ಇನ್‌ಸ್ಟಾಗ್ರಾಂನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಹವಾ : 66 ಲಕ್ಷ ದಾಟಿದ ಇದರ ವೆಬ್‌ಸೈಟಿನ ಫಾಲೋವರ್ಸ್ ಸಂಖ್ಯೆ !

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಕೇವಲ ರಾಜಕೀಯ ಪ್ರಚಾರದ ವೇದಿಕೆಯಾಗಿ ಉಳಿದಿಲ್ಲ, ಬದಲಿಗೆ ತೀವ್ರ ವಿಡಂಬನೆ ಮತ್ತು ವ್ಯಂಗ್ಯದ ಕೇಂದ್ರಗಳಾಗಿಯೂ ಬದಲಾಗುತ್ತಿವೆ. ಇದಕ್ಕೆ ಹೊಸ ಉದಾಹರಣೆಯೆಂಬಂತೆ, ಕೇವಲ ಕೆಲವೇ ದಿನಗಳ ಹಿಂದೆ ಆರಂಭವಾದ ‘ಕಾಕ್ರೋಚ್ ಜನತಾ ಪಾರ್ಟಿ’ (Cockroach Janta Party) ಎಂಬ ವ್ಯಂಗ್ಯಭರಿತ ವೆಬ್‌ಸೈಟ್ ಇನ್‌ಸ್ಟಾಗ್ರಾಮ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಆರಂಭವಾದ ಕೆಲವೇ … Continued

ಇನ್‌ಸ್ಟಾಗ್ರಾಂನಲ್ಲಿ 10 ಕೋಟಿ ಫಾಲೋವರ್ಸ್ ದಾಟಿದ ವಿಶ್ವದ ಮೊದಲ ರಾಜಕಾರಣಿಯಾದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಜನಪ್ರಿಯ ಫೋಟೋ ಹಂಚಿಕೆ ಅಪ್ಲಿಕೇಶನ್ ಆದ ಇನ್‌ಸ್ಟಾಗ್ರಾಮ್‌ನಲ್ಲಿ (Instagram) 10 ಕೋಟಿ ((100 ಮಿಲಿಯನ್) ಅನುಯಾಯಿಗಳ (Followers) ಐತಿಹಾಸಿಕ ಮೈಲಿಗಲ್ಲನ್ನು ದಾಟಿದ ವಿಶ್ವದ ಮೊದಲ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2014 ರಲ್ಲಿ ಮೆಟಾ ಮಾಲೀಕತ್ವದ ಈ ಅಪ್ಲಿಕೇಶನ್‌ಗೆ ಸೇರಿದ ಪ್ರಧಾನಿಯವರು, ಪ್ರಸ್ತುತ 1,205 ಪೋಸ್ಟ್‌ಗಳನ್ನು … Continued

16 ವರ್ಷದೊಳಗಿನ ಮಕ್ಕಳಿಗಾಗಿ ಇನ್​ಸ್ಟಾಗ್ರಾಂ​ನಲ್ಲಿ ಹೊಸ ನಿಯಮ….

ಇನ್‌ಸ್ಟಾಗ್ರಾಮ್ ಪ್ಲಾಟ್‌ಫಾರ್ಮ್‌ನಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಇನ್ನು ಮುಂದೆ 16 ವರ್ಷದೊಳಗಿನ ಮಕ್ಕಳಿಗೆ ಲೈವ್ ಮಾಡಲು ಇದರಲ್ಲಿ ಅವಕಾಶ ಇರುವುದಿಲ್ಲ. ಮೆಟಾ ಶೀಘ್ರದಲ್ಲೇ 16 ವರ್ಷದೊಳಗಿನ ಮಕ್ಕಳು ಇನ್‌ಸ್ಟಾಗ್ರಾಮ್‌(Instagram)ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುವುದನ್ನು ತಡೆಯಲಿದೆ. ಇದಕ್ಕೆ ಅವರ ತಂದೆ-ತಾಯಿಗಳು ಅನುಮತಿ ಬೇಕಾಗುತ್ತದೆ. ಹೊಸ ಸುರಕ್ಷತಾ ನಿಯಮವು ಆನ್‌ಲೈನ್‌ನಲ್ಲಿ 16 ವರ್ಷದೊಳಗಿನ ಬಳಕೆದಾರರಿಗೆ ಸುರಕ್ಷತಾ ಕ್ರಮಗಳನ್ನು … Continued

ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ 16 ವರ್ಷದ ಬಾಲಕನ ಜೊತೆ ಓಡಿಹೋದ 10 ವರ್ಷದ ಬಾಲಕಿ…!

ಅಹ್ಮದಾಬಾದ್‌: ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಪರಿಚಯವಾದ ಬಂದ ನಂತರ 10 ವರ್ಷದ ಬಾಲಕಿ 16 ವರ್ಷದ ಹುಡುಗನ ಜೊತೆ ಓಡಿಹೋದ ಘಟನೆ ಗುಜರಾತಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಹುಡುಗಿಯ ಮನೆಯವರು ದೂರು ನೀಡಿದ ಕೆಲವೇ ಗಂಟೆಗಳ ನಂತರ ಅವರು ಹತ್ತಿರದ ಹಳ್ಳಿಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಅವರನ್ನು ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ.ಡಿಸೆಂಬರ್ 31 ರಂದು 5 ನೇ ತರಗತಿ ವಿದ್ಯಾರ್ಥಿನಿಯಾಗಿದ್ದ … Continued

ವಿಚ್ಛೇದನ ವದಂತಿ ನಡುವೆ ಇನ್ಸ್ಟಾಗ್ರಾಂನಲ್ಲಿ ಎಲ್ಲ ಫೋಟೊ ಅಳಿಸಿ, ಪರಸ್ಪರ ಅನ್‌ ಫಾಲೋವ್‌ ಮಾಡಿದ ಧನಶ್ರೀ ವರ್ಮಾ-ಕ್ರಿಕೆಟಿಗ ಯುಜ್ವೇಂದ್ರ ಚಾಹಲ್

ನವದೆಹಲಿ : ನಟಿ-ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಮತ್ತು ಟೀಂ ಇಂಡಿಯಾ ಕ್ರಿಕೆಟ್‌ ಆಟಗಾರ ಯುಜ್ವೇಂದ್ರ ಚಹಾಲ್ ಇತ್ತೀಚೆಗೆ ದಾಂಪತ್ಯದ ವಿಷಯದಲ್ಲಿ ಸುದ್ದಿಯಲ್ಲಿದ್ದಾರೆ. ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳ ನಡುವೆ, ದಂಪತಿ ಇನ್ಸ್ಟಾಗ್ರಾಂನಲ್ಲಿ ಪರಸ್ಪರ ಅನ್‌ ಫಾಲೋವ್‌ ಮಾಡಿಕೊಂಡಿದ್ದಾರೆ. ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಅವರು ತಮ್ಮ ಪತ್ನಿ ಧನಶ್ರೀ ಅವರೊಂದಿಗೆ ಇದ್ದ ಎಲ್ಲಾ ಚಿತ್ರಗಳನ್ನೂ … Continued

ವಿಶ್ವದಾದ್ಯಂತ ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಮ್ ಸ್ಥಗಿತ ; ತೊಂದರೆ ಈಗ ಬಹುತೇಕ ಸರಿಯಾಗಿದೆ ಎಂದ ಮೆಟಾ

ಬುಧವಾರ ರಾತ್ರಿ ಸುಮಾರು 11 ಗಂಟೆಯಿಂದ ಮೆಟಾ ಸರ್ವರ್​​ ಡೌನ್(outages) ಆದ ಹಿನ್ನೆಲೆಯಲ್ಲಿ ವಾಟ್ಸಾಪ್‌ (WhatsApp), ಇನ್ಸ್ಟಾಗ್ರಾಂ (Instagram) ಹಾಗೂ ಫೇಸ್ಬುಕ್‌ (Facebook) ಅಪ್ಲಿಕೇಷನ್​ಗಳು ಸ್ಥಗಿತಗೊಂಡಿದ್ದವು. ಇದರಿಂದ ಬಳಕೆದಾರರು ಕರೆ, ಸಂದೇಶಗಳನ್ನು ಕಳುಹಿಸಲು ಹಾಗೂ ಸ್ವೀಕರಿಸಲಾಗದೇ ಪರದಾಡಬೇಕಾಯಿತು. ಮೆಟಾದಿಂದ ಈಗ ನವೀಕರಣ ಬಂದಿದ್ದು, ಸಮಸ್ಯೆಯನ್ನು ಶೇಕಡಾ 99 ರಷ್ಟು ಪರಿಹರಿಸಲಾಗಿದೆ ಮತ್ತು ಕಂಪನಿಯ ಎಂಜಿನಿಯರ್‌ಗಳು ಕೆಲವು … Continued

ಇನ್‌ಸ್ಟಾಗ್ರಾಂನಲ್ಲಿ ಅರಳಿದ ಪ್ರೀತಿ…ಫೋನ್‌ ನಲ್ಲಿ ಮದುವೆ ನಿಶ್ಚಯ…ದಿಬ್ಬಣ ಸಮೇತ ಮದುವೆ ಸ್ಥಳಕ್ಕೆ ಹೋದ ಮದುಮಗ…ವಧು ನಾಪತ್ತೆ….!

ಚಂಡೀಗಡ: ಮೂರು ವರ್ಷದ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಪರಿಚಿತಳಾಗಿದ್ದ ಮನ್‌ಪ್ರೀತ್ ಕೌರ್ ಎಂಬ ಮಹಿಳೆಯನ್ನು ಮದುವೆಯಾಗಲು ಜಲಂಧರ ಮೂಲದ ದೀಪಕಕುಮಾರ(24) ದುಬೈನಿಂದ ಕಳೆದ ತಿಂಗಳು ಭಾರತಕ್ಕೆ ವಾಪಸಾಗಿದ್ದ. ಆದರೆ ಮದುವೆಯ ದಿನ ವಧು ನಾಪತ್ತೆಯಾಗಿದ್ದು, ಆಕೆ ವಿವಾಹಕ್ಕಾಗಿ ಬುಕ್ ಮಾಡಲಾಗಿದೆ ಎಂದು ಹೇಳಿದ ಕಲ್ಯಾಣ ಮಂಟಪಕ್ಕೆ ಮದುಮಗ ದಿಬ್ಬಣದೊಂದಿಗೆ ಬಂದರೆ ಅಲ್ಲಿ ಆ ಹೆಸರಿನ ಕಲ್ಯಾಣ ಮಂಟಪವೇ … Continued

ಯೋಗೇಶ್ವರ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ ಮಲಮಗಳ ವಿರುದ್ಧ ತಡೆಯಾಜ್ಞೆ ತಂದ ತಾಯಿ

ಬೆಂಗಳೂರು : ವಿಧಾನಸಭೆ ಉಪಚುನಾವಣೆಯಲ್ಲಿ ಚನ್ನಪಟ್ಟಣದ ಕ್ಷೇತ್ರದ ಹಾಲಿ ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ. ಯೋಗೇಶ್ವರ ವಿರುದ್ಧ ಅವರ ಮೊದಲ ಪತ್ನಿಯ ಪುತ್ರಿ ನಿಶಾ ಯೋಗೇಶ್ವರ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಮಾನಹಾನಿಕರ ಅಥವಾ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ಸೋಮವಾರ ಕರ್ನಾಟಕ ಹೈಕೋರ್ಟ್‌ ನಿರ್ಬಂಧಿಸಿದೆ. ಮಾಜಿ ಸಚಿವ ಸಿ ಪಿ ಯೋಗೇಶ್ವರ ಪತ್ನಿ ಪಿ.ವಿ. ಶೀಲಾ ಸಲ್ಲಿಸಿರುವ ಅರ್ಜಿಯ … Continued

ರೀಲ್ಸ್‌ ವೇಳೆ ಬೆಳೆದ ಪ್ರೀತಿ- ಪ್ರೇಮ, ನಂತರ ಮದುವೆ ; ಈಗ ಗರ್ಭಿಣಿಯ ಅನುಮಾನಾಸ್ಪದ ಸಾವು

ಬೆಳಗಾವಿ : ರೀಲ್ಸ್‌ ಮೂಲಕ ಹೆಸರಾಗಿದ್ದ ಮೈಸೂರು ಮೂಲದ ಗರ್ಭಿಣಿಯನ್ನು ಆಕೆಯ ಪತಿಯ ಮನೆಯವರು ಹತ್ಯೆ ಮಾಡಿದ್ದಾರೆ ಎಂದು ಬೆಳಗಾವಿಯಲ್ಲಿ ಆಕೆಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಬೆಳಗಾವಿ ತಾಲೂಕು ಮಚ್ಚೆ ಗ್ರಾಮದ ಗರ್ಭಿಣಿ ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದು, ಆಕೆಯನ್ನು ಪತಿ ಹಾಗೂ ಅವನ ಕುಟುಂಬದವರು ಕೊಲೆ ಮಾಡಿದ್ದಾರೆ ಎಂದು … Continued

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ದಾಂಪತ್ಯದಲ್ಲಿ ಬಿರುಕು…? ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ʼಪಾಂಡ್ಯʼ ಹೆಸರು ತೆಗೆದುಹಾಕಿದ ಪತ್ನಿ ನತಾಶಾ…!

ಐಪಿಎಲ್‌(IPL)ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವ ತೊರೆದು ಮುಂಬೈ ಇಂಡಿಯನ್ಸ್ ತಂಡಕ್ಕೆ ಬಂದು ನಾಯಕರಾದ ಹಾರ್ದಿಕ್ ಪಾಂಡ್ಯ ಅವರಿಗೆ ಒಂದರ ಮೇಲೊಂದು ಹಿನ್ನಡೆಯಾಗುತ್ತಿದೆ. ಮುಂಬೈ ಇಂಡಿಯನ್ಸ್ ತಂಡ ಸೇರಿದ ನಂತರ ಅವರು ಮೈದಾನದಲ್ಲೇ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದರು. ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಹೀನಾಯ ಪ್ರದರ್ಶನ ಕಂಡಿತು. ಐಪಿಎಲ್ 2024 ರ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ … Continued