ಕೋವಿಡ್-19 ನಕಾಶೆಯಲ್ಲಿ ಚೀನಾ-ಪಾಕಿಸ್ತಾನ ಸೇರಿದ ಕಾಶ್ಮೀರ!

ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್-19 ಡ್ಯಾಶ್ ಬೋರ್ಡ್ ನಲ್ಲಿ ಪ್ರಕಟಿಸಿದ ವಿಶ್ವ ನಕಾಶೆಯಲ್ಲಿ ಕಾಶ್ಮೀರವನ್ನು ಚೀನಾ, ಪಾಕಿಸ್ತಾನಕ್ಕೆ ಸೇರಿಸಲಾಗಿದೆ. ಈ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಶಂತನು ಸೇನ್ ಈ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ. ತಪ್ಪು ಮಾಹಿತಿ ನೀಡುವ ನಕಾಶೆ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ನಕಾಶೆ ಪ್ರಕಾರ ಅರುಣಾಚಲ ಪ್ರದೇಶ ಕೂಡ ಚೀನಾ, ಪಾಕಿಸ್ತಾನದ ಭಾಗವಾಗಿದೆ.
ವೆಬ್ ಸೈಟ್ ನಲ್ಲಿ ನಕಾಶೆ ಪ್ರಕಾರ ಭಾರತದ ಗಡಿಯನ್ನು ನೀಲಿಬಣ್ಣದಲ್ಲಿ ತೋರಿಸಲಾಗಿದೆ. ಆದರೆ ಕಾಶ್ಮೀರ ಭೂಭಾಗ ಬೇರೆ ಬಣ್ಣ (ಗ್ರೇ)ದಲ್ಲಿ ತೋರಿಸಲಾಗಿದೆ. ಅದರ ಮೇಲೇ ಮೌಸ್ ಪಾಯಿಂಟರ್ ತೆಗೆದುಕೊಂಡು ಹೋದರೆ ಪಾಕಿಸ್ತಾನ ಎಂದು ತೋರಿಸುತ್ತರೆ. ಅದೇ ಭಾಗದ ಮೂಲೆಯ ಚಿಕ್ಕಭಾಗ ಇನ್ನೊಂದು ಬಣ್ಣದಲ್ಲಿ ತೋರಿಸಲಾಗಿದೆ. ಆ ಭಾಗದ ಮೇಲೆ ಮೌಸ್ ಪಾಯಿಂಟರ್ ಇಟ್ಟರೆ ಚೀನಾ ಎಂದು ತೋರಿಸುತ್ತಿದೆ.
ಇದೊಂದು ಗಂಭೀರ ಅಂತಾರಾಷ್ಟ್ರೀಯ ವಿಚಾರ ಎಂದು ಸೇನ್ ಕಳವಳ ವ್ಯಕ್ತಪಡಿಸಿದ್ದಾರೆ. ಕೂಡಲೇ ಸರಿಪಡಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
2021ರಲ್ಲಿ ಟ್ವೀಟರ್ ಭಾರತದ ನಕಾಶೆಯನ್ನು ತಪ್ಪಾಗಿ ತೋರಿಸಿತ್ತು. ಜಮ್ಮ-ಕಾಶ್ಮೀರ ಪ್ರತ್ಯೇಕ ದೇಶ, ಲಡಾಕ್ ಬಹುಭಾಗ ಚೀನಾಕ್ಕೆ ಸೇರಿದ್ದು ಎಂದು ತೋರಿಸಲಾಗಿತ್ತು. 2020ರಲ್ಲಿ ಲೇಹ್ ಪ್ರದೇಶದ ರಿಪಬ್ಲಿಕ್ ಆಫ್ ಚೀನಾದ ಭಾಗ ಎಂದು ತೋರಿಸಿ ಪ್ರಮಾಣ ಎಸಗಿತ್ತು. ಭಾರತ ಎಚ್ಚರಿಕೆ ನೀಡಿದ ಬಳಿಕ ಸರಿಪಡಿಸಲಾಗಿತ್ತು.
ವಿಶ್ವ ಆರೋಗ್ಯ ಸಂಸ್ಥೆ ದಾಖಲಿಸಿದ ನಕಾಶೆಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಪ್ರಮುಖ ಸುದ್ದಿ :-   ದಾಖಲೆಯ 613 ದಿನಗಳ ಕಾಲ ಕೋವಿಡ್‌ ಜೊತೆ ಜೀವಿಸಿದ್ದ 72 ವರ್ಷದ ವ್ಯಕ್ತಿ ; ಸಾಯುವ ಮೊದಲು ಆತನ ದೇಹದಲ್ಲಿ ಕೊರೊನಾ ವೈರಸ್‌ 50ಕ್ಕೂ ಹೆಚ್ಚು ಬಾರಿ ರೂಪಾಂತರಗೊಂಡಿತ್ತು..!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement