ದಿಢೀರ್‌ ಬೆಳವಣಿಗೆಯಲ್ಲಿ ಹೆಲಿಕ್ಯಾಪ್ಟರಿನಲ್ಲಿ ಬಿಎಸ್‌ವೈ ಮನೆಗೆ ಬಂದ ಸಚಿವ ಆನಂದ ಸಿಂಗ್‌..!

posted in: ರಾಜ್ಯ | 0

ಯಾದಗಿರಿ: ದಿಢೀರ್‌ ರಾಜಕೀಯ ಬೆಳವಣಿಗೆಯೊಂದರಲ್ಲಿ ಇಂದು (ಬುಧವಾರ) ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ನರಸಿಂಹ ನಾಯಕ ( ರಾಜುಗೌಡ) ಅವರು ಹೊಸಪೇಟೆಗೆ ತೆರಳಿ ಹೆಲಿಕ್ಯಾಪ್ಟರ್‌ನಲ್ಲಿ ಬೆಂಗಳೂರಿಗೆ ತೆರಳಿದ್ದು, ಸದ್ಯ ಮಾಜಿ ಮುಖ್ಯಮಂತ್ರಿ ನಿವಾಸದಲ್ಲಿದ್ದಾರೆ. ಬೆಂಗಳೂರಿಗೆ ಹೋಗುವ ಮೊದಲು ಅವರು ಹೊಸಪೇಟೆಯಲ್ಲಿ ಸಚಿವ ಆನಂದ … Continued

ಪ್ರವಾಹದಿಂದ ಬೆಳಗಾವಿ ಜಿಲ್ಲೆಯಲ್ಲಿ 1200 ಕೋಟಿ ಹಾನಿ; ತಕ್ಷಣವೇ 170 ಕೋಟಿ ರೂ.ಗಳ ಬಿಡುಗಡೆಗೆ ಮನವಿ

posted in: ರಾಜ್ಯ | 0

ಬೆಳಗಾವಿ: ರಾಜ್ಯದಲ್ಲಿ ಕೋವಿಡ್ ಸಂಕಷ್ಟದ ಮಧ್ಯೆಯೂ ಪ್ರವಾಹ ಸ್ಥಿತಿ ಉದ್ಭವಿಸಿದೆ.‌ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತಗಳು ಸಂವೇದನಾಶೀಲತೆಯಿಂದ ಕೆಲಸ ಮಾಡಬೇಕು. ಹಣಕಾಸು ಸೇರಿದಂತೆ ಯಾವುದೇ ತೊಂದರೆ ಇದ್ದರೂ ತಕ್ಷಣವೇ ಗಮನಕ್ಕೆ ತಂದು ರಿಸ್ಥಿತಿ ಸರಿಪಡಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದರು. ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ (ಜು.25) ಬೆಳಗಾವಿ ಜಿಲ್ಲೆ ಪ್ರವಾಹ ಹಾನಿ ವೀಕ್ಷಣೆ … Continued

ರೈತರ ಆದಾಯ ದ್ವಿಗುಣಗೊಳಿಸುವುದೇ ಸರ್ಕಾರದ ಪ್ರಥಮಾದ್ಯತೆ: ಸಿಎಂಯಡಿಯೂರಪ್ಪ

posted in: ರಾಜ್ಯ | 0

ಕಲಬುರಗಿ:ಅನ್ನದಾತ ರೈತನ ಬದುಕು ಹಸನಗೊಳಿಸಲು ಹತ್ತಾರು ರೈತಾಪಿ ಯೋಜನೆಗಳನ್ನು ನಮ್ಮ ಸರ್ಕಾರ ಜಾರಿಗೊಳಿಸಿದ್ದು, ರೈತರ ಆದಾಯ ದ್ವಿಗುಣಗೊಳಿಸುವುದೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ನಗರದ ಎಂ.ಎಸ್.ಕೆ ಮಿಲ್ ವಾಣಿಜ್ಯ ಬಡಾವಣೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಜಂಟಿ ಅನುದಾನದಡಿಯಲ್ಲಿ 2 ಎಕರೆ ಪ್ರದೇಶದಲ್ಲಿ ಸುಮಾರು … Continued

ರಾಜ್ಯ ಸಚಿವ ಸಂಪುಟದ ವಿಸ್ತರಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ:ಸಿಎಂ ಬಿಎಸ್‌ವೈ

posted in: ರಾಜ್ಯ | 0

ಕಲಬುರಗಿ: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ, ಈ ಬಗ್ಗೆ ಚಚೆ೯ಯೂ ಆಗಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಶನಿವಾರ ನಗರದಲ್ಲಿ ಕೆಕೆಆರಡಿಬಿ, ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೂತನ ಮಾದರಿ ಕಾಯಿಪಲ್ಲೆ ಮಾರುಕಟ್ಟೆ ಸಂಕೀರ್ಣದ ಉಧ್ವಾಟನೆ ಕಾಯ೯ಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚಚೆ೯ ಬಂದಾಗ … Continued

ಮಹತ್ವದ ಸುದ್ದಿ.. ಶಾಲಾ-ಕಾಲೇಜು ಯಾವಾಗ ಆರಂಭ..?: ಮಾತನಾಡಿದ ಸಿಎಂ ಬಿಎಎಸ್‌ವೈ

posted in: ರಾಜ್ಯ | 0

ಬೆಂಗಳೂರು: ಕರ್ನಾಟದಲ್ಲಿ ಸದ್ಯಕ್ಕೆ 10ನೇ ತರಗತಿಯ ವರೆಗೆ ಶಾಲೆ ಆರಂಭಿಸುವ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ.ರಾಜ್ಯದಲ್ಲಿ ಸದ್ಯಕ್ಕೆ ಕಾಲೇಜುಗಳನ್ನು ಮಾತ್ರ ಆರಂಭಿಸಲು ಚಿಂತನೆ ನಡೆಸಲಾಗಿದ್ದು, 18 ವರ್ಷಕ್ಕೆ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡಿದ ನಂತರ ಕಾಲೇಜುಗಳು ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಡಾ.ದೇವಿ ಪ್ರಸಾದ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ ವರದಿ ಸಭೆಯ ಬಳಿಕ … Continued

ರೈತರಿಗೆ ಈ ವರ್ಷ ಶೂನ್ಯ ಬಡ್ಡಿ ದರದಲ್ಲಿ ೧೯,೩೭೦ ಕೋಟಿ ರೂ. ಅಲ್ಪಾವಧಿ ಬೆಳೆ ಸಾಲದ ಗುರಿ: ಸಿಎಂ ಬಿಎಸ್‌ವೈ

posted in: ರಾಜ್ಯ | 0

ಬೆಂಗಳೂರು: ಈ ವರ್ಷ ರಾಜ್ಯದಲ್ಲಿ ೩೦.೨೬ ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ೧೯,೩೭೦ ಕೋಟಿ ಅಲ್ಪಾವಧಿ ಬೆಳೆ ಸಾಲ ಮತ್ತು ೦.೬ ಲಕ್ಷ ರೈತರಿಗೆ ಶೇ. ೩ರ ಬಡ್ಡಿ ದರದಲ್ಲಿ ೧೪೬೦ ಕೋಟಿ ರೂ. ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ವಿತರಣೆ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ರಾಜ್ಯದ ಸಹಕಾರ ಇಲಾಖೆ … Continued

ಸಿಎಂ ಬದಲಾವಣೆ ವಿಚಾರ: ಪರ-ವಿರೋಧ ಸಹಿ ಸಂಗ್ರಹ ಮಾಡಬೇಡಿ:ಶಾಸಕರಿಗೆ ಸಿಎಂ ಬಿಎಸ್‌ವೈ ಖಡಕ್‌ ಸೂಚನೆ

posted in: ರಾಜ್ಯ | 0

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಗಂಭೀರ ಸ್ವರೂಪಕ್ಕೆ ತಿರುಗುತ್ತಿದ್ದು ಇದರ ನಡುವೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕಠಿಣ ಸಂದೇಶವೊಂದನ್ನು ರವಾನಿಸಿದ್ದಾರೆ. ಒಂದೆಂಡೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಕೆಲ ಬಿಜೆಪಿ ನಾಯಕರು ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದರೆ ಇದಕ್ಕೆ ಪ್ರತಿಯಾಗಿ ಯಡಿಯೂರಪ್ಪನವರ ಪರ ಇರುವವರು ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಇದೆಲ್ಲವನ್ನು ಸೂಕ್ಷ್ಮವಾಗಿ … Continued

1200 ಕೋಟಿ ರೂ. ಪರಿಹಾರ ಯಡಿಯೂರಪ್ಪ ತಮ್ಮ ಮನೆಯಿಂದ ಕೊಟ್ರಾ: ಡಿಕೆಶಿ ಪ್ರಶ್ನೆ

posted in: ರಾಜ್ಯ | 0

ಹುಬ್ಬಳ್ಳಿ:ಕೊರೊನಾ ಲಸಿಕೆಗಾಗಿ ನಾವು 100 ಕೋಟಿ ಕೊಟ್ಟರೆ ಅದಕ್ಕೆ ಕೊಂಕು ಮಾತನಾಡುವ ಬಿಜೆಪಿಯವರು, ಕೇವಲ 1200 ಕೋಟಿ ರೂ.ಗಳ ಕೊರೊನಾ ಪರಿಹಾರ ಪ್ಯಾಕೇಜ್ ಕೊಟ್ಟು ಸಾಕಷ್ಟು ಪ್ರಚಾರ ತೆಗೆದುಕೊಳ್ಳುತ್ತಾರೆ. ಆ 1200 ಕೋಟಿ ರೂ.ಯಡಿಯೂರಪ್ಪ ತಮ್ಮ ಮನೆಯಿಂದ ಕೊಟ್ಟಿದ್ದಾರೆಯೇ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ … Continued

ಮುಷ್ಕರಕ್ಕೆ ಬಗ್ಗುವುದಿಲ್ಲ, ಪರ್ಯಾಯ ವ್ಯವಸ್ಥೆ ಮಾಡ್ತೇವೆ, ಕೆಲಸಕ್ಕೆ ಗೈರಾದವ್ರಿಗೆ ಸಂಬಳ ಕೊಡಲ್ಲ: ಸಿಎಂ ಖಡಕ್‌ ಎಚ್ಚರಿಕೆ

posted in: ರಾಜ್ಯ | 0

ಬೆಂಗಳೂರು: ಸಾರಿಗೆ ನೌಕರರು ಯುಗಾದಿ ಸಮಯದಲ್ಲೂ ಮುಷ್ಕರ ಹಿಂತೆಗೆದುಕೊಂಡಿಲ್ಲ, ಇದೇ ಸಮಯದಲ್ಲಿ ಸರ್ಕಾರ ಯಾವುದೇ ಕಾರಣಕ್ಕೂ ಬಗ್ಗುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಅವರು ಮಂಗಳವಾರ ನಗರದಲ್ಲಿ ಮಾತನಾಡಿದ ಅವರು, ಮುಷ್ಕರ ಮುಂದುವರಿಸಿರುವ ಸಾರಿಗೆ ನೌಕರರ ಜೊತೆ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ. ಮುಷ್ಕರ ನಡೆಸಿದವರಿಗೆ ಮಾರ್ಚ್‌ ತಿಂಗಳ ಸಂಬಳವನ್ನೂ ಕೊಡುವುದಿಲ್ಲ. ಜೊತೆಗೆ ಕೆಲಸಕ್ಕೆ ಗೈರಾದವರ … Continued

ಅವಶ್ಯಕತೆ ಎದುರಾದರೆ ಲಾಕ್‌ಡೌನ್ ಜಾರಿ ಮಾಡ್ತೇವೆ ಎಂದ ಸಿಎಂ ಬಿಎಸ್‌ವೈ..!

posted in: ರಾಜ್ಯ | 0

ಬೀದರ: ಅವಶ್ಯಕತೆ ಎದುರಾದರೆ ಕರ್ನಾಟಕದಲ್ಲಿಯೂ ಲಾಕ್‌ಡೌನ್ ವಿಧಿಸಬಹುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಸೋಮವಾರ ಬೀದರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ತಮ್ಮ ಒಳಿತಿಗಾಗಿ ಸ್ಪಂದಿಸಬೇಕಾಗಿದೆ. ಅವರು ಗಮನಹರಿಸದಿದ್ದರೆ ನಾವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಬಹುದು. ಅಗತ್ಯವಿದ್ದರೆ ಮತ್ತು ಅಗತ್ಯವಿದ್ದಲ್ಲಿ ನಾವು ಲಾಕ್‌ಡೌನ್ ವಿಧಿಸುತ್ತೇವೆ” ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು. ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ … Continued