ಶುಕ್ರವಾರ 5,000ಕ್ಕೂ ಹೆಚ್ಚು ಬಸ್ ಗಳು ಸಂಚರಿಸುವ ನಿರೀಕ್ಷೆ:ಡಿಸಿಎಂ ಸವದಿ

ಬೀದರ್: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಮುಷ್ಕರದಿಂದ ಸರ್ಕಾರ 170 ಕೋಟಿ ರೂ. ವರೆಗೆ ನಷ್ಟ ಅನುಭವಿಸುತ್ತಿದೆ ಎಂದು ಸಾರಿಗೆ ಸಚಿವರೂ ಆದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ಗುರುವಾರ ಇಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಕೆಲಸಕ್ಕೆ ಮರಳುವಂತೆ ನೌಕರರಿಗೆ ಸರ್ಕಾರ ಮತ್ತೊಮ್ಮೆ ಮನವಿ ಮಾಡುತ್ತಿದೆ. ಸಾಂಕ್ರಾಮಿಕ ರೋಗದಿಂದಾಗಿ ಸರ್ಕಾರ ಕಠಿಣ ಆರ್ಥಿಕ ಸ್ಥಿತಿ … Continued

ಮುಷ್ಕರಕ್ಕೆ ಬಗ್ಗುವುದಿಲ್ಲ, ಪರ್ಯಾಯ ವ್ಯವಸ್ಥೆ ಮಾಡ್ತೇವೆ, ಕೆಲಸಕ್ಕೆ ಗೈರಾದವ್ರಿಗೆ ಸಂಬಳ ಕೊಡಲ್ಲ: ಸಿಎಂ ಖಡಕ್‌ ಎಚ್ಚರಿಕೆ

ಬೆಂಗಳೂರು: ಸಾರಿಗೆ ನೌಕರರು ಯುಗಾದಿ ಸಮಯದಲ್ಲೂ ಮುಷ್ಕರ ಹಿಂತೆಗೆದುಕೊಂಡಿಲ್ಲ, ಇದೇ ಸಮಯದಲ್ಲಿ ಸರ್ಕಾರ ಯಾವುದೇ ಕಾರಣಕ್ಕೂ ಬಗ್ಗುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಅವರು ಮಂಗಳವಾರ ನಗರದಲ್ಲಿ ಮಾತನಾಡಿದ ಅವರು, ಮುಷ್ಕರ ಮುಂದುವರಿಸಿರುವ ಸಾರಿಗೆ ನೌಕರರ ಜೊತೆ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ. ಮುಷ್ಕರ ನಡೆಸಿದವರಿಗೆ ಮಾರ್ಚ್‌ ತಿಂಗಳ ಸಂಬಳವನ್ನೂ ಕೊಡುವುದಿಲ್ಲ. ಜೊತೆಗೆ ಕೆಲಸಕ್ಕೆ ಗೈರಾದವರ … Continued

ಮುಷ್ಕರದ ಮಧ್ಯೆಯೂ ಬಸ್ ಚಾಲನೆ: ಚಾಲಕನ ಥಳಿಸಿದ ಮಹಿಳೆಯರ ಬಂಧನ

ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ನೌಕರರ ಪ್ರತಿಭಟನೆ ಸತತ 6ನೇ ದಿನವೂ ಮುಂದುವರೆದಿದೆ. ನೆಲಮಂಗಲ ಠಾಣಾ ವ್ಯಾಪ್ತಿಯಲ್ಲಿ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿದ್ದು, ಮುಷ್ಕರದ ನಡುವೆಯೂ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಂಟಿಸಿ ಚಾಲಕನನ್ನು ಪ್ರತಿಭಟನಾ ನಿರತ ಮಹಿಳೆಯರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಡೆದಿದೆ. ಹಲ್ಲೆ ನಡೆಸಿದ ಐವರು ಮಹಿಳೆಯರನ್ನು ಬಂಧಿಸಿದ್ದು, 12 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಅರಿಶಿನಕುಂಟೆ … Continued

ಮಾತುಕತೆಗೆ ಕರೆಯಲ್ಲ, ಮುಷ್ಕರ ಕೈಬಿಡದ್ದರೆ ಶಿಸ್ತು ಕ್ರಮ:ಸಿಎಂ ಬಿಎಸ್‌ವೈ ಎಚ್ಚರಿಕೆ

ರಾಯಚೂರು:ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮುಷ್ಕರ ನಿರತ ಸಾರಿಗೆ ನೌಕರರಿಗೆ ಶಾಕ್‌ ನೀಡಿದ್ದಾರೆ. ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗದೇ ಇದ್ದಲ್ಲಿ ವೇತನ ಕಡಿತ ಮಾಡುವುದಲ್ಲದೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಾರಿಗೆ ನೌಕರರ ಮುಷ್ಕರ ವಿಚಾರಕ್ಕೆ ಸಂಬಂಧಿಸಿದಂತೆ ಯಾರನ್ನೂ ಕೂಡಾ ಮಾತುಕತೆಗೆ ಕರೆಯುವುದಿಲ್ಲ. ನೌಕರರು ಕರ್ತವ್ಯಕ್ಕೆ … Continued

ಸಾರಿಗೆ ಮುಷ್ಕರ ನಾಲ್ಕು ದಿನಗಳಲ್ಲಿ ಸಹಜ ಸ್ಥಿತಿಗೆ, ಹೀಗಾಗಿ ಎಸ್ಮಾ ಜಾರಿಯಿಲ್ಲ: ಸವದಿ

ಬೀದರ್‌: ‘ರಾಜ್ಯದಲ್ಲಿ ನಾಲ್ಕು ದಿನಗಳಲ್ಲಿ ಸಾರಿಗೆ ವ್ಯವಸ್ಥೆ ಸಹಜ ಸ್ಥಿತಿಗೆ ಬರಲಿದೆ. ಹೀಗಾಗಿ ಎಸ್ಮಾ ಜಾರಿ ಪ್ರಶ್ನೆಯೇ ಉದ್ಘವಿಸುವುದಿಲ್ಲ’ ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. ತಮ್ಮನ್ನು ಭೇಟಿ ಮಾಡಿದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಷ್ಕರದ ಸಮಯದಲ್ಲಿ ರಾಜ್ಯದಲ್ಲಿ ‘ಶುಕ್ರವಾರ 900 ಬಸ್‌, ಶನಿವಾರ 1500 ಸಂಚರಿಸಿವೆ. ಭಾನುವಾರ 2 … Continued

ಮುಂದುವರಿದ ಮುಷ್ಕರ: ಸಾರಿಗೆ ಇಲಾಖೆ 334 ನೌಕರರ ವಜಾ

ಬೆಂಗಳೂರು: ನೋಟಿಸ್ ನೀಡಿದರೂ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯಿಂದ ಈವರೆಗೆ 334 ನೌಕರರನ್ನು ವಜಾಗೊಳಿಸಿ ಆದೇಶಿಸಲಾಗಿದೆ. ಶುಕ್ರವಾರ 118 ನೌಕರರನ್ನು ವಜಾಗೊಳಿಸಲಾಗಿತ್ತು. 216 ನೌಕರರನ್ನು ಶನಿವಾರ ವಜಾಗೊಳಿಸಿ ಆದೇಶ ಮಾಡಲಾಗಿದ್ದು, ಒಟ್ಟಾರೆ 334 ನೌಕರರನ್ನು ಕೆಲಸದಿಂದ ವಜಾ ಮಾಡಲಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. … Continued

ಮುಂದುವರಿದ ಸಾರಿಗೆ ಮುಷ್ಕರ-ನಿಲ್ಲದ ಹಗ್ಗ ಜಗ್ಗಾಟ

ಬೆಂಗಳೂರು: ಒಂದೆಡೆ ರಾಜ್ಯ ಸರ್ಕಾರ ಮುಷ್ಕರ ನಿಷೇಧಿಸಿ ಆದೇಶಿಸಿ ಕಾನೂನು ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದು, ಮತ್ತೊಂದೆಡೆ ಸಾರಿಗೆ ನೌಕರರ ಮುಷ್ಕರಕ್ಕೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಆರನೇ ವೇತನ ಜಾರಿ ಆಗುವವರೆಗೂ ಮುಷ್ಕರ ಮುಂದುವರಿಸಲು ಸಾರಿಗೆ ನೌಕರರು ಮುಂದಾಗಿದ್ದಾರೆ. ಆರನೇ ವೇತನ ಜಾರಿ ಅಸಾಧ್ಯ ,ಕೆಲಸಕ್ಕೆ ಹಾಜರಾಗಿ ಎಂದು ಸರ್ಕಾರ ಹೇಳಿದೆ. ಸಾರಿಗೆ ನೌಕರರ ಹೋರಾಟದ ನೇತೃತ್ವ … Continued

ಸಾರಿಗೆ ಮುಷ್ಕರ: ಕೋಡಿಹಳ್ಳಿಗೆ ನೋಟಿಸ್‌ ನೀಡಿದ ವಿದ್ಯಾರ್ಥಿನಿ..!

ಬೆಂಗಳೂರು: ಸಾರಿಗೆ ಮುಷ್ಕರದಿಂದ ತೊಂದರೆ ಅನುಭವಿಸುತ್ತಿರುವವರು ಜನಸಾಮನ್ಯರು. ಅದರಲ್ಲೂ ಪರೀಕ್ಷೆಗೆ ತೆರಳಬೇಕಾದ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಈ ನಡುವೆ ತುಮಕೂರಿನ ಎಂಜಿನಿಯರಿಂಗ್ ಪದವಿ ವಿದ್ಯಾರ್ಥಿನಿಯೊಬ್ಬಳು ಮುಷ್ಕರದ ನೇತೃತ್ವ ವಹಿಸಿಕೊಂಡಿರುವ ಕೋಡಿಹಳ್ಳಿ ಚಂದ್ರಶೇಖರ್ ಗೆ 10 ಲಕ್ಷ ರೂ. ಪರಿಹಾರ ನೀಡುವಂತೆ  ನೋಟಿಸ್ ನೀಡಿದ್ದಾಳೆ. ಪಾಸ್ ಹೊಂದಿರುವವರಿಗೆ ಬಸ್ ಸೌಲಭ್ಯ ಒದಗಿಸಿಲ್ಲ. ಇದು ಸೇವಾ ನ್ಯೂನತೆ ಆಗಿದೆ. … Continued

ನಿಲ್ಲದ ಮುಷ್ಕರ, ಬಸ್‌ ಓಡಿಸಲು ಸಾರಿಗೆ ನಿವೃತ್ತ ನೌಕರರಿಗೆ ಸರ್ಕಾರದಿಂದ ಆಹ್ವಾನ, ದರವೂ ನಿಗದಿ..!!

ಬೆಂಗಳೂರು: ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಮುಷ್ಕರ ಮುಂದುವರಿಸಲು ನಿರ್ದಾರ ಮಾಡಿರುವ ಕಾರಣ ಸರ್ಕಾರ ಪರ್ಯಾಯ ಕ್ರಮಕ್ಕೆ ಮುಂದಾಗಿದೆ. ಸಾರಿಗೆ ಸಂಸ್ಥೆಯ ನಿವೃತ್ತ ಚಾಲಕ ಹಾಗೂ ನಿರ್ವಾಹಕರನ್ನು ಕರೆಸಿ ಅವರಿಗೆ ಸಂಬಳ ನೀಡಿ ಬಸ್‌ಗಳನ್ನು ಓಡಿಸಲು ಯೋಜಿಸಿವೆ. ಇದಕ್ಕೆ ಈಗಾಗಲೇ ವಿವಿಧ ಸಾರಿಗೆ ನಿಗಮಗಳು ತಯಾರಿ ನಡೆಸಿವೆ. ಅವರಿಗೆ ಗೌರವ ಧನವನ್ನೂ ನಿಗದಿಗೊಳಿ … Continued

ಕರ್ತವ್ಯಕ್ಕೆ ಹಾಜರಾಗುವ ಸಾರಿಗೆ ಸಿಬ್ಬಂದಿಗೆ ರಕ್ಷಣೆ: ಸಚಿವ ಬೊಮ್ಮಾಯಿ

ಹುಮ್ನಾಬಾದ: ಸ್ವಯಂ ಪ್ರೇರಣೆಯಿಂದ ಕರ್ತವ್ಯಕ್ಕೆ ಹಾಜರಾಗುವ ಸಾರಿಗೆ ಸಿಬ್ಬಂದಿಗೆ ಸೂಕ್ತ ರಕ್ಷಣೆ ನೀಡುವುದಾಗಿ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ್ ಬೊಮ್ಮಾಯಿ ತಿಳಿಸಿದರು ಕೋಟ್ ಮುಷ್ಕರನಿರತ ಸಾರಿಗೆ ನೌಕರರಿಗೆ ಮಾನವೀಯತೆಯಿಂದ ಕಳಕಳಿಯ ಮನವಿ ಮಾಡುತ್ತೇನೆ.  ಕೆಲಸಕ್ಕೆ ಹಾಜರಾಗಿ. ಜನಸಾಮಾನ್ಯರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ.  -ಬಸವರಾಜ್ ಬೊಮ್ಮಾಯಿ, ಗೃಹ ಕಾನೂನು ಮತ್ತು ಸಂಸದೀಯ … Continued