ಮಾತುಕತೆಗೆ ಕರೆಯಲ್ಲ, ಮುಷ್ಕರ ಕೈಬಿಡದ್ದರೆ ಶಿಸ್ತು ಕ್ರಮ:ಸಿಎಂ ಬಿಎಸ್‌ವೈ ಎಚ್ಚರಿಕೆ

ರಾಯಚೂರು:ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮುಷ್ಕರ ನಿರತ ಸಾರಿಗೆ ನೌಕರರಿಗೆ ಶಾಕ್‌ ನೀಡಿದ್ದಾರೆ. ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗದೇ ಇದ್ದಲ್ಲಿ ವೇತನ ಕಡಿತ ಮಾಡುವುದಲ್ಲದೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಾರಿಗೆ ನೌಕರರ ಮುಷ್ಕರ ವಿಚಾರಕ್ಕೆ ಸಂಬಂಧಿಸಿದಂತೆ ಯಾರನ್ನೂ ಕೂಡಾ ಮಾತುಕತೆಗೆ ಕರೆಯುವುದಿಲ್ಲ. ನೌಕರರು ಕರ್ತವ್ಯಕ್ಕೆ … Continued

 ಬಿಎಸ್‌ವೈಗೆ ಭಾನುವಾರ ಬೆಳ್ಳಂ ಬೆಳಿಗ್ಗೆ ದೂರವಾಣಿ ಕರೆ ಮಾಡಿದ ಮೋದಿ ..

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮುಕ್ಯಮಂತ್ರಿ ಯಡಿಯೂರಪ್ಪ ಅವರಿಗೆ ದೂರವಾಣಿ  ಕರೆ ಮಾಡಿದ್ದಾರೆ. ಭಾನುವಾರ ಬೆಳಿಗ್ಗೆ ದೂರವಾಣಿ ಕರೆ ಮಾಡಿದ್ದ ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಕರ್ನಾಟಕದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದರು. ರಾಯಚೂರು ಜಿಲ್ಲೆಯ ಮಸ್ಕಿಯಲ್ಲು ಉಪಚುನಾವಣೆ ಪ್ರಚಾರದಲ್ಲಿರುವ ಯಡಿಯೂರಪ್ಪ ಅವರ ಜೊತೆ ಮೋದಿ ಸುಮಾರು 10 ನಿಮಿಷಕ್ಕೂ ಹೆಚ್ಚು … Continued

ಸಿಎಂ ಬಿಎಸ್‌ವೈ ಕುಳಿತ ಹಡಗು ಮುಳುಗುತ್ತಿದೆ, ಯತ್ನಾಳ ಇದಕ್ಕೆ ಸಾಕ್ಷಿ: ಸಿದ್ದರಾಮಯ್ಯ ಲೇವಡಿ

ಬೆಳಗಾವಿ: ಮುಖ್ಯಮಂತ್ರಿ ಯಡಿಯೂರಪ್ಪ ಕುಳಿತಿರುವ ಹಡಗೇ ಮುಳುಗುತ್ತಿದೆ. ಇದಕ್ಕೆ ಅವರದ್ದೇ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಬಿಜೆಪಿ ಸರ್ಕಾರಕ್ಕೆ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂಬ ಯಡಿಯೂರಪ್ಪ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಯಡಿಯೂರಪ್ಪ ಕುಳಿತಿರುವ ಹಡಗೇ ಮುಳುಗುತ್ತಿದೆ. ಯತ್ನಾಳ್ ಅವರೇ ಇದಕ್ಕೆ ಸಾಕ್ಷಿಯಾಗಿದ್ದಾರೆ … Continued

ಶೇ.8ರಷ್ಟು ಸಂಬಳ ಹೆಚ್ಚಳಕ್ಕೆ ಸರ್ಕಾರ ಬದ್ಧ, ಮುಷ್ಕರ ಕೈಬಿಡದಿದ್ರೆ ಕಠಿಣ ಕ್ರಮ :ಸಿಎಂ

ಬೆಳಗಾವಿ : ಸಾರಿಗೆ ನೌಕರರಿಗೆ ಶೇ. 8ರಷ್ಟು ಸಂಬಳ ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ ಎಂಬುದನ್ನು ಈಗಾಗಲೇ ಸ್ಪಷ್ಟ ಮಾಡಿದ್ದೇವೆ. ಹಠ ಮಾಡದೇ ಮುಷ್ಕರ ಕೈ ಬಿಡಬೇಕು. ಮುಷ್ಕರ ಕೈ ಬಿಟ್ಟರೆ ಮಾತುಕತೆ ನಡೆಸಲು ರಾಜ್ಯ ಸರ್ಕಾರ ಸಿದ್ಧ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಬೆಳಗಾವಿಯಲ್ಲಿ ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪ್ರಯಾಣಿಕರಿಂದ ಹೆಚ್ಚುವರಿ … Continued

ಮೇ 2ರ ನಂತರ ಏನೇನು ಬದಲಾವಣೆಯಾಗುತ್ತದೆ ಕಾದುನೋಡಿ:ಯತ್ನಾಳ

ಬೆಳಗಾವಿ : ಮುಖ್ಯಮಂತ್ರಿ ಯಡಿಯೂರಪ್ಪನವರು ಮೀಸಲಾತಿ ಕೊಡದಿದ್ರೂ ಪರವಾಗಿಲ್ಲ. ಯಾರು ಹೊಸ ಮುಖ್ಯಮಂತ್ರಿಯಾಗುತ್ತಾರೆಯೋ ಅವರು ಕೊಡುತ್ತಾರೆ. ಮೇ 2ರ ನಂತರ ಏನೇನು ಬದಲಾವಣೆ ಆಗುತ್ತದೆ ಕಾದು ನೋಡಿ.. ಬದಲಾವಣೆ ಖಚಿತ ಬರೆದಿಟ್ಟುಕೊಳ್ಳಿ. ಉತ್ತರ ಕರ್ನಾಟಕದವರೊಬ್ಬರು ಮುಖ್ಯಮಂತ್ರಿಯಾಗುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಪ್ರಚಾರಕ್ಕೆ … Continued

ಮಂಗಲಾ ಅಂಗಡಿ ಜಯಭೇರಿ:ಸಿಎಂ ಬಿಎಸ್‌ವೈ ವಿಶ್ವಾಸ

ಬೆಳಗಾವಿ :ಉಪಚುನಾವಣೆಯಲ್ಲಿ ಮಂಗಲಾ ಅಂಗಡಿ ಜಯಭೇರಿ ಬಾರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಬೆಳಗಾವಿಯಲ್ಲಿ ಮಂಗಳವಾರ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ದಿ.ಸುರೇಶ ಅಂಗಡಿ ಬೆಳಗಾವಿಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಿದ್ದಾರೆ. ರಾಜ್ಯಕ್ಕೆ ನಿರೀಕ್ಷೆಗಿಂತಲು ಹೆಚ್ಚಿನ ಯೋಜನೆಗಳನ್ನು ಸುರೇಶ ಅಂಗಡಿಯವರು ತಂದಿದ್ದಾರೆ. ಅವರು ನಮ್ಮನ್ನು ಇಷ್ಟು ಬೇಗ ಬಿಟ್ಟು ಹೋಗಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದರು. ಇದು … Continued

೧ರಿಂದ ೯ನೇ ತರಗತಿ ಮಕ್ಕಳಿಗೆ ಪರೀಕ್ಷೆ ರದ್ದು ನಿರ್ಧಾರ ಕೈಗೊಂಡಿಲ್ಲ:ಸಿಎಂ ಬಿಎಸ್‌ವೈ

ಬೆಂಗಳೂರು: ೧ರಿಂದ ೯ನೇ ತರಗತಿ ಮಕ್ಕಳಿಗೆ ಪರೀಕ್ಷೆ  ರದ್ದು ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆತಂಕ ಮೂಡಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಶಾಲೆ ಬಂದ್ ಮಾಡುವ … Continued

ಸಿಎಸ್ ಹೊರತಾಗಿ ಸಚಿವರು, ಅಧಿಕಾರಿಗಳು ಕೊರೊನಾ ಆದೇಶ, ಹೇಳಿಕೆ ನೀಡುವಂತಿಲ್ಲ; ಸಿಎಂ ಬಿಎಸ್‌ವೈ ಖಡಕ್ ಸೂಚನೆ

ಬೆಂಗಳೂರು : ಕೇಂದ್ರ ಗೃಹ ಮಂತ್ರಾಲಯದ ಮಾದರಿಯಲ್ಲೇ ರಾಜ್ಯದಲ್ಲೂ ಲಾಕ್ ಡೌನ್ ತೆರವುಗೊಳಿಸುವಿಕೆ, ಪುನರಾರಂಭ, ಕಂಟೈನ್ಮೆಂಟ್, ನಿರ್ಭಂಧ ಹೇರುವುದು ಇತ್ಯಾದಿ ಆದೇಶಗಳನ್ನು ಮುಖ್ಯ ಕಾರ್ಯದರ್ಶಿಯವರ ಸಹಿಯಲ್ಲಿ ಆದೇಶ ಹೊರಬರಬೇಕು. ಈ ಬಗ್ಗೆ ಯಾವುದೇ ಸಚಿವರಾಗಲಿ, ಅಧಿಕಾರಿಗಳಾಗಲಿ ಪತ್ರಿಕಾ ಹೇಳಿಕೆ ನೀಡಬಾರದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಖಡಕ್ ಆದೇಶ ಮಾಡಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ … Continued

ಲಾಕ್‌‌ಡೌನ್‌ ಇಲ್ಲ.. ಆದರೆ ಕೊರೊನಾ ನಿಯಂತ್ರಣಕ್ಕೆ 15 ದಿನ ಪ್ರತಿಭಟನೆ, ಸಮಾವೇಶ ಇತ್ಯಾದಿ ಬಂದ್‌

ಬೆಂಗಳೂರು : ನಾಳೆಯಿಂದ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯವಾಗಿದೆ. ನಾಳೆಯಿಂದ ಮುಂದಿನ 15 ದಿನಗಳ ವರೆಗೆ ರಾಜ್ಯದಲ್ಲಿ ಯಾವುದೇ ಪ್ರತಿಭಟನೆ,ಸಮಾವೇಶ ಇತ್ಯಾದಿಗಳಿಗೆ ಅವಕಾಶವಿಲ್ಲ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಮಾಡುವುದಿಲ್ಲ. ಅದರೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಕೊರೋನಾ ನಿಯಂತ್ರಣ ಕುರಿತಂತೆ ಸೋಮವಾರ ಸಭೆ ನಡೆಸಿದ ಬಳಿಕ … Continued

ಬೆಂಗಳೂರಲ್ಲಿ ಮೂರು ಕೊವಿಡ್‌ ಆರೈಕೆ ಕೇಂದ್ರ, ರಾಜ್ಯದಲ್ಲಿ ಪ್ರತಿದಿನ ೩ ಲಕ್ಷ ಜನರಿಗೆ ಲಸಿಕೆ: ಸಿಎಂ ಬಿಎಸ್‌ವೈ

ಬೆಂಗಳೂರು: ಬೆಂಗಳೂರು, ಕಲಬುರಗಿ ಮತ್ತು ಬೀದರ್ ಈ ಪ್ರದೇಶಗಳಲ್ಲಿ ಕೊವಿಡ್‌ ಪ್ರಕರಣಗಳಲ್ಲಿ ಹೆಚ್ಚಳವಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಪ್ರದೇಶಗಳ ಬಗ್ಗೆ ಹೆಚ್ಚು ಗಮನ ಕೊಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಕೆಲವು ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ದೇಶದ ಕೊವಿಡ್‌ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ವಿಡಿಯೋ ಸಮಾವೇಶದ ನಂತರ … Continued