ದಿಢೀರ್‌ ಬೆಳವಣಿಗೆಯಲ್ಲಿ ಹೆಲಿಕ್ಯಾಪ್ಟರಿನಲ್ಲಿ ಬಿಎಸ್‌ವೈ ಮನೆಗೆ ಬಂದ ಸಚಿವ ಆನಂದ ಸಿಂಗ್‌..!

ಯಾದಗಿರಿ: ದಿಢೀರ್‌ ರಾಜಕೀಯ ಬೆಳವಣಿಗೆಯೊಂದರಲ್ಲಿ ಇಂದು (ಬುಧವಾರ) ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ನರಸಿಂಹ ನಾಯಕ ( ರಾಜುಗೌಡ) ಅವರು ಹೊಸಪೇಟೆಗೆ ತೆರಳಿ ಹೆಲಿಕ್ಯಾಪ್ಟರ್‌ನಲ್ಲಿ ಬೆಂಗಳೂರಿಗೆ ತೆರಳಿದ್ದು, ಸದ್ಯ ಮಾಜಿ ಮುಖ್ಯಮಂತ್ರಿ ನಿವಾಸದಲ್ಲಿದ್ದಾರೆ.
ಬೆಂಗಳೂರಿಗೆ ಹೋಗುವ ಮೊದಲು ಅವರು ಹೊಸಪೇಟೆಯಲ್ಲಿ ಸಚಿವ ಆನಂದ ಸಿಂಗ್‌ ಅವರನ್ನೂ ಸಹ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸೂಚನೆಯ ಮೇರೆ ಆನಂದ ಸಿಂಗ್‌ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ ಎಂದು ಬಿಜೆಪಿ ಮೂಲವೊಂದು ತಿಳಿಸಿದೆ.
ಮೂಲದ ಪ್ರಕಾರ, ಹೆಲಿಕ್ಯಾಪ್ಟರ್‌ ಬೆಂಗಳೂರಿನಿಂದಲೇ ಬಂದಿದ್ದು, ಅದು ಆನಂದ ಸಿಂಗ್‌ ಅವರನ್ನು ಬೆಂಗಳೂರಿಗೆ ಕರೆತರಲು ಬಂದಿತ್ತು. ಕರೆತರುವ ಜವಾಬ್ದಾರಿಯನ್ನು ಸುರಪುರದ ಶಾಸಕ ರಾಜು ಗೌಡ ಅವರಿಗೆ ಯಡಿಯೂರಪ್ಪ ವಹಿಸಿದ್ದು ಅವರು ಆನಂದ ಸಿಂಗ್‌ ಅವರನ್ನು ಬೆಂಗಳೂರಿಗೆ ಕರೆದೊಯಿದ್ದಾರೆ.
ರಾಜು ಗೌಡ ಅವರು ಸುರಪುರದ ಪ್ರವಾಸಿ ಮಂದಿರದ ಹೆಲಿಪ್ಯಾಡ್ ನಿಂದ ಹೆಲಿಕ್ಯಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಿದ್ದಾರೆ. ಹಾಗೂ ಯಡಿಯೂರಪ್ಪ ಅವರ ಮನೆಯಲ್ಲಿ ಯಡಿಯೂರಪ್ಪ ಹಾಗೂ ಆನಂದ ಸಿಂಗ್‌ ಅವರು ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಭೆಯೊಂದರಲ್ಲಿದ್ದು ಸಭೆ ಮುಗಿದ ತಕ್ಷಣ ಅವರೂ ಆಗಮಿಸಲಿದ್ದಾರೆ ಎಂದು ಹೇಳಲಾಗಿದೆ.
ಆನಂದ ಸಿಂಗ್‌ ಅವರ ಅಸಮಾದಾನ ತಣಿಸುವ ನಿಟ್ಟಿನಲ್ಲಿ ಯಡಿಯೂರಪ್ಪ ರಂಗಪ್ರವೇಶ ಮಾಡಿದ ನಂತರ ಈ ಬೆಳವಣಿಗೆ ನಡೆದಿದೆ.
ಆನಂದ ಸಿಂಗ್‌ ಅವರು ಖಾತೆಯ ಜೊತೆಗೆ ಸ್ವಾತಂತ್ರ್ಯ ದಿನಾಚರಣೆಯಿಂದ ವಿಜಯ ನಗರ ಜಿಲ್ಲೆಗೆ ಚಾಲನೆ ನೀಡಬೇಕು. ಅದಕಕೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕಚೇರಿಯೂ ಸ್ಥಾಪನೆಯಾಗಬೇಕು ಹಾಗೂ ವಿಜಯ ನಗರ ಜಿಲ್ಲೆಗೆ ಬಜೆಟ್‌ನಲ್ಲಿ ಘೋಷಣೆಯಾಗಿರುವ ಐದುನೂರು ಕೋಟಿ ರೂ.ಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂಬ ಬೇಡಿಕೆ ಸಹ ಇದೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement