ಮತ್ತೆ ೨೫ ಸಾವಿರ ದಾಟಿದ ಭಾರತದ ದಿನವೊಂದರ ಕೊರೊನಾ ಸೋಂಕು..!

ನವದೆಹಲಿ: ದೇಶದಲ್ಲಿ ದಿನವೊಂದರ ಕೊರೊನಾ ಪ್ರಕರಣಗಳ ಸಂಖ್ಯೆ ಕಳೆದ ೨೪ ತಾಸಿನಲ್ಲಿ ೨೫ ಸಾವಿರವನ್ನು ದಾಟಿದೆ..! ಭಾನುವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯವಾದ ೨೪ ತಾಸುಗಳ ಅವಧಿಯಲ್ಲಿ ೨೫, ೩೨೦ ಹೊಸ ಪ್ರಕರಣಗಳು ದಾಖಲಾಗಿದ್ದು, ಇದು ಕಳೆದ ವರ್ಷದ ಡಿಸೆಂಬರ್‌ ೨೦ರ ನಂತರ ಅಂದರೆ ೮೪ ದಿನಗಳಲ್ಲೇ ಗರಿಷ್ಠ ಪ್ರಮಾಣವಾಗಿದೆ.ಕಳೆದ ವರ್ಷ ಡಿಸೆಂಬರ್ 20 ರಂದು ದೇಶದಲ್ಲಿ೨೬೨೬೪ ಪ್ರಕರಣಗಳು ಪತ್ತೆಯಾಗಿದ್ದವು.
ಶನಿವಾರ ೨೪,೮೮೨ ಪ್ರಕಣರಗಳು ದಾಖಲಾಗಿತ್ತು. ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಪ್ರಕರಣಗಳು ದಿಢೀರ್‌ ಏರಿಕೆ ಕಂಡುಬಂದಿದೆ.
ಕರ್ನಾಟಕದಲ್ಲಿಯೂ ಶನಿವಾರ ಸಂಜೆಯ ಬುಲೆಟಿನ್‌ ಪ್ರಕಾರ ೯೨೧ ಕೊರೊನಾ ಸೋಂಕು ದಾಖಲಾಗಿದ್ದವು.
ದೇಶದಲ್ಲಿ ಕಳೆದ ೨೪ ತಾಸಿನಲ್ಲಿ ೧೬೧ ಜನರು ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಇದೇ ವೇಳೆ ಸಕ್ರಿಯ ಸೋಂಕಿತರ ಪ್ರಮಾಣ ೨.೧೦ ಲಕ್ಷಕ್ಕೆ ಹೆಚ್ಚಳವಾಗಿದೆ.
ಒಟ್ಟು ಸಾವಿಗೀಡಾದವರ ಸಂಖ್ಯೆ ೧,೫೮,೬೦೭ಕ್ಕೆ ಏರಿಕೆಯಾಗಿದೆ. ಜೊತೆಗೆ ಒಟ್ಟು ಸೋಂಕಿತರ ಸಂಖ್ಯೆ ೧,೧೩,೫೯,೦೪೮ಕ್ಕೆ ತಲುಪಿದ್ದು, ೧,೦೯,೮೯,೮೯೭ ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement