ರೈತರ ಆಂದೋಲನಕ್ಕೆ ಧ್ವನಿಯಾಗುವವರ ವಿರುದ್ಧ ಐಟಿ ದಾಳಿ; ರಾಹುಲ್‌

ನವ ದೆಹಲಿ:ದೇಶದಲ್ಲಿ ನಡೆಯುತ್ತಿರುವ ರೈತರ ಆಂದೋಲನಕ್ಕೆ ಧ್ವನಿಗೂಡಿಸುವವರ ವಿರುದ್ಧ ಮೋದಿ ಸರ್ಕಾರ ದಾಳಿ ನಡೆಸಿ ಅದನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಮುಖಂಡ ರಾಹುಲ್ ಗುರುವಾರ ಮೂರು ಖ್ಯಾತ ಹಿಂದಿ ಪದ್ಯಗಳ ಸಾಲುಗಳನ್ನು ಬಳಸುವ ಮೂಲಕ ಕೇಂದ್ರ ಸರ್ಕಾರವನ್ನು ಟೀಕಿಸಿದರು.
ರೈತರ ಪರವಾಗಿರುವವರ ಮೇಲೆ ದಾಳಿ ನಡೆಸಿದ್ದಾರೆ ಎಂದು ಕಿಡಿಕಾರಿದ ಅವರು, ಬಾಲಿವುಡ್ ನಟಿ ತಾಪ್ಸೀ ಪನ್ನು, ಚಿತ್ರನಿರ್ಮಾಪಕ ಅನುರಾಗ್ ಕಶ್ಯಪ್ ಮತ್ತು ಇತರರ ಮನೆ ಹಾಗೂ ಕಚೇರಿಗಳ ಮೇಲೆ ಇತ್ತೀಚೆಗೆ ಆದಾಯ ತೆರಿಗೆ ದಾಳಿ ನಡೆಸಿದೆ. ಇದು ಕೇಂದ್ರ ಸರ್ಕಾರದ ಕುತಂತ್ರದ ಭಾಗವಾಗಿದೆ ಎಂದರು.
ರಾಹುಲ್ ತಮ್ಮ ಟ್ವೀಟ್‍ನಲ್ಲಿ ಮೋದಿ ರೈಡ್ಸ್ ಪ್ರೊ ಫಾರ್ಮರ್ಸ್ ಹ್ಯಾಶ್‍ಟ್ಯಾಗ್ ಹಾಕುವ ಮೂಲಕ ಸರ್ಕಾರವನ್ನು ಕೆದಕುವ ಕೆಲಸ ಮಾಡಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ