ಕೊವಿಡ್: ಮಾ.೧೭ರಂದು ಸಿಎಂಗಳ ಜೊತೆ ಪ್ರಧಾನಿ ಮೋದಿ ಸಭೆ

ನವ ದೆಹಲಿ: ದೇಶದ ಕೋವಿಡ್ -೧೯ ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಮಾ.೧೭ (ಬುಧವಾರ) ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ.
ಬೆರಳೆಣಿಕೆಯಷ್ಟು ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಿದ್ದರೆ, ಎರಡನೇ ತರಂಗದ ಭೀತಿ ಮತ್ತು ರಾಜ್ಯ ಸರ್ಕಾರಗಳು ಸಮಯಕ್ಕಿಂತ ಮುಂಚಿತವಾಗಿಯೇ ಇದಕ್ಕೆ ಸಿದ್ಧವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸಭೆ ನಡೆಸಲಾಗುತ್ತದೆ.
ಕಳೆದ ೨೪ ಗಂಟೆಗಳಲ್ಲಿ, ದೇಶಾದ್ಯಂತ ೨೬,೨೯೧ ಪ್ರಕರಣಗಳು ವರದಿಯಾಗಿವೆ – ಇದು ೨೦೨೧ರಲ್ಲಿ ಅತಿ ಹೆಚ್ಚು ದೈನಂದಿನ ಸಂಖ್ಯೆಯಾಗಿದೆ.ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಗುಜರಾತ್ ಮತ್ತು ತಮಿಳುನಾಡು ದೈನಂದಿನ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳ ಕಾಣುತ್ತಿವೆ. ಈ ರಾಜ್ಯಗಳಲ್ಲಿ ಕಳೆದ ೨೪ ಗಂಟೆಗಳಲ್ಲಿ ವರದಿಯಾದ ಒಟ್ಟು ಹೊಸ ಪ್ರಕರಣಗಳ ಶೇಕಡಾ ೭೮.೪೧ ರಷ್ಟಿದೆ.
ಭಾರತದಲ್ಲಿ ಪ್ರಸ್ತುತ ೨,೧೯,೨೬೨ಸಕ್ರಿಯ ಪ್ರಕರಣಗಳಿವೆ – ಕೇರಳ, ಪಂಜಾಬ್ ಮತ್ತು ಮಹಾರಾಷ್ಟ್ರಗಳಲ್ಲಿ ಶೇ.೭೭ ರಷ್ಟು ಪ್ರಕರಣಗಳಿವೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement