ಮೋದಿ..ನಿಮ್ಮನ್ನು ನೋಡುವುದಕ್ಕೆ ತುಂಬಾ ಖುಷಿಯಾಗುತ್ತಿದೆ:ಬೈಡೆನ್‌

ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ.. ನಿಮ್ಮನ್ನು ನೋಡುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಕ್ವಾಡ್ ರಾಷ್ಟ್ರಗಳ ಮೊದಲ ಸಮ್ಮೇಳನದಲ್ಲಿ ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಸ್ವಾಗತಿಸುತ್ತಿದ್ದಂತೆ ಪ್ರಧಾನಿ ಮೋದಿ ಕೂಡ ಅವರನ್ನು ಸ್ವಾಗತಿಸಿದರು.
ಕ್ವಾಡ್ ಸಮ್ಮೇಳನದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಅಧ್ಯಕ್ಷ ಜೋ ಬೈಡೆನ್, ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಮತ್ತು ಜಪಾನಿ ಪ್ರಧಾನಮಂತ್ರಿ ಯೋಶಿಹೈಡ್ ಸುಗಾ ಮತ್ತು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಿದ್ದರು.
ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಚೀನಾದಲ್ಲಿ ಬೆಳೆಯುತ್ತಿರುವ ಮಿಲಿಟರಿ ಪಡೆಯ ಸಾಮರ್ಥ್ಯ ಮತ್ತು ಆರ್ಥಿಕ ಶಕ್ತಿಯನ್ನು ಸಮತೋಲಗೊಳಿಸುವ ನಿಟ್ಟಿನಲ್ಲಿ ಕ್ವಾಡ್ ಒಕ್ಕೂಟ ರಾಷ್ಟ್ರಗಳ ನಾಯಕರು ಚರ್ಚೆ ನಡೆಸಿದರು.
ಕ್ವಾಡ್ ಒಕ್ಕೂಟದ ನಾಲ್ಕು ಸದಸ್ಯ ರಾಷ್ಟ್ರಗಳ ಭವಿಷ್ಯಕ್ಕೆ ಮುಕ್ತವಾಗಿದ್ದು, ಇಂಡೋ-ಪೆಸಿಫಿಕ್ ಪ್ರದೇಶವನ್ನು ಮುಕ್ತಗೊಳಿಸಲು ಅತ್ಯಗತ್ಯ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಹೇಳಿದರು. ಸ್ಥಿರತೆ ಸಾಧಿಸಲು ನಿಮ್ಮೊಂದಿಗೆ, ನಮ್ಮ ಪಾಲುದಾರರೊಂದಿಗೆ ಮತ್ತು ಈ ಪ್ರದೇಶದ ನಮ್ಮ ಎಲ್ಲ ಮಿತ್ರರಾಷ್ಟ್ರಗಳೊಂದಿಗೆ ಕೆಲಸ ಮಾಡಲು ಅಮೆರಿಕ ಬದ್ಧವಾಗಿದೆ” ಎಂದು ಜೋ ಬೈಡೆನ್ ಸಭೆಗೆ ತಿಳಿಸಿದರು.
ಕೊರೊನಾ ವೈರಸ್ ಸೋಂಕಿನ ಲಸಿಕೆ ವಿತರಣೆ, ಹವಾಮಾನದಲ್ಲಿನ ಬದಲಾವಣೆ, ಉದಯೋನ್ಮುಖ ತಂತ್ರಜ್ಞಾನ ಮತ್ತು ಕಾರ್ಯಸೂಚಿಗೆ ಕ್ವಾಡ್ ಒಂದು ಜಾಗತಿಕ ಶಕ್ತಿಯಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಸಕಾರಾತ್ಮಕ ದೃಷ್ಟಿಕೋನವನ್ನು ಭಾರತದ ಪ್ರಾಚೀನ ತತ್ತ್ವಶಾಸ್ತ್ರದ ವಸುದೈವ ಕುಟುಂಬಕಂ ವಿಸ್ತರಣೆಯಾಗಿ ನಾನು ನೋಡುತ್ತೇನೆ. ಅದು ಇಡೀ ಜಗತ್ತನ್ನು ಒಂದೇ ಕುಟುಂಬ ಎಂಬಂತೆ ಪರಿಗಣಿಸುತ್ತದೆ” ಎಂದು ಪ್ರಧಾನಿ ಮೋದಿ ತಿಳಿಸಿದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement