದು, 49 ಜನರು ಲಸಿಕೆ ಪಡೆಯದವರಾಗಿದ್ದಾರೆ ಎಂದು ಹೇಳಿದೆ. ಎರಡನೇ ಅಲೆಯಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಿತ್ತು. ಶೇ. 75 ಜನರು … Continued

ಕರ್ನಾಟಕದಲ್ಲಿ 5ಟಿ ಕಾರ್ಯತಂತ್ರ ಜಾರಿ, ಕೋವಿಡ್ ಪರೀಕ್ಷೆಗಳ ಸಂಖ್ಯೆ ಪ್ರತಿದಿನ 2.5 ಲಕ್ಷಕ್ಕೆ ಹೆಚ್ಚಿಸಲು ನಿರ್ಧಾರ

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಎದುರಿಸಲು ರಾಜ್ಯದ ಸಿದ್ಧತೆ ಕ್ರಮಗಳನ್ನು ವಿವರಿಸಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು, ರಾಜ್ಯದಲ್ಲಿ ಪರೀಕ್ಷೆಗಳ ಸಂಖ್ಯೆಯನ್ನು ದಿನಕ್ಕೆ 2.5 ಲಕ್ಷಕ್ಕೆ ಮತ್ತು ಬೆಂಗಳೂರಿನಲ್ಲಿ 30,000 ಕ್ಕೆ ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಮತ್ತೆ 5T ಟ್ರೇಸ್, ಟ್ರ್ಯಾಕ್, ಟೆಸ್ಟ್, ಟ್ರೀಟ್, ಟೆಕ್ನಾಲಜಿ ತಂತ್ರ ಕಾರ್ಯಗತಗೊಳಿಸಲಾಗುತ್ತಿದೆ. ಬಳ್ಳಾರಿ ಮತ್ತು … Continued

ಎಸ್ ಡಿಎಂನ ಎಲ್ಲ ಕೋವಿಡ್ ಸಂಪರ್ಕಿತರ ತಪಾಸಣೆ ಪೂರ್ಣ: ಮತ್ತೆ 25 ಜನರಿಗೆ ದೃಢ

ಧಾರವಾಡ: ಸತ್ತೂರಿನ ಎಸ್ ಡಿ ಎಂ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶನಿವಾರ ಕೋವಿಡ್ ತಪಾಸಣೆಗೆ ಒಳಗಾಗಿದ್ದ 2217 ಜನರ ಕೋವಿಡ್ ತಪಾಸಣಾ ವರದಿಗಳು ಲಭ್ಯವಾಗಿದ್ದು ,ಇವರಲ್ಲಿ 25 ಜನರಿಗೆ ಮಾತ್ರ ಕೋವಿಡ್ ಸೋಂಕು ದೃಢವಾಗಿದೆ , ಪಾಸಿಟಿವಿಟಿ ದರ ಶೇ.1.12 ರಷ್ಟಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ ತಿಳಿಸಿದ್ದಾರೆ. ಕಳೆದ ಮೂರು ದಿನಗಳ ಅವಧಿಯಲ್ಲಿ ತಪಾಸಣೆ ಮಾಡಲಾಗಿದ್ದ … Continued

ಕೊನೆಗೂ ಕೊಡಗು ಬಾಲಕಿ ಕೈಸೇರಿದ ಕಳೆದುಹೋಗಿದ್ದ ಅಮ್ಮನ ನೆನಪಿನ ಮೊಬೈಲ್..!

ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರದ ಪುಟ್ಟ ಬಾಲಕಿ ಹೃತಿಕ್ಷಾ ಪ್ರಾರ್ಥನೆ ಕೊನೆಗೂ ಫಲಿಸಿದೆ. ಕೋವಿಡ್‌ನಿಂದ ಮೃತಪಟ್ಟ ತಾಯಿಯ ನೆನಪು ಇರುವ ಮೊಬೈಲ್ ಮೂರು ತಿಂಗಳ ನಂತರ ಆಕೆಯ ಕೈ ಸೇರಿದೆ. ಮಡಿಕೇರಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಹೃತಿಕ್ಷಾ ತಾಯಿ ಮೇ 16ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಆದರೆ ತಾಯಿಯ ಜೊತೆಗಿದ್ದ ಮೊಬೈಲ್ ಕಳೆದುಹೋಗಿತ್ತು. ತಾಯಿಯ ನೆನಪು … Continued

ಅನುದಾನರಹಿತ ಶಾಲಾ ಶಿಕ್ಷಕರು-ಸಿಬ್ಬಂದಿಗೆ ಕೋವಿಡ್ ವಿಶೇಷ ಪ್ಯಾಕೇಜ್ ಪರಿಹಾರ ಬಿಡುಗಡೆ

ಬೆಂಗಳೂರು : ರಾಜ್ಯ ಸರ್ಕಾರವು ಅನುದಾನರಹಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ಕೋವಿಡ್‌ ವಿಶೇಷ ಪ್ಯಾಕೇಜ್‌ ಪರಿಹಾರ ಧನ ಬಿಡುಗಡೆ ಮಾಡಲಾಗಿದೆ. 2021-22 ನೇ ಸಾಲಿಗೆ ಅನುದಾನ ರಹಿತ ಶಾಲೆಗಳ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ಕೋವಿಡ್ -19 ವಿಶೇಷ ಪ್ಯಾಕೇಜ್ ಪರಿಹಾರ ಧನ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಲಾಗಿದೆ. 2021-22 ನೇ … Continued

ಕೋವಿಡ್ ನಿಂದ ಮುಂದೂಡಿದ್ದ ಕರ್ನಾಟಕ ವಿವಿ ಎಲ್ಲ ಪರೀಕ್ಷೆಗಳಿಗೆ ದಿನಾಂಕ ನಿಗದಿ

ಧಾರವಾಡ: ಕೋವಿಡ್ 2ನೇ ಆಲೆ ಹಾಗೂ ಸಾರಿಗೆ ಬಸ್ ಮುಷ್ಕರದಿಂದ ಮುಂದೂಡಲ್ಪಟ್ಟಿದ್ದ 2020 -21 ನೇ ಸಾಲಿನ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳ ಪರೀಕ್ಷೆಗಳನ್ನು ಯುಜಿಸಿ ಮಾರ್ಗಸೂಚಿ ಹಾಗೂ ರಾಜ್ಯದ ಉನ್ನತ ಶಿಕ್ಷಣ ಇಲಾಖೆಯ ನಿರ್ದೇಶನಗಳನ್ವಯ ಸಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಹೇಳಿದರು. ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ … Continued