ರೈತ ವಿರೋಧಿ ಕಾನೂನುಗಳು ದೇಶವಾಸಿಗಳ ಮೇಲೆ ನಡೆಸಿದ ದಾಳಿ: ರಾಹುಲ್‌ ಗಾಂಧಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ದಾಳಿ ಮುಂದುವರೆಸಿದ ರಾಹುಲ್‌ ಗಾಂಧಿ, ರೈತ ವಿರೋಧಿ ಮೂರು ಕಾನೂನುಗಳು ಕೇವಲ ರೈತರ ಮೇಲಷ್ಟೇ ಅಲ್ಲ, ದೇಶದ ಶೇ.೪೦ರಷ್ಟು ಜನರ ಮೇಲೆ ನಡೆಸಿದ ಆಕ್ರಮಣವಾಗಿದೆ ಎಂದು ತಿಳಿಸಿದ್ದಾರೆ.
ಅವರು ರಾಜಸ್ಥಾನದಲ್ಲಿ ರೈತರ ಆಂದೋಲನ ಬೆಂಬಲಿಸಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿ, ಉತ್ತಮ ಭವಿಷ್ಯ ಖಚಿತಪಡಿಸಿಕೊಳ್ಳಲು ಅನ್ನದಾತಾ ಶಾಂತಿಯುತವಾಗಿ ಹೋರಾಡುತ್ತಿದ್ದಾನೆ. ನಾವು ಇಂಥ ಸಂದರ್ಭದಲ್ಲಿ ಅವನಿಗೆ ಬೆಂಬಲ ನೀಡುವುದನ್ನು ಮುಂದುವರೆಸುತ್ತೇವೆ ಎಂದರು.
ಇದು ಕೇವಲ ರೈತರ ಆಂದೋಲನವಲ್ಲ, ಇದು ದೇಶವಾಸಿಗಳೆಲ್ಲರ ಆಂದೋಲನವಾಗಿದೆ. ಸರಕಾರ ರೈತ ವಿರೋಧಿ ಕಾನೂನುಗಳನ್ನು ರದ್ದುಪಡಿಸುವುದು ಅನಿವಾರ್ಯ ಎಂದು ತಿಳಿಸಿದರು.
ರೈತರ ಶಾಂತಿಯುತ ಹೋರಾಟವನ್ನು ದಮನ ಮಾಡುವುದೇ ಬಿಜೆಪಿಯ ಅಚ್ಛೇ ದಿನ್‌ ಎಂದು ತಿಳಿಸಿದರು. ರೈತರ ಆಂದೋಲನ ಬೆಂಬಲಿಸಿ ೨ ದಿನಗಳ ರಾಜಸ್ಥಾನ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ ಹನುಮಾನ್‌ಗಢ ಹಾಗೂ ಶ್ರೀಗಂಗಾನಗರದಲ್ಲಿ ಶುಕ್ರವಾರ ರೈತರ ಸಭೆ ನಡೆಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement