ಭಾರತದಲ್ಲಿ 26 ಸಾವಿರ ದಾಟಿದ ದಿನವೊಂದರ ಕೊರೊನಾ ಸೋಂಕು..!

ನವ ದೆಹಲಿ: ದೇಶದಲ್ಲಿ ದಿನದಿನವೂ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕಳೆದ 24ಗಂಟೆಯಲ್ಲಿ 26,291 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಕಳೆದ ಮೂರು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದ ಸೋಂಕಿತರು ಒಂದೇ ದಿನ ಪತ್ತೆಯಾಗಿದ್ದಾರೆ. 2020ರ ಡಿಸೆಂಬರ್​ 20ರಂದು 26,624 ಕೊರೊನಾ ಸೋಂಕಿನ ಕೇಸ್​ಗಳು ದಾಖಲಾಗಿದ್ದವು. ಭಾನುವಾರ 25,320 ಪ್ರಕರಣಗಳು ದಾಖಲಾಗಿದ್ದವು. ಸೋಮವಾರ ಸುಮಾರು … Continued

ಮತ್ತೆ ೨೫ ಸಾವಿರ ದಾಟಿದ ಭಾರತದ ದಿನವೊಂದರ ಕೊರೊನಾ ಸೋಂಕು..!

ನವದೆಹಲಿ: ದೇಶದಲ್ಲಿ ದಿನವೊಂದರ ಕೊರೊನಾ ಪ್ರಕರಣಗಳ ಸಂಖ್ಯೆ ಕಳೆದ ೨೪ ತಾಸಿನಲ್ಲಿ ೨೫ ಸಾವಿರವನ್ನು ದಾಟಿದೆ..! ಭಾನುವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯವಾದ ೨೪ ತಾಸುಗಳ ಅವಧಿಯಲ್ಲಿ ೨೫, ೩೨೦ ಹೊಸ ಪ್ರಕರಣಗಳು ದಾಖಲಾಗಿದ್ದು, ಇದು ಕಳೆದ ವರ್ಷದ ಡಿಸೆಂಬರ್‌ ೨೦ರ ನಂತರ ಅಂದರೆ ೮೪ ದಿನಗಳಲ್ಲೇ ಗರಿಷ್ಠ ಪ್ರಮಾಣವಾಗಿದೆ.ಕಳೆದ ವರ್ಷ ಡಿಸೆಂಬರ್ 20 ರಂದು … Continued

ಕೊವಿಡ್‌ನಲ್ಲಿ ಎ‌ಲ್ಲರೂ ಹಣ್ಣಾಗಿರುವಾಗ ಅದಾನಿ ಸಂಪತ್ತು ಶೇ.50 ವೃದ್ಧಿ ಹೇಗೆ; ರಾಹುಲ್ ಗಾಂಧಿ ಪ್ರಶ್ನೆ

ನವ ದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ಅತ್ಯಂತ ಕಠಿಣ ಸಮಯದಲ್ಲಿ ಎಲ್ಲರೂ ಹೆಣಗಾಡಿ ಹಣ್ಣಾಗಿರುವಾಗ ಉದ್ಯಮಿ ಗೌತಮ್ ಅದಾನಿ ಸಂಪತ್ತನ್ನು ಹೇಗೆ ನಿರೀಕ್ಷೆಗೂ ಮೀರಿ ಹೆಚ್ಚಿಸಿಕೊಂಡರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಬ್ಲೂಮ್‌ಬರ್ಗ್ ವರದಿ ಉಲ್ಲೇಖಿಸಿ ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ, 2021ರ ಸಂಪತ್ತು ಗಳಿಕೆಯಲ್ಲಿ ಇಡೀ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಅದಾನಿ 12 … Continued

ವಿಮಾನ ಪ್ರಯಾಣಿಕರಿಗೆ ಹೊಸ ಕೊವಿಡ್‌ ಮಾ‌ರ್ಗಸೂಚಿ ಪ್ರಕಟ

ನವ ದೆಹಲಿ: ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಶನಿವಾರ (ಮಾ.೧೩) ವಿಮಾನ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಈ ಮಾರ್ಗಸೂಚಿಯಂತೆ, ಪ್ರಯಾಣಿಕರು ಮಾಸ್ಕ್ ಧರಿಸದಿದ್ದರೆ ಅಥವಾ ಸೂಕ್ತ ಕೋವಿಡ್ ಸೂಚನೆ ಅನುಸರಿಸದಿದ್ದರೆ ಅವರನ್ನು ವಿಮಾನ ನಿಲ್ದಾಣದಿಂದ ಹೊರಗೆ ಕಳುಸಲಾಗುವುದು ಎಂದು ಖಡಕ್‌ ಸೂಚನೆ ನೀಡಿದೆ. ವಿಮಾನ ನಿಲ್ದಾಣಗಳಲ್ಲಿ ನಿಯೋಜಿಸಲಾಗಿರುವ ಭದ್ರತಾ ಸಿಬ್ಬಂದಿ ಪ್ರಯಾಣಿಕರು ಕೋವಿಡ್-19 … Continued

42, 848 ರಕ್ಷಣಾ ಸಿಬ್ಬಂದಿಗೆ ಕೊವಿಡ್ ಪಾಸಿಟಿವ್

ನವ ದೆಹಲಿ: ಈವರೆಗೆ ಒಟ್ಟಾರೆ, 42 848 ರಕ್ಷಣಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿರುವುದಾಗಿ ರಕ್ಷಣಾ ಖಾತೆ ಸಹಾಯಕ ಸಚಿವ ಶ್ರೀಪಾದ್ ನಾಯಕ್ ರಾಜ್ಯಸಭೆಗೆ ಸೋಮವಾರ ತಿಳಿಸಿದ್ದಾರೆ. ಭೂಸೇನೆಯಲ್ಲಿ 32,690 ಕೋವಿಡ್-19 ಪಾಸಿಟಿವ್ ಪ್ರಕರಣಗಳಿದ್ದು, ಶೇ. 0.24 ರಷ್ಟು ಮರಣ ಪ್ರಮಾಣವಿದೆ. ಭಾರತೀಯ ವಾಯುಪಡೆ ಮತ್ತು ನೌಕಪಡೆಯಲ್ಲಿ ಕ್ರಮವಾಗಿ 6,554 ಮತ್ತು 3,604 ಕೋವಿಡ್ ಪಾಸಿಟಿವ್ … Continued

ಮಹಾರಾಷ್ಟ್ರದಲ್ಲಿ ಮತ್ತೆ ೧೦ ಸಾವಿರದ ಸಮೀಪ ತಲುಪಿದ ಕೋವಿಡ್‌ ಪ್ರಕರಣಗಳ ಸಂಖ್ಯೆ

ಮಹಾರಾಷ್ಟ್ರದಲ್ಲಿ ಬುಧವಾರ 9,855 ಹೊಸ ಸಿಒವಿಐಡಿ -19 ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಸೋಂಕಿನ ಪ್ರಮಾಣ 21,79,185 ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಹಳ ಸಮಯದ ನಂತರ ರಾಜ್ಯದಲ್ಲಿ 9,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದರೆ, 42 ಹೊಸ ಸಾವುನೋವುಗಳೊಂದಿಗೆ ಸಾವಿನ ಸಂಖ್ಯೆ 52,280 ಕ್ಕೆ ಏರಿದೆ. ಮಹಾರಾಷ್ಟ್ರದ ಕೊವಿಡ್‌-19 ಪ್ರಕರಣಗಳ ಚೇತರಿಕೆ … Continued

ಕೊವಿಡ್‌ಗೆ ಮತ್ತೊಬ್ಬ ಬಿಜೆಪಿ ಸಂಸದ ಸಾವು

ಭೋಪಾಲ್: ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಬಿಜೆಪಿ ಸಂಸದ ನಂದಕುಮಾರ್ ಸಿಂಗ್ ಚೌಹಾಣ್ ಅವರು ಗುರುಗ್ರಾಮ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 69 ವರ್ಷ ವಯಸ್ಸಿಯ ಚೌಹಾಣ್ ಅವರು ಈ ಕ್ಷೇತ್ರದಿಂದ ಆರು ಬಾರಿ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದರು. ಇತ್ತೀಚೆಗೆ ಕೋವಿಡ್-19 ಪಾಸಿಟಿವ್ ಸೋಂಕಿನಿಂದ ಗುರುಗ್ರಾಮ್‍ದ ಮೇದಾಂತ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ರಾತ್ರಿ ತೀವ್ರ ಉಸಿರಾಟ ತೊಂದರೆಯುಂಟಾಗಿ … Continued

ಭಯವಿಲ್ಲದೆ ಕೋವಿಡ್‌ ಲಸಿಕೆ ಪಡೆಯಿರಿ: ಸಚಿವ ಸುಧಾಕರ

ಶಿರಸಿ: ಮೂರನೇ ಹಂತದ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಿದ್ದು, ಯಾವುದೇ ವದಂತಿಗಳಿಗೆ ಕಿವಿಗೊಡದೆ ವಿಶ್ವಾಸದಿಂದ ಲಸಿಕೆ ಪಡೆಯಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಶಿರಸಿಯಲ್ಲಿ ಕೋವಿಡ್ ಲಸಿಕೆ ಅಭಿಯಾನದ ೩ನೇ ಹಂತಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೊದಲ ಹಂತದ ಕೋವಿಡ್ ಲಸಿಕೆ ಬೆಂಗಳೂರು, ಎರಡನೇ ಹಂತದ ಲಸಿಕೆ ಹೈದರಾಬಾದ್ ಕರ್ನಾಟಕ ಹಾಗೂ … Continued

ಕೊವಿಡ್‌ ಸಂದರ್ಭದಲ್ಲಿ ಜೀವವಿಮೆ ಈಗ ಹೆಚ್ಚಿನ ಆದ್ಯತೆ ಪ್ರಾಡಕ್ಟ್‌: ಸಮೀಕ್ಷೆಯಲ್ಲಿ ಬೆಳಕಿಗೆ..!

ಆರೋಗ್ಯ ತುರ್ತು ಪರಿಸ್ಥಿತಿಗಳ ವಿರುದ್ಧ ಕುಟುಂಬ ರಕ್ಷಣೆಗೆ ವಿಮೆ ಹೆಚ್ಚು ಆದ್ಯತೆ ಹಣಕಾಸು ಉತ್ಪನ್ನವಾಗಿದೆ. ಈಗ ಕೊವಿಡ್‌-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕುಟುಂಬದ ಹಿತರಕ್ಷಣೆಗೆ ಕಾಳಜಿ ತೋರಿರುವ ಹೆಚ್ಚಿನ ಜನರು ಮುಂದಿನ ಆರು ತಿಂಗಳಲ್ಲಿ ವಿಮಾ ಉತ್ಪನ್ನಗಳಲ್ಲಿ ಹೂಡಿಕೆ ಮಾಡಲು ಒಲವು ತೋರುತ್ತಿದ್ದಾರೆ ಎಂದು ಟಾಟಾ ಎಐಎ ಲೈಫ್ ಇನ್ಶುರೆನ್ಸ್‌ನ ಸಮೀಕ್ಷೆಯೊಂದು ತಿಳಿಸಿದೆ. ಸಂಶೋಧನಾ ಸಂಸ್ಥೆ … Continued

ಕೊರೊನಾ ಹೆಚ್ಚಳ: ಪುಣೆಯಲ್ಲಿ ಶಾಲೆಗಳು ಮಾ.೧೪ರ ವರೆಗೆ ಸ್ಥಗಿತ

ಪುಣೆಯಲ್ಲಿ ಸಿಒವಿಐಡಿ -19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪುಣೆ ಜಿಲ್ಲಾಡಳಿತ ಭಾನುವಾರ ರಾತ್ರಿ ಕರ್ಫ್ಯೂ ಮತ್ತು ಶಾಲೆಗಳನ್ನು ಸ್ಥಗಿತಗೊಳಿಸಿರುವುದನ್ನು ಮಾರ್ಚ್ 14ರ ವರೆಗೆ ವಿಸ್ತರಿಸಿದೆ. ಅಗತ್ಯ ಸೇವೆಗಳನ್ನು ಕರ್ಫ್ಯೂನಿಂದ ವಿನಾಯಿತಿ ನೀಡಲಾಗಿದೆ. ಫೆಬ್ರವರಿ 28 ರ ವರೆಗೆ ಪುಣೆ ನಗರದಲ್ಲಿ ವಿಧಿಸಲಾದ ಸಿಒವಿಐಡಿ -19 ನಿರ್ಬಂಧಗಳನ್ನು ಮಾರ್ಚ್ 14ರ ವರೆಗೆ ವಿಸ್ತರಿಸಲಾಗಿದೆ” ಎಂದು ಪುಣೆ ಮೇಯರ್‌ … Continued