ಭಾರತಕ್ಕೆ ಇಂದು ರಷ್ಯಾ ಅಧ್ಯಕ್ಷ ಪುಟಿನ್‌ ಆಗಮನ: ಹಲವು ಒಪ್ಪಂದ ಸಾಧ್ಯತೆ

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಅವರು ಇಂದು ಭಾರತಕ್ಕೆ ಆಗಮಿಸಲಿದ್ದು, ವ್ಯಾಪಾರ, ಇಂಧನ, ಸಂಸ್ಕೃತಿ, ರಕ್ಷಣೆ, ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವು ಒಪ್ಪಂದಗಳಿಗೆ ಭಾರತ ಮತ್ತು ರಷ್ಯಾ ಸಹಿ ಹಾಕಲಿವೆ.
ಮುಖ್ಯವಾಗಿ ಭಾರತದಲ್ಲೇ ಎಕೆ-203 ರೈಫ‌ಲ್‌ಗ‌ಳ ತಯಾರಿಕೆಗೆ ರಷ್ಯಾದ ಸಹಭಾಗಿತ್ವದ ಒಪ್ಪಂದಕ್ಕೂ ಸಹಿ ಬೀಳಲಿದೆ. ಈ ಮೂಲಕ ಭಾರತ ಮತ್ತು ರಷ್ಯಾ ನಡುವಿನ ಹಳೆಯ ಸ್ನೇಹವನ್ನು ಇನ್ನಷ್ಟು ಗಟ್ಟಿಗೊಳಿಸಲು ಉಭಯ ದೇಶಗಳು ಸಜ್ಜಾಗಿವೆ.
ಅಲ್ಲದೆ ಎಲ್‌ಎಸಿಯಲ್ಲಿ ಚೀನಾದ ತೀವ್ರ ಚಟುವಟಿಕೆಗಳ ಮಧ್ಯೆ ಪುಟಿನ್‌ ಅವರ ಭಾರತದ ಭೇಟಿ ಮಹತ್ವ ಪಡೆದಿದೆ. ರೆಸಿಪ್ರೋಕಲ್‌ ಎಕ್ಸ್‌ಚೇಂಜ್‌ ಆಫ್ ಲಾಜಿಸ್ಟಿಕ್ಸ್‌ ಅಗ್ರೀಮೆಂಟ್‌(ರೀಲೋಸ್‌)ಗೆ ಕೂಡ ಭಾರತ ಮತ್ತು ರಷ್ಯಾ ಸಹಿ ಹಾಕುವ ನಿರೀಕ್ಷೆಯಿದೆ.
ಈ ಒಪ್ಪಂದ ನಡೆದರೆ, ಎರಡೂ ದೇಶಗಳ ಸೇನೆಗಳು ಬೇರೊಂದು ನೆಲದಲ್ಲಿ ಕಾರ್ಯನಿರ್ವಹಿಸುವ ವೇಳೆ ಪರಸ್ಪರ ಇಂಧನ ಹಾಗೂ ಇತರ ಸೌಕರ್ಯಗಳ ನೆರವು ಪಡೆ ಯಲು ಅನುಕೂಲವಾಗಲಿದೆ.
ರಷ್ಯಾದಿಂದ ಎಸ್‌-400 ಕ್ಷಿಪಣಿ ರಕ್ಷಣ ವ್ಯವಸ್ಥೆಯನ್ನು ಖರೀದಿಸಲು ಭಾರತ ಮುಂದಾಗಿರುವುದಕ್ಕೆ ಅಮೆರಿಕ ಈಗಾಗಲೇ ವಿರೋಧ ವ್ಯಕ್ತ ಪಡಿಸಿದೆ. ಆದರೂ ರಕ್ಷಣ ಸಾಮಗ್ರಿಗಳ ಖರೀದಿಯಲ್ಲಿ ವ್ಯೂಹಾತ್ಮಕ ಸ್ವಾಯತ್ತೆಯನ್ನು ಮುಂದುವರಿಸುವುದಾಗಿ ಭಾರತ ಸ್ಪಷ್ಟಪಡಿಸಿದೆ.ಪುಟಿನ್‌ ಅವರು ಸೋಮವಾರ ಬೆಳಗ್ಗೆ ಭಾರತಕ್ಕೆ ಬಂದಿಳಿದು, ಪ್ರಧಾನಿ ಮೋದಿ ಅವರು ಆಯೋಜಿಸಿರುವ ಔತಣಕೂಟದಲ್ಲಿ ಪಾಲ್ಗೊಂಡು ರಾತ್ರಿಯೇ ರಷ್ಯಾಗೆ ಮರಳಲಿದ್ದಾರೆ. ಕೊರೊನಾ ಸೋಂಕು ವ್ಯಾಪಿಸಲು ಆರಂಭವಾದ ಬಳಿಕ ಪುತಿನ್‌ ಅವರ ಎರಡನೇ ವಿದೇಶ ಭೇಟಿ ಇದಾಗಿದೆ.

ಪ್ರಮುಖ ಸುದ್ದಿ :-   ಗೂಢಲಿಪಿ ಬಹಿರಂಗಗೊಳಿಸಲು ಒತ್ತಾಯಿಸಿದರೆ ಭಾರತದಿಂದ ನಿರ್ಗಮಿಸಬೇಕಾಗ್ತದೆ ಎಂದ ವಾಟ್ಸಾಪ್

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement