ತನ್ನ ಪತಿ ಆಸ್ಟ್ರೇಲಿಯಾಕ್ಕೆ ಹೋಗಿದ್ದಾನೆಂದು ನಂಬಿಸಿದ್ದ ಪತ್ನಿ ; 2 ವರ್ಷಗಳ ಬಳಿಕ ಕಾಂಕ್ರೀಟ್ ನೆಲದಡಿ ಸಿಕ್ತು ಆತನ ಅಸ್ಥಿಪಂಜರ !

ಜಾಮನಗರ: ಕೆಲಸದ ನಿಮಿತ್ತ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ ಎಂದು ಕುಟುಂಬಸ್ಥರನ್ನು ನಂಬಿಸಲಾಗಿದ್ದ ವ್ಯಕ್ತಿಯೊಬ್ಬರನ್ನು, ವಾಸ್ತವದಲ್ಲಿ ಸುಮಾರು ಎರಡು ವರ್ಷಗಳ ಹಿಂದೆಯೇ ಹತ್ಯೆ ಮಾಡಲಾಗಿದ್ದು, ಅವರ ಮೃತದೇಹವನ್ನು 12 ಅಡಿ ಆಳದಲ್ಲಿ ಕಾಂಕ್ರೀಟ್ ನೆಲದಡಿ ಹೂತುಹಾಕಲಾಗಿತ್ತು ಎಂಬ ಆಘಾತಕಾರಿ ಸಂಗತಿ ಗುಜರಾತಿನ ಜಾಮನಗರದಲ್ಲಿ ಬೆಳಕಿಗೆ ಬಂದಿದೆ. ತನಿಖೆಯಲ್ಲಿ ಬಯಲಾದ ಈ ಪ್ರಕರಣ ಬಾಲಿವುಡ್‌ನ ಜನಪ್ರಿಯ ಥ್ರಿಲ್ಲರ್ ಸಿನಿಮಾ ‘ದೃಶ್ಯಂ’ … Continued

ವೀಡಿಯೊ…| ಅನಂತ ಅಂಬಾನಿಯ ‘ವಂತಾರಾ’ದಲ್ಲಿ ಶಿವಲಿಂಗಕ್ಕೆ ವಿಶೇಷ ಅಭಿಷೇಕ, ಧ್ಯಾನ ಮಾಡಿದ ಫುಟ್‌ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ

ಜಾಮ್‌ನಗರ: ಫುಟ್‌ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಅವರು ಡಿಸೆಂಬರ್ 16ರಂದು ಗುಜರಾತಿನ ಜಾಮ್‌ನಗರದಲ್ಲಿರುವ ಅನಂತ ಅಂಬಾನಿ ಅವರ ಕನಸಿನ ಪ್ರಾಜೆಕ್ಟ್ ‘ವಂತಾರಾ’ದಲ್ಲಿ ಭಗವಾನ್‌ ಶಿವನಿಗೆ ಅಭಿಷೇಕ ನೆರವೇರಿಸಿದ್ದಾರೆ. ಮಂಗಳವಾರ ಸಂಜೆ ನವದೆಹಲಿಯಿಂದ ತಮ್ಮ ಇಂಟರ್ ಮಿಯಾಮಿ ತಂಡದ ಸಹ ಆಟಗಾರರಾದ ಲೂಯಿಸ್ ಸುಆರೆಜ್ ಮತ್ತು ರೋಡ್ರಿಗೋ ಡಿ ಪಾಲ್ ಅವರೊಂದಿಗೆ ಮೆಸ್ಸಿ ಜಾಮ್‌ನಗರಕ್ಕೆ ಆಗಮಿಸಿದ್ದರು. ಶಿವಲಿಂಗಕ್ಕೆ … Continued

ವೀಡಿಯೊ..| ವಾಯು ಪಡೆ ಯುದ್ಧ ವಿಮಾನ ಪತನ ; ಓರ್ವ ಪೈಲಟ್‌ ಸಾವು : ಯುದ್ಧ ವಿಮಾನ ಬೀಳುವ ಕ್ಷಣದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬುಧವಾರ ಗುಜರಾತ್‌ನ ಜಾಮನಗರದಲ್ಲಿ ಭಾರತೀಯ ವಾಯುಪಡೆಯ ಫೈಟರ್ ಜೆಟ್ ಪತನಗೊಂಡ ಕ್ಷಣಗಳ ಸಿಸಿಟಿವಿ ದೃಶ್ಯಾವಳಿಗಳು ಹೊರಬಿದ್ದಿವೆ. ವೀಡಿಯೊ ಕ್ಲಿಪ್‌ ಜೆಟ್‌ ಕೆಳಕ್ಕೆ ಬರುತ್ತಿರುವುದನ್ನು ತೋರಿಸುತ್ತದೆ ಮತ್ತು ನಂತರ ದೂರದಿಂದ ಭಾರಿ ಸ್ಫೋಟ ಹಾಗೂ ಬೆಂಕಿ ಜ್ವಾಲೆಯನ್ನು ತೋರಿಸುತ್ತದೆ. ಜೆಟ್ ಕೆಲವು ಸೆಕೆಂಡುಗಳ ಕಾಲ ಸ್ಥಿರವಾಗಿ ಹಾರುತ್ತದೆ ಮತ್ತು ನಂತರ ಕೆಳಗೆ ಧುಮುಕುವುದನ್ನು ವೀಡಿಯೊ ತೋರಿಸುತ್ತದೆ. ಕೆಲವೇ … Continued

ವೀಡಿಯೊ : ವಂತಾರ ವನ್ಯಜೀವಿ ಕೇಂದ್ರದಲ್ಲಿ ಸಿಂಹ-ಹುಲಿಗಳೊಂದಿಗೆ ಮುಖಾಮುಖಿ, ಸಿಂಹದ ಮರಿಗಳು-ಜಿರಾಫೆಗಳಿಗೆ ಆಹಾರ ಉಣಿಸಿದ ಪ್ರಧಾನಿ ಮೋದಿ-ವೀಕ್ಷಿಸಿ

ಜಾಮನಗರ : ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಗುಜರಾತಿನ ಜಾಮನಗರದಲ್ಲಿ ಹೊಸದಾಗಿ ಉದ್ಘಾಟನೆಗೊಂಡ ‘ವಂತರಾ’ – ಪ್ರಾಣಿ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿ ಅವರು ಪ್ರಾಣಿಗಳೊಂದಿಗೆ ಕೆಲ ಕ್ಷಣಗಳನ್ನು ಕಳೆದರು. 1.5 ಲಕ್ಷಕ್ಕೂ ಹೆಚ್ಚು ರಕ್ಷಿಸಲ್ಪಟ್ಟ ಪ್ರಾಣಿಗಳಿಗೆ ನೆಲೆಯಾಗಿರುವ ವಂತಾರದ ಸುಧಾರಿತ ಪಶುವೈದ್ಯಕೀಯ ಸೌಲಭ್ಯಗಳನ್ನು ಅವರು ಪರಿಶೋಧಿಸಿದರು, ಪ್ರಾಣಿಗಳೊಂದಿಗೆ ಸಮಯ … Continued

ಅನಂತ ಅಂಬಾನಿ-ರಾಧಿಕಾ ಮರ್ಚಂಟ್‌ ಅದ್ಧೂರಿ ವಿವಾಹ ಪೂರ್ವ ಕಾರ್ಯಕ್ರಮ : ಪಾಪ್‌ ಐಕಾನ್‌ ರಿಹಾನ್ನಾ ಪಡೆಯುವ ಸಂಭಾವನೆ ಕೇಳಿದ್ರೆ ದಂಗಾಗ್ತೀರಾ..!

ದೇಶದ ಅತೀ ಶ್ರೀಮಂತ ವ್ಯಕ್ತಿಯಾಗಿರುವ ಮುಖೇಶ ಅಂಬಾನಿ ಪುತ್ರ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ವಿವಾಹ ಪೂರ್ವ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿದೆ. ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಅಂತಾರಾಷ್ಟ್ರೀಯ ಕಲಾವಿದರ ದಂಡೇ ಆಗಮಿಸುತ್ತಿದ್ದು, ಅವರು ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಭಾರೀ ಹಣ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಪಾಪ್ ಐಕಾನ್ … Continued