42, 848 ರಕ್ಷಣಾ ಸಿಬ್ಬಂದಿಗೆ ಕೊವಿಡ್ ಪಾಸಿಟಿವ್

ನವ ದೆಹಲಿ: ಈವರೆಗೆ ಒಟ್ಟಾರೆ, 42 848 ರಕ್ಷಣಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿರುವುದಾಗಿ ರಕ್ಷಣಾ ಖಾತೆ ಸಹಾಯಕ ಸಚಿವ ಶ್ರೀಪಾದ್ ನಾಯಕ್ ರಾಜ್ಯಸಭೆಗೆ ಸೋಮವಾರ ತಿಳಿಸಿದ್ದಾರೆ.
ಭೂಸೇನೆಯಲ್ಲಿ 32,690 ಕೋವಿಡ್-19 ಪಾಸಿಟಿವ್ ಪ್ರಕರಣಗಳಿದ್ದು, ಶೇ. 0.24 ರಷ್ಟು ಮರಣ ಪ್ರಮಾಣವಿದೆ. ಭಾರತೀಯ ವಾಯುಪಡೆ ಮತ್ತು ನೌಕಪಡೆಯಲ್ಲಿ ಕ್ರಮವಾಗಿ 6,554 ಮತ್ತು 3,604 ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ ಎಂದು ಅವರು ಹೇಳಿದ್ದಾರೆ.
ರಕ್ಷಣಾ ಸಿಬ್ಬಂದಿ ಸಾವಿನ ಪ್ರಮಾಣ ಕ್ರಮವಾಗಿ 0.39% ಮತ್ತು 0.05% ರಷ್ಟಿದೆ. ನಿಯಮಗಳ ಪ್ರಕಾರ, ಸೇವೆಯಲ್ಲಿರುವಾಗ ಸಾಂಕ್ರಾಮಿಕ ಕಾಯಿಲೆಯಿಂದ ಸಂಭವಿಸುವ ಸಾವುಗಳಿಗೆ ಯಾವುದೇ ವಿಶೇಷ ಪರಿಹಾರವನ್ನು ಸಶಸ್ತ್ರ ಪಡೆ ಸಿಬ್ಬಂದಿಗೆ ನೀಡಲಾಗುವುದಿಲ್ಲ ಎಂದು ಅವರು ಹೇಳಿದರು.

4 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

ನಿಮ್ಮ ಕಾಮೆಂಟ್ ಬರೆಯಿರಿ

advertisement