ಉತ್ತರ ಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡು ಮಾಯಾವತಿಯನ್ನು ಸಿಎಂ ಅಭ್ಯರ್ಥಿ ಮಾಡುವುದಾಗಿ ಆಫರ್‌ ನೀಡಿದ್ದೆವು, ಆದ್ರೆ ಅವರು ಸ್ಪಂದಿಸಲೇ ಇಲ್ಲ: ರಾಹುಲ್ ಗಾಂಧಿ

ನವದೆಹಲಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ವೇಳೆ ಬಹುಜನ್ ಸಮಾಜವಾದಿ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳಲು ಹಾಗೂ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿಯವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲು ಕಾಂಗ್ರೆಸ್ ಅವರಿಗೆ ಆಫರ್‌ ನೀಡಿತ್ತು. ಆದರೆ ಮಾಯಾವತಿ ನಮ್ಮ ಜತೆ ಮಾತನಾಡಲೇ ಇಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ನಾವು ಬಿಎಸ್‌ಪಿ ಜತೆ ಮೈತ್ರಿ ಸಾಧಿಸಲು ಮಾಯಾವತಿಯವರಿಗೆ ಸಂದೇಶ ನೀಡಿದ್ದೆವು. ಹಾಗೂ ಅವರು ಮುಖ್ಯಮಂತ್ರಿ ಅಭ್ಯರ್ಥಿಯಾಗಬಹುದೆಂದು ಹೇಳಿದೆವು. ಅದಕ್ಕೆ ಮಾಯಾವತಿಯವರು ಸ್ಪಂದಿಸಲಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.

ʼದಿ ದಲಿತ್ ಟ್ರುತ್’ ಎಂಬ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮಾಯಾವತಿಯವರು ಉತ್ತರ ಪ್ರದೇಶದಲ್ಲಿ ಬಿಜೆಪಿಯ ಕೆಲಸವನ್ನು ಸುಲಭವಾಗಿಸಿದರು ಎಂದು ಹೇಳಿ ಮಾಯಾವತಿ ವಿರುದ್ಧ ರಾಹುಲ್ ಕಿಡಿಕಾರಿದರು.
ಸಂವಿಧಾನ ಒಂದು ಅಸ್ತ್ರವಾಗಿದ್ದರೂ, ಸಂವಿಧಾನಿಕ ಸಂಸ್ಥೆಗಳಿಲ್ಲದೆ ಅದು ಅರ್ಥಹೀನವಾಗುತ್ತದೆ ಹಾಗೂ ಈ ಸಂಸ್ಥೆಗಳನ್ನು “ಆರೆಸ್ಸೆಸ್ ತನ್ನ ಕೈವಶ” ಮಾಡಿಕೊಂಡಿದೆ ಎಂದು ಅವರು ಆರೋಪಿಸಿದರು.
ಜನರು ದನಿಯೆತ್ತಬೇಕು, ಇಲ್ಲದೇ ಇದ್ದರೆ ಸಾಂವಿಧಾನಿಕ ಮೌಲ್ಯಗಳನ್ನು ಅನುಸರಿಸಲು ಸಾಧ್ಯವಿಲ್ಲ. ಇದು ಭಾರತದ ವಾಸ್ತವ. ಸಂವಿಧಾನಿಕ ಮೌಲ್ಯಗಳಿಗೆ ಬೆಲೆ ಇಲ್ಲದೇ ಇದ್ದರೆ, ದಲಿತರು, ಅಲ್ಪಸಂಖ್ಯಾತರು, ನಿರುದ್ಯೋಗಿಗಳು, ಸಣ್ಣ ರೈತರು ಮತ್ತು ಬಡವರು ಬಹಳ ಬಾಧಿತರಾಗುತ್ತಾರೆ” ಎಂದು ರಾಹುಲ್ ಹೇಳಿದರು

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement