ಪ್ರಧಾನಿ ಮೋದಿ ಭೇಟಿ ಫಲಶ್ರುತಿ; ತನ್ನಸೇನೆ ಸೇರಿದ್ದ ಭಾರತೀಯರ ಬಿಡುಗಡೆಗೆ ರಷ್ಯಾ ಸಮ್ಮತಿ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಭೇಟಿ ವೇಳೆ ಭಾರತಕ್ಕೆ ದೊಡ್ಡ ಗೆಲುವು ಲಭಿಸಿದೆ. ರಷ್ಯಾ ಸೇನೆಗೆ ನಿಯೋಜನೆಗೊಂಡಿದ್ದ ಭಾರತೀಯರನ್ನು ಬಿಡುಗಡೊಳಿಸಲು ರಷ್ಯಾ ಅಧ್ಯಕ್ಷ ಪುತಿನ್‌ ಸಮ್ಮತಿ ಸೂಚಿಸಿದ್ದಾರೆ. ಎರಡು ದಿನಗಳ ಅಧಿಕೃತ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಭೇಟಿ ಸಂದರ್ಭದಲ್ಲಿ ಈ ನಿರ್ಧಾರ ಹೊರ ಬಿದ್ದಿದೆ. … Continued

ಜನರು 3ನೇ ಬಾರಿಗೆ ಎನ್‌ಡಿಎ ಮೇಲೆ ನಂಬಿಕೆ ಇಟ್ಟಿದ್ದಾರೆ, ಐತಿಹಾಸಿಕ ಕ್ಷಣ : ಚುನಾವಣಾ ಫಲಿತಾಂಶಗಳ ನಂತರ ಪ್ರಧಾನಿ ಮೋದಿ

ನವದೆಹಲಿ: ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (ಎನ್‌ಡಿಎ) ಸತತ ಮೂರನೇ ಗೆಲುವು ತಂದುಕೊಟ್ಟಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಭಾರತದ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ. “ಜನರು ಸತತ ಮೂರನೇ ಬಾರಿಗೆ ಎನ್‌ಡಿಎಯಲ್ಲಿ ನಂಬಿಕೆ ಇಟ್ಟಿರುವುದು ಭಾರತದ ಇತಿಹಾಸದಲ್ಲಿ ಐತಿಹಾಸಿಕ ಸಾಧನೆಯಾಗಿದೆ” ಎಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. “ಜನತಾ ಜನಾರ್ದನರ ಈ ಪ್ರೀತಿಗಾಗಿ ನಾನು ನಮಸ್ಕರಿಸುತ್ತೇನೆ ಮತ್ತು … Continued

ವೀಡಿಯೊಗಳು..| ಲೋಕಸಭಾ ಚುನಾವಣಾ ಪ್ರಚಾರ ಅಂತ್ಯ : ಕನ್ಯಾಕುಮಾರಿಯ ವಿವೇಕಾನಂದ ಬಂಡೆ ಸ್ಮಾರಕದಲ್ಲಿ 2 ದಿನಗಳ ಧ್ಯಾನ ಆರಂಭಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಬಂಡೆ ಸ್ಮಾರಕ ( Vivekananda Rock Memorial)ದಲ್ಲಿ ತಮ್ಮ ಎರಡು ದಿನಗಳ ಧ್ಯಾನವನ್ನು ಆರಂಭಿಸಿದರು. ಪ್ರಧಾನಿ ಮೋದಿಯವರು ಮೇ 30 ರ ಸಂಜೆಯಿಂದ ಜೂನ್ 1 ರ ಸಂಜೆ ವರೆಗೆ ಸುಮಾರು 45 ಗಂಟೆಗಳ ಕಾಲ ಆಧ್ಯಾತ್ಮಿಕ ಪ್ರವಾಸದಲ್ಲಿದ್ದಾರೆ. ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಸ್ಥಳದಲ್ಲಿಯೇ … Continued

” ಅಫಿಡವಿಟ್ ಗೆ ನಾನೇ ಸಹಿ ಮಾಡಿದ್ದು ” : ಮಹುವಾ ಮೊಯಿತ್ರಾ ಆರೋಪ ನಿರಾಕರಿಸಿದ ಉದ್ಯಮಿ ದರ್ಶನ್ ಹಿರಾನಂದಾನಿ

ನವದೆಹಲಿ: ಉದ್ಯಮಿ ದರ್ಶನ್ ಹಿರಾನಂದಾನಿ ಅವರು ತಮ್ಮ ಸ್ಫೋಟಕ ಅಫಿಡವಿಟ್ ಕುರಿತು ಸೋಮವಾರ ಮೌನ ಮುರಿದಿದ್ದಾರೆ ಹಾಗೂ ತಾವು ಅದನ್ನು ಯಾವುದೇ ಒತ್ತಡದಲ್ಲಿ ಅದನ್ನು ಸಲ್ಲಿಸಿಲ್ಲ ಎಂದು ಹೇಳಿದ್ದಾರೆ. ಪ್ರಸ್ತುತ ” ಪ್ರಶ್ನೆ ಕೇಳಿದ್ದಕ್ಕಾಗಿ ಹಣ” ಪಡೆದ ಆರೋಪಗಳ ವಿರುದ್ಧ ಹೋರಾಡುತ್ತಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ದರ್ಶನ್‌ ಹಿರಾನಂದಾನಿ ಒತ್ತಡದಲ್ಲಿ ಸಹಿ … Continued

ಕಾಂಗ್ರೆಸ್ ನನ್ನನ್ನು 91 ಬಾರಿ ನಿಂದಿಸಿದೆ, ಆದರೆ ನಾನು… : ಮೋದಿ ವಿಷದ ಹಾವಿದ್ದಂತೆ ಎಂಬ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ ಪ್ರಧಾನಿ ಮೋದಿ

ಬೀದರ: ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ‘ವಿಷಪೂರಿತ ಹಾವು ಇದ್ದಂತೆ’ ಎಂದು ಗೇಲಿ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ತಿರುಗೇಟು ನೀಡಿದ್ದಾರೆ. ಬೀದರಿನ ಹುಮನಾಬಾದ್‌ನಲ್ಲಿ ಶನಿವಾರ ಬೆಳಿಗ್ಗೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ತಮ್ಮ ವಿರುದ್ಧ ನೀಡಿದ್ದ ‘ವಿಷಪೂರಿತ ಹಾವು’ ಹೇಳಿಕೆ ಉಲ್ಲೇಖಿಸಿ ಕಾಂಗ್ರೆಸ್ … Continued

ಸ್ವತಂತ್ರ ಭಾರತದ ಅತ್ಯುತ್ತಮ ಪ್ರಧಾನಿ : ಮೋದಿ, ಇಂದಿರಾ ಅಥವಾ ಅಟಲ್ ಅಥವಾ ಇನ್ನಾರು..?

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇದೆ. ಈ ಸಮಯದಲ್ಲಿ ಸಿ-ವೋಟರ್ ಇತ್ತೀಚೆಗೆ ರಾಷ್ಟ್ರದ ಮನಸ್ಥಿತಿಯನ್ನು ಅಳೆಯಲು ಮತ್ತು ಪ್ರಸ್ತುತ ಭಾರತದಲ್ಲಿ ಅತ್ಯಂತ ಜನಪ್ರಿಯ ರಾಜಕೀಯ ನಾಯಕ ಯಾರು ಎಂದು ತಿಳಿಯಲು ಸಮೀಕ್ಷೆಯೊಂದನ್ನು ನಡೆಸಿದೆ. ಸಮೀಕ್ಷೆಯಲ್ಲಿ, ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಮತ್ತು ನರೇಂದ್ರ ಮೋದಿ … Continued

ಬಿಹಾರದಲ್ಲಿ ಕೋವಿಡ್ -19 ಪರೀಕ್ಷೆಗೆ ಒಳಗಾದವರು-ಲಸಿಕೆ ಪಡೆದವರಲ್ಲಿ ಪ್ರಧಾನಿ ಮೋದಿ,ಅಮಿತ್‌ ಶಾ, ಸೋನಿಯಾ ಗಾಂಧಿ ಹೆಸರು..!

ಪಟನಾ: ನರೇಂದ್ರ ಮೋದಿ, ಅಮಿತ್ ಶಾ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಚೋಪ್ರಾ ಮತ್ತು ಅಕ್ಷಯ್ ಕುಮಾರ್ ಇವುಗಳು ದಕ್ಷಿಣ ಬಿಹಾರ ಜಿಲ್ಲೆಯ ವಿವರಿಸಲಾಗದ ಗ್ರಾಮೀಣ ಪ್ರದೇಶದ ನಿವಾಸಿಗಳ ಹೆಸರುಗಳಾಗಿವೆ. ರಾಜ್ಯ ಆರೋಗ್ಯ ಇಲಾಖೆಯನ್ನು ನಂಬುವುದಾದರೆ, ಅವರೆಲ್ಲರೂ ಅರ್ವಾಲ್ ಜಿಲ್ಲೆಯ ಕರ್ಪಿ ಪಂಚಾಯತ್‌ನಲ್ಲಿ ಕೋವಿಡ್ -19ಕ್ಕಾಗಿ “ಪರೀಕ್ಷೆ ಮಾಡಿಸಿದ ಮತ್ತು ಲಸಿಕೆ” ಪಡೆದ ಗ್ರಾಮಸ್ಥರು…! … Continued

ಭಾರತಕ್ಕೆ ಇಂದು ರಷ್ಯಾ ಅಧ್ಯಕ್ಷ ಪುಟಿನ್‌ ಆಗಮನ: ಹಲವು ಒಪ್ಪಂದ ಸಾಧ್ಯತೆ

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಅವರು ಇಂದು ಭಾರತಕ್ಕೆ ಆಗಮಿಸಲಿದ್ದು, ವ್ಯಾಪಾರ, ಇಂಧನ, ಸಂಸ್ಕೃತಿ, ರಕ್ಷಣೆ, ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವು ಒಪ್ಪಂದಗಳಿಗೆ ಭಾರತ ಮತ್ತು ರಷ್ಯಾ ಸಹಿ ಹಾಕಲಿವೆ. ಮುಖ್ಯವಾಗಿ ಭಾರತದಲ್ಲೇ ಎಕೆ-203 ರೈಫ‌ಲ್‌ಗ‌ಳ ತಯಾರಿಕೆಗೆ ರಷ್ಯಾದ ಸಹಭಾಗಿತ್ವದ ಒಪ್ಪಂದಕ್ಕೂ ಸಹಿ ಬೀಳಲಿದೆ. ಈ ಮೂಲಕ ಭಾರತ ಮತ್ತು ರಷ್ಯಾ … Continued

ಅಫ್ಘನ್ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ- ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಚರ್ಚೆ: ಭಯೋತ್ಪಾದನೆ ಪ್ರಸರಣದ ಬಗ್ಗೆ ಕುರಿತು ಉಭಯ ನಾಯಕರ ಕಳವಳ

ನವದೆಹಲಿ: ತಾಲಿಬಾನ್ ಸ್ವಾಧೀನಕ್ಕೆ ಹೋದ ನಂತರದಲ್ಲಿ ಅಫ್ಘಾನಿಸ್ತಾನದಲ್ಲಿನ ಹಾಲಿ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರನ್ ಚರ್ಚೆ ನಡೆಸಿದ್ದು, ಭಯೋತ್ಪಾದನೆ ಪ್ರಸರಣ ಕುರಿತು ಉಭಯ ನಾಯಕರ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮಂಗಳವಾರ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, … Continued

ಲೋಕಸಭೆ ಚುನಾವಣೆಯಲ್ಲಿ ದೀದಿ ವಾರಾಣಸಿ ಸ್ಪರ್ಧೆ: ಜೈ ಶ್ರೀರಾಂ ಘೋಷಣೆಯೊಂದಿಗೆ ಮೋದಿ ಆಹ್ವಾನ

2024ರಲ್ಲಿ ವಾರಾಣಸಿಯಿಂದ ಪ್ರಧಾನಿ ಮೋದಿ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧಿಸಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್‌ ಶುಕ್ರವಾರ ಹೇಳಿದ ಬೆನ್ನಲ್ಲೇ ಜೈ ಶ್ರೀರಾಮ್ ಘೋಷಣೆಯೊಂದಿಗೆ ಮಮತಾ ಬ್ಯಾನರ್ಜಿಯವರನ್ನು ತಮ್ಮ ವಿರುದ್ಧ ವಾರಾಣಸಿಯಲ್ಲಿ ಸ್ಪರ್ಧಿಸಲು ಆಹ್ವಾನಿಸಿದ್ದಾರೆ. ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದ ಸನರ್ಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಚುನಾವಣಾ ಸಮಾವೇಶದಲ್ಲಿ ಶನಿವಾರ ಮಾತನಾಡಿದ … Continued