ಪ್ರಧಾನಿ ಮೋದಿಗೆ ಸೆರಾವೀಕ್‌ ಜಾಗತಿಕ ಇಂಧನ-ಪರಿಸರ ನಾಯಕತ್ವ ಪ್ರಶಸ್ತಿ

ನವದೆಹಲಿ: ಮುಂದಿನ ವಾರ ನಡೆಯುವ ವಾರ್ಷಿಕ ಅಂತಾರಾಷ್ಟ್ರೀಯ ಇಂಧನ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೆರಾ ವೀಕ್‌ ಜಾಗತಿಕ ಇಂಧನ ಮತ್ತು ಪರಿಸರ ನಾಯಕತ್ವ ಪ್ರಶಸ್ತಿ ನೀಡಲಾಗುವುದು. ಮಾರ್ಚ್ 1 ರಿಂದ 5 ರವರೆಗೆ ನಡೆಯಲಿರುವ ಸೆರಾವೀಕ್ ಕಾನ್ಫರೆನ್ಸ್ -2021 ರಲ್ಲಿ ಪ್ರಧಾನಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಅದರ ಸಂಘಟಕ ಐಎಚ್‌ಎಸ್ ಮಾರ್ಕಿಟ್ … Continued

ಪಶ್ಚಿಮ ಬಂಗಾಳದಲ್ಲಿ ೮ ಹಂತದಲ್ಲಿ ಚುನಾವಣೆ ಆಯೋಜಿಸಲು ಮೋದಿ, ಶಾ ಸೂಚನೆಯಿದೆಯೇ?

ಕೋಲ್ಕತ್ತ: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಸೂಚನೆ ಮೇರೆಗೆ ಪಶ್ಚಿಮ ಬಂಗಾಳದಲ್ಲಿ ೮ ಹಂತಗಳಲ್ಲಿ ಮತದಾನ ನಿಗದಿಪಡಿಸಲಾಗಿದೆಯೇ ಎಂದು ಸಿಎಂ ಮಮತಾ ಬ್ಯಾನರ್ಜಿ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಆಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೆರಿ ಚುನಾವಣೆ ಮುಗಿದ ಬಳಿಕ ರಾಜ್ಯದಲ್ಲಿ ಪ್ರಚಾರ ನಡೆಸಲು ಮೋದಿ ಮತ್ತು ಶಾ ಅವರಿಗೆ … Continued

ಟ್ವಿಟರ್‌ ಮಾಹಿತಿ: ಬಿಜೆಪಿ ಕಾಲೆಳೆದ ಟ್ವೀಟಿಗರು

ಸಾಮಾಜಿಕ ಜಾಲತಾಣ ಹಾಗೂ ಓವರ್‌ ದಿ ಟಾಪ್‌ (ಒಟಿಟಿ) ವೇದಿಕೆಗಳ ಮಾರ್ಗಸೂಚಿ ಘೋಷಣೆ ಸಂದರ್ಭದಲ್ಲಿ ಸಚಿವರು ತಿಳಿಸಿದ ಅಂಕಿ ಅಂಶಗಳು ಬಿಜೆಪಿಯನ್ನು ಮುಜುಗರಕ್ಕೀಡುಮಾಡಿವೆ. ಮಾಹಿತಿ ತಂತ್ರಜ್ಞಾನ ಸಚಿವ ಸಚಿವ ರವಿಶಂಕರ ಪ್ರಸಾದ್‌ ಜಂಟಿ ಪತ್ರಿಕಾಗೋಷ್ಠಿಯಲ್ಲಿ ವ್ಯಾಟ್ಸ್‌ಪ್‌ ಬಳಕೆದಾರರು ೫೩ ಕೋಟಿ, ಯುಟ್ಯೂಬ್‌ ಬಳಕೆದಾರರು ೪೪.೮ ಕೋಟಿ, ಫೇಸ್‌ಬುಕ್‌ ೪೧ ಕೋಟಿ, ಇನ್ಸ್‌ಟಾಗ್ರಾಮ್‌ ೨೧ ಕೋಟಿ, ಟ್ವಿಟರ್‌ … Continued

“ಮೋದಿ ಉದ್ಯೋಗ ಕೊಡಿʼ ಟ್ವಿಟರ್‌ ಅಭಿಯಾನದಲ್ಲಿ ಪಾಲ್ಗೊಂಡ ರಾಹುಲ್‌ ಗಾಂಧಿ

ನಿರುದ್ಯೋಗಿ ಯುವಕರು ಉದ್ಯೋಗಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಸುತ್ತಿರುವ “ಮೋದಿ ಉದ್ಯೋಗ ಕೊಡಿ” ಅಭಿಯಾನವನ್ನು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಸೇರಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಟ್ವಿಟರ್ ಬಳಕೆದಾರರು “ಮೋದಿ ಜಾಬ್‌ ದೊʼ, “ಮೋದಿ ರೋಜಗಾರ್‌ ದೊʼ ಎಂಬ ಹಾಷ್‌ಟ್ಯಾಗ್‌ ಬಳಕೆ ಮಾಡಿಕೊಂಡು ಉದ್ಯೋಗ ಕೇಳುವ ಅಭಿಯಾನ ನಡೆಸುತ್ತಿದ್ದಾರೆ. ಪ್ರತಿಭಟನಾ ನಿರತ ಯುವಕರೊಂದಿಗೆ ಸೇರಿಕೊಂಡ ರಾಹುಲ್ ಗುರುವಾರ … Continued

ಪಶ್ಚಿಮ ಬಂಗಾಳ ಪರಿವರ್ತನೆಗೆ ಮನಸು ಮಾಡಿದೆ: ಪ್ರಧಾನಿ ಮೋದಿ

ಪಶ್ಚಿಮ ಬಂಗಾಳ ಪರಿವರ್ತನೆಗೆ ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ಹೂಗ್ಲಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ, ರಾಜ್ಯವು ಪರಿವರ್ತನೆಗೆ ಮನಸು ಮಾಡಿದೆ. ಜನರ ಉತ್ಸಾಹವು ಕೋಲ್ಕತ್ತದಿಂದ ದೆಹಲಿಗೆ ಸಂದೇಶ ಕಳಿಸುತ್ತಿದೆ ಎಂದರು. ಕಳೆದ ಬಾರಿ ನಾನು ಅನಿಲ ಸಂಪರ್ಕ ಯೋಜನೆಗೆ ಚಾಲನೆ ನೀಡಲು ಬಂದಿದ್ದೆ. ಆದರೆ ಈ ಬಾರಿ ರೈಲ್ವೆ ಸೌಲಭ್ಯಗಳನ್ನು ನೀಡಲು … Continued

ಯುವಕರು “ದೇಶ ಮೊದಲುʼ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು: ಪ್ರಧಾನಿ ಮೋದಿ

ಯುವಕರು “ದೇಶ ಮೊದಲುʼ ಎಂಬ ಮನೋಭಾವ ಅಳವಡಿಸಿಕೊಂಡರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಪ್ರಪಂಚಿನಾದ್ಯಂತ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಹರಡುತ್ತಿರುವ ಅನೇಕ ವಿದ್ಯಾವಂತರಿದ್ದಾರೆ, ಇನ್ನೊಂದೆಡೆ ಕೊರೊನಾದಂಥ ಸಾಂಕ್ರಾಮಿಕ ರೋಗಗಳಿಂದ ಜನರನ್ನು ರಕ್ಷಿಸಲು ಆಸ್ಪತ್ರೆಗಳು ಹಾಗೂ ಪ್ರಯೋಗಾಲಯಗಳಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಡುವ ಜನರೂ ಇದ್ದಾರೆ. ಎಲ್ಲವೂ ನಮ್ಮ ಮನಸ್ಥಿತಿಯನ್ನು ಅವಲಂಬಿಸಿದೆ. … Continued

ಸ್ಟಾರ್ಟಪ್‌ಗಳನ್ನು ವಿಶ್ವ ಗುಣಮಟ್ಟದ ಸೇವೆ ನೀಡುವ ಸಂಸ್ಥೆಯನ್ನಾಗಿ ರೂಪಿಸಿ: ಪ್ರಧಾನಿ ಮೋದಿ

ಸ್ಟಾರ್ಟಪ್‌ಗಳ ಸಂಸ್ಥಾಪಕರು ಕೇವಲ ಮೌಲ್ಯಮಾಪನದ ಬಗ್ಗೆ ತಲೆಕೆಡಿಸಿಕೊಳ್ಳದೇ ವಿಶ್ವ ಗುಣಮಟ್ಟದ ಸೇವೆ ಒದಗಿಸುವ ಸಂಸ್ಥೆಗಳನ್ನು ಕಟ್ಟುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ನಾಸ್ಕಾಂ ಟೆಕ್ನಾಲಜಿ ಮತ್ತು ಲೀಡರ್‌ಶಿಪ್‌ ಫೋರಂನಲ್ಲಿ ಮಾತನಾಡಿ, ಸ್ಟಾರ್ಟ್ಅಪ್‌ಗಳು ತಮ್ಮನ್ನು ನಿರ್ಗಮನ ತಂತ್ರಗಳ ಮೌಲ್ಯಮಾಪನಗಳಿಗೆ ಮಾತ್ರ ಸೀಮಿತಗೊಳಿಸಬಾರದು. ಶ್ರೇಷ್ಠತೆಯ ಜಾಗತಿಕ ಮಾನದಂಡವನ್ನು ನಿಗದಿಪಡಿಸುವ ವಿಶ್ವ ದರ್ಜೆಯ … Continued

ಶ್ರೀಲಂಕಾ ತಮಿಳರ ಸಮಾನತೆ-ನ್ಯಾಯಕ್ಕೆ ಭಾರತ ಬದ್ಧ: ಮೋದಿ

ಶ್ರೀಲಂಕಾದಲ್ಲಿ ವಾಸಿಸುವ ತಮಿಳರ ಹಕ್ಕುಗಳ ವಿಷಯವನ್ನು ಭಾರತವು ನೆರೆಯ ದೇಶದ ಸರ್ಕಾರದೊಂದಿಗೆ ಸತತವಾಗಿ ಕೈಗೆತ್ತಿಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. ‘ಅವರು ಸಮಾನತೆ, ನ್ಯಾಯದೊಂದಿಗೆ ಬದುಕುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ತಮ್ಮ ಆಡಳಿತವು ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ. ತಮಿಳುನಾಡಿನಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ನಂತರ ಭಾಷಣ ಮಾಡಿದ ಮೋದಿ, ಶ್ರೀಲಂಕಾದಲ್ಲಿ ‘ತಮಿಳು … Continued

ಪುಲ್ವಾಮಾ ಘಟನೆಗೆ ೨ ವರ್ಷ: ಹುತಾತ್ಮರಿಗೆ ಪ್ರಧಾನಿ ಗೌರವ

ನವದೆಹಲಿ: ಪುಲ್ವಾಮಾ ಭಯೋತ್ಪಾದಕರ ದಾಳಿಯ ೨ನೇ ವಾರ್ಷಿಕೋತ್ಸವದಂದು ಪ್ರಧಾನಿ ಮೋದಿ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದರು. ಯಾವುದೇ ಭಾರತೀಯನು ಈ ಕರಾಳ ದಿನವನ್ನು ಮರೆಯಲು ಸಾಧ್ಯವಿಲ್ಲ. ಎರಡು ವರ್ಷಗಳ ಹಿಂದೆ, ಪುಲ್ವಾಮಾ ದಾಳಿ ಸಂಭವಿಸಿದೆ. ಆ ದಾಳಿಯಲ್ಲಿ ನಾವು ಕಳೆದುಕೊಂಡ ಎಲ್ಲ ಹುತಾತ್ಮರಿಗೆ ನಾವು ಗೌರವ ಸಲ್ಲಿಸುತ್ತೇವೆ. ನಮ್ಮ ಭದ್ರತಾ … Continued

ತಮಿಳುನಾಡು ರೈತರನ್ನು ಶ್ಲಾಘಿಸಿದ ಪ್ರಧಾನಿ ಮೋದಿ

ಚೆನ್ನೈ: ಸಮರ್ಪಕವಾಗಿ ಜಲ ಸಂಪನ್ಮೂಲಗಳನ್ನು ಬಳಸಿಕೊಂಡು ದಾಖಲೆ ಪ್ರಮಾಣದ ಆಹಾರಧಾನ್ಯ ಉತ್ಪಾದನೆ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡು ರೈತರನ್ನು ಶ್ಲಾಘಿಸಿದ್ದಾರೆ. ಅವರು ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿ, ರಾಜ್ಯದ ರೈತರು ದಾಖಲೆ ಪ್ರಮಾಣದಲ್ಲಿ ಆಹಾರಧಾನ್ಯ ಬೆಳೆದಿರುವುದು ಶ್ಲಾಘನೀಯ. ರೈತರು ಸಮರ್ಪಕವಾಗಿ ಜಲ ಸಂಪನ್ಮೂಲಗಳನ್ನು ಬಳಸಿಕೊಂಡು ಸಾಧನೆ ಮಾಡಿದ್ದಾರೆ ಎಂದರು. ಹೊಸ ಕೃಷಿ … Continued