ಉತ್ತರ ಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡು ಮಾಯಾವತಿಯನ್ನು ಸಿಎಂ ಅಭ್ಯರ್ಥಿ ಮಾಡುವುದಾಗಿ ಆಫರ್‌ ನೀಡಿದ್ದೆವು, ಆದ್ರೆ ಅವರು ಸ್ಪಂದಿಸಲೇ ಇಲ್ಲ: ರಾಹುಲ್ ಗಾಂಧಿ

ನವದೆಹಲಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ವೇಳೆ ಬಹುಜನ್ ಸಮಾಜವಾದಿ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳಲು ಹಾಗೂ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿಯವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲು ಕಾಂಗ್ರೆಸ್ ಅವರಿಗೆ ಆಫರ್‌ ನೀಡಿತ್ತು. ಆದರೆ ಮಾಯಾವತಿ ನಮ್ಮ ಜತೆ ಮಾತನಾಡಲೇ ಇಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ನಾವು ಬಿಎಸ್‌ಪಿ ಜತೆ ಮೈತ್ರಿ ಸಾಧಿಸಲು … Continued

ಕಾಂಗ್ರೆಸ್ ಕಾರ್ಯಕಾರಿಯಲ್ಲಿ ಸಭೆಯಲ್ಲಿ ಸೋನಿಯಾ ಗಾಂಧಿ, ರಾಹುಲ್, ಪ್ರಿಯಾಂಕಾ ರಾಜೀನಾಮೆ..?

ನವದೆಹಲಿ: ಐದು ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲಿನ ಹೊಣೆ ಹೊತ್ತು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಅವರ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಭಾನುವಾರ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷವು (ಎಎಪಿ) ಕಾಂಗ್ರೆಸ್ ಅಧಿಕಾರದಿಂದ … Continued

ನಮಗೆ ಭಯ ಇರದವರು ಬೇಕು, ಹೆದರುವವರು ಆರ್​ಎಸ್​ಎಸ್​​ಗೆ ಹೋಗಬಹುದು’:ಪಕ್ಷ ತೊರೆದವರಿಗೆ ರಾಹುಲ್ ಗಾಂಧಿ ಟಾಂಗ್‌

ನವದೆಹಲಿ: ಭಯ ಇರದ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಬೇಕು. ಪಕ್ಷದಲ್ಲಿ ಇರುವುದಕ್ಕೆ ಭಯಪಡುವವರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಪಕ್ಷದ ಸಾಮಾಜಿಕ ಜಾಲತಾಣದ ತಂಡದೊಂದಿಗೆ ನಡೆಸಿದ ಮಾತುಕತೆಯ ವೇಳೆ ಅವರು ಈ ಮಾತನ್ನು ಹೇಳಿದ್ದಾರೆ. ತನ್ಮೂಲಕ, ಕಾಂಗ್ರೆಸ್ ಪಕ್ಷ ತೊರೆದ ಹಾಗೂ ಪಕ್ಷಕ್ಕೆ ಸಮಸ್ಯೆ ಉಂಟಾಗುವಂತೆ ವ್ಯವಹರಿಸುತ್ತಿರುವ ನಾಯಕರಿಗೆ ಕಟು … Continued

ಸದ್ದಾಂ ಹುಸೇನ್, ಗಡಾಫಿ ಸಹ ಚುನಾವಣೆ ಗೆಲ್ಲುತ್ತಿದ್ದರು: ಬಿಜೆಪಿ ವಿರುದ್ಧ ರಾಹುಲ್‌ ವಾಗ್ದಾಳಿ

ನವ ದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇರಾಕ್​ನ ಸರ್ವಾಧಿಕಾರಿ ಸದ್ದಾಂ ಹುಸೇನ್ ಮತ್ತು ಲಿಬಿಯಾದ ಮುಅಮ್ಮರ್ ಗಡಾಫಿ ಕೂಡಾ ಚುನಾವಣೆ ಗೆಲ್ಲುತ್ತಿದ್ದರು ಎಂದು ಹೇಳಿದ್ದಾರೆ. ಮಂಗಳವಾರ ಅಮೆರಿಕದ ಬ್ರೌನ್ ಯುನಿವರ್ಸಿಟಿಯ ಪ್ರೊಫೆಸರ್ ಅಶುತೋಷ್ ವಾರ್ಷ್ಣೆ ಅವರೊಂದಿಗೆ ಆನ್​ಲೈನ್ ಸಂವಾದ ನಡೆಸಿದ ರಾಹುಲ್, 21ನೇ ಶತಮಾನದಲ್ಲಿ ಸಾಮಾಜಿಕ ಮಾಧ್ಯಮ … Continued

ಕೊವಿಡ್‌ನಲ್ಲಿ ಎ‌ಲ್ಲರೂ ಹಣ್ಣಾಗಿರುವಾಗ ಅದಾನಿ ಸಂಪತ್ತು ಶೇ.50 ವೃದ್ಧಿ ಹೇಗೆ; ರಾಹುಲ್ ಗಾಂಧಿ ಪ್ರಶ್ನೆ

ನವ ದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ಅತ್ಯಂತ ಕಠಿಣ ಸಮಯದಲ್ಲಿ ಎಲ್ಲರೂ ಹೆಣಗಾಡಿ ಹಣ್ಣಾಗಿರುವಾಗ ಉದ್ಯಮಿ ಗೌತಮ್ ಅದಾನಿ ಸಂಪತ್ತನ್ನು ಹೇಗೆ ನಿರೀಕ್ಷೆಗೂ ಮೀರಿ ಹೆಚ್ಚಿಸಿಕೊಂಡರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಬ್ಲೂಮ್‌ಬರ್ಗ್ ವರದಿ ಉಲ್ಲೇಖಿಸಿ ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ, 2021ರ ಸಂಪತ್ತು ಗಳಿಕೆಯಲ್ಲಿ ಇಡೀ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಅದಾನಿ 12 … Continued

ರೈತರ ಆಂದೋಲನಕ್ಕೆ ಧ್ವನಿಯಾಗುವವರ ವಿರುದ್ಧ ಐಟಿ ದಾಳಿ; ರಾಹುಲ್‌

ನವ ದೆಹಲಿ:ದೇಶದಲ್ಲಿ ನಡೆಯುತ್ತಿರುವ ರೈತರ ಆಂದೋಲನಕ್ಕೆ ಧ್ವನಿಗೂಡಿಸುವವರ ವಿರುದ್ಧ ಮೋದಿ ಸರ್ಕಾರ ದಾಳಿ ನಡೆಸಿ ಅದನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಕಾಂಗ್ರೆಸ್ ಮುಖಂಡ ರಾಹುಲ್ ಗುರುವಾರ ಮೂರು ಖ್ಯಾತ ಹಿಂದಿ ಪದ್ಯಗಳ ಸಾಲುಗಳನ್ನು ಬಳಸುವ ಮೂಲಕ ಕೇಂದ್ರ ಸರ್ಕಾರವನ್ನು ಟೀಕಿಸಿದರು. ರೈತರ ಪರವಾಗಿರುವವರ ಮೇಲೆ ದಾಳಿ ನಡೆಸಿದ್ದಾರೆ … Continued

“ಮೋದಿ ಉದ್ಯೋಗ ಕೊಡಿʼ ಟ್ವಿಟರ್‌ ಅಭಿಯಾನದಲ್ಲಿ ಪಾಲ್ಗೊಂಡ ರಾಹುಲ್‌ ಗಾಂಧಿ

ನಿರುದ್ಯೋಗಿ ಯುವಕರು ಉದ್ಯೋಗಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಸುತ್ತಿರುವ “ಮೋದಿ ಉದ್ಯೋಗ ಕೊಡಿ” ಅಭಿಯಾನವನ್ನು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಸೇರಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಟ್ವಿಟರ್ ಬಳಕೆದಾರರು “ಮೋದಿ ಜಾಬ್‌ ದೊʼ, “ಮೋದಿ ರೋಜಗಾರ್‌ ದೊʼ ಎಂಬ ಹಾಷ್‌ಟ್ಯಾಗ್‌ ಬಳಕೆ ಮಾಡಿಕೊಂಡು ಉದ್ಯೋಗ ಕೇಳುವ ಅಭಿಯಾನ ನಡೆಸುತ್ತಿದ್ದಾರೆ. ಪ್ರತಿಭಟನಾ ನಿರತ ಯುವಕರೊಂದಿಗೆ ಸೇರಿಕೊಂಡ ರಾಹುಲ್ ಗುರುವಾರ … Continued

ರಾಹುಲ್‌ ಗಾಂಧಿ ವಲಸೆ ನಾಯಕ: ಸಚಿವ ಪ್ರಹ್ಲಾದ ಜೋಶಿ ಟೀಕೆ

ಅಮೇಥಿ ಕ್ಷೇತ್ರದ ಜನರು ತಿರಸ್ಕರಿಸಿದ ನಂತರ ಆಶ್ರಯಕ್ಕಾಗಿ ಕೇರಳದ ವೈನಾಡ್‌ಗೆ ಬಂದಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಒಬ್ಬ ವಲಸೆ ನಾಯಕ ಎಂದು ಬಿಜೆಪಿ ಮುಖಂಡ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದ್ದಾರೆ. ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿದರೆ ಏನನ್ನೂ ಪಡೆಯಲು ಸಾಧ್ಯವಿಲ್ಲ ಎಂಬುದು ಕೇರಳ ಜನರಿಗೆ ಮನವರಿಕೆಯಾಗಿದೆ ಎಂದರು. ಶಬರಿಮಲೈ ದೇವಸ್ಥಾನದಲ್ಲಿ ಎಲ್ಲ ವಯಸ್ಸಿನ … Continued

ಮೋದಿ ಲೂಟಿಕೋರ; ರಾಹುಲ್‌ ಗಾಂಧಿ ಆರೋಪ

ಕೊರೊನಾ ಸಂಕಷ್ಟದ ಸಮಯದಲ್ಲಿ ಸಾರ್ವಜನಿಕರ ಹಣವನ್ನು ಲೂಟಿ ಮಾಡಿದ ಪ್ರಧಾನಿ ಮೋದಿ ಕಾರ್ಪೋರೇಟ್‌ಗಳತ್ತ ಗಮನ ಹರಿಸಿ ತಮ್ಮ ಇಬ್ಬರು ಸ್ನೇಹಿತರ ಸಾಲವನ್ನು ಮನ್ನಾ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ನೇರ ಆರೋಪ ಮಾಡಿದ್ದಾರೆ. ಕೊವಿಡ್‌-೧೯ ಸಂದರ್ಭದಲ್ಲಿ ಮೋದಿ ಸಾರ್ವಜನಿಕರ ಹಣವನ್ನು ಲೂಟಿಗೈದಿದ್ದಾರೆ ಎಂದರು. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಆಸ್ಸಾಂ ರಾಜ್ಯವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದು, … Continued

ರೈತ ವಿರೋಧಿ ಕಾನೂನುಗಳು ದೇಶವಾಸಿಗಳ ಮೇಲೆ ನಡೆಸಿದ ದಾಳಿ: ರಾಹುಲ್‌ ಗಾಂಧಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ದಾಳಿ ಮುಂದುವರೆಸಿದ ರಾಹುಲ್‌ ಗಾಂಧಿ, ರೈತ ವಿರೋಧಿ ಮೂರು ಕಾನೂನುಗಳು ಕೇವಲ ರೈತರ ಮೇಲಷ್ಟೇ ಅಲ್ಲ, ದೇಶದ ಶೇ.೪೦ರಷ್ಟು ಜನರ ಮೇಲೆ ನಡೆಸಿದ ಆಕ್ರಮಣವಾಗಿದೆ ಎಂದು ತಿಳಿಸಿದ್ದಾರೆ. ಅವರು ರಾಜಸ್ಥಾನದಲ್ಲಿ ರೈತರ ಆಂದೋಲನ ಬೆಂಬಲಿಸಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿ, ಉತ್ತಮ ಭವಿಷ್ಯ ಖಚಿತಪಡಿಸಿಕೊಳ್ಳಲು … Continued