ತಮಿಳು ಭಾಷೆಯ ಹಿರಿಮೆ ಹೊಗಳಿದ ಪ್ರಧಾನಿ ಮೋದಿ

ಸುಂದರ ಭಾಷೆಗಳಲ್ಲೊಂದಾದ ತಮಿಳು ಕಲಿಯಲು ಸಾಧ್ಯವಾಗದಿರುವುದಕ್ಕೆ ವ್ಯಥೆಯಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅವರು ಮನ್‌ ಕೀ ಬಾತ್‌ನಲ್ಲಿ ಮಾತನಾಡಿ, ಅತ್ಯಂತ ಹಳೆಯ ಭಾಷೆ ತಮಿಳು ಸುಂದರ ಭಾಷೆಯಾಗಿದ್ದು, ಅದು ವಿಶ್ವದಾದ್ಯಂತ ಜನಪ್ರಿಯ ಭಾಷೆಯಾಗಿದೆ ಎಂದು ಬಣ್ಣಿಸಿದರು.
ತಮಿಳು ಕಲಿಯಲು ಸಾಧ್ಯವಾಗದಿರುವುದು ಒಂದು ವಿಷಾದವಾಗಿದೆ ವಿಶ್ವದ ಅತ್ಯಂತ ಹಳೆಯ ಭಾಷೆ ತಮಿಳು ಕಲಿಯಬೇಕು. ತಮಿಳು ಸಾಹಿತ್ಯದ ಗುಣಗಳು ಮತ್ತು ತಮಿಳು ಕಾವ್ಯದ ಆಳದ ಬಗ್ಗೆ ಅನೇಕರು ಹೇಳಿದ್ದರು.
ಕ್ಯಾಚ್‌ ದಿ ರೇನ್‌ ಅಭಿಯಾನ: ದೇಶದಲ್ಲಿ ನೀರಿನ ಸಂರಕ್ಷಣೆಯನ್ನು ಉತ್ತೇಜಿಸಲು ಕೇಂದ್ರದ ಜಲಶಕ್ತಿ ಸಚಿವಾಲಯವು ‘ಕ್ಯಾಚ್ ದಿ ರೇನ್’ ಎಂಬ 100 ದಿನಗಳ ಅಭಿಯಾನವನ್ನು ಪ್ರಾರಂಭಿಸಲಿದೆ.
ನೀರು ಮಾನವಕುಲಕ್ಕೆ ಪ್ರಕೃತಿಯ ಕೊಡುಗೆಯಾಗಿದ್ದು, ಅಗತ್ಯವಾದ ನೈಸರ್ಗಿಕ ಸಂಪನ್ಮೂಲವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ಹೇಳಿದರು. ಮುಂದಿನ ಬೇಸಿಗೆಗಾಗಿ ನೀರಿನ ಸಂರಕ್ಷಣೆಯ ಬಗ್ಗೆ ಯೋಚಿಸಲು ಇದು ಅತ್ಯುತ್ತಮ ಸಮಯ. ನೀರು ನಮಗೆ ಜೀವನ. ಒಂದು ರೀತಿಯಲ್ಲಿ ನೀರು ಪರಶುಮಣಿಗಿಂತ ಮುಖ್ಯ. ಪರಶುಮಣಿಯ ಸ್ಪರ್ಶದಿಂದ ಕಬ್ಬಿಣವನ್ನು ಚಿನ್ನವಾಗಿ ಪರಿವರ್ತಿಸಬಹುದು ಎಂದು ಹೇಳಲಾಗುತ್ತದೆ. ಅದೇ ರೀತಿಯಲ್ಲಿ, ದೈನಂದಿನ ಜೀವನಕ್ಕೆ ನೀರಿನ ಸ್ಪರ್ಶ ಅಗತ್ಯ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.

ಪ್ರಮುಖ ಸುದ್ದಿ :-   'ಪ್ರಿಯಾಂಕಾ ಗಾಂಧಿ ವಿರುದ್ಧ ಪಕ್ಷದಲ್ಲೇ ದೊಡ್ಡ ಪಿತೂರಿ...ಜೂನ್ 4ರ ನಂತರ ಕಾಂಗ್ರೆಸ್ ಅಣ್ಣ-ತಂಗಿ ಬಣಗಳಾಗಿ ವಿಭಜನೆ' : ಕಾಂಗ್ರೆಸ್‌ ಮಾಜಿ ನಾಯಕನ ಸ್ಫೋಟಕ ಹೇಳಿಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement