ವಿಶ್ವದಾದ್ಯಂತ ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಮ್ ಸ್ಥಗಿತ ; ತೊಂದರೆ ಈಗ ಬಹುತೇಕ ಸರಿಯಾಗಿದೆ ಎಂದ ಮೆಟಾ

ಬುಧವಾರ ರಾತ್ರಿ ಸುಮಾರು 11 ಗಂಟೆಯಿಂದ ಮೆಟಾ ಸರ್ವರ್​​ ಡೌನ್(outages) ಆದ ಹಿನ್ನೆಲೆಯಲ್ಲಿ ವಾಟ್ಸಾಪ್‌ (WhatsApp), ಇನ್ಸ್ಟಾಗ್ರಾಂ (Instagram) ಹಾಗೂ ಫೇಸ್ಬುಕ್‌ (Facebook) ಅಪ್ಲಿಕೇಷನ್​ಗಳು ಸ್ಥಗಿತಗೊಂಡಿದ್ದವು. ಇದರಿಂದ ಬಳಕೆದಾರರು ಕರೆ, ಸಂದೇಶಗಳನ್ನು ಕಳುಹಿಸಲು ಹಾಗೂ ಸ್ವೀಕರಿಸಲಾಗದೇ ಪರದಾಡಬೇಕಾಯಿತು.
ಮೆಟಾದಿಂದ ಈಗ ನವೀಕರಣ ಬಂದಿದ್ದು, ಸಮಸ್ಯೆಯನ್ನು ಶೇಕಡಾ 99 ರಷ್ಟು ಪರಿಹರಿಸಲಾಗಿದೆ ಮತ್ತು ಕಂಪನಿಯ ಎಂಜಿನಿಯರ್‌ಗಳು ಕೆಲವು ಅಂತಿಮ ಪರಿಶೀಲನೆಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದೆ. ಇದು “ತಾಂತ್ರಿಕ ಸಮಸ್ಯೆ” ಎಂದು ಮೆಟಾ ತಿಳಿಸಿದೆ.

ಪ್ರಪಂಚದಾದ್ಯಂತ ಬಳಕೆದಾರರು ಈ ಸಮಸ್ಯೆ ಎದುರಿಸಿದ್ದು, ಹಲವು ಗಂಟೆಗಳ ನಂತರ ಇದೀಗ ಎಲ್ಲಾ ಆಪ್‌ಗಳು ಕಾರ್ಯ ನಿರ್ವಹಿಸುತ್ತಿವೆ ಎನ್ನಲಾಗಿದೆ. ಕೋಟ್ಯಾಂತರ ಜನರು ಯಾವುದೇ ಸಂದೇಶಗಳನ್ನು ಕಳುಹಿಸಲಾಗದೇ ಪೇಚಿಗೆ ಸಿಲುಕಿದ್ದರು. ವಾಟ್ಸ್‌ಆಪ್‌ ಬಳಕೆದಾರರೇ ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ಸಮಸ್ಯೆ ಬಗ್ಗೆ ರಾತ್ರಿ 11 ಗಂಟೆಗೆ 20 ಸಾವಿರಕ್ಕೂ ಹೆಚ್ಚು ದೂರುಗಳು ಬಂದಿವೆ. ಇನ್‌ಸ್ಟಾಗ್ರಾಮ್ ವಿರುದ್ಧ ಸುಮಾರು 15 ಸಾವಿರ, ಹಾಗೂ ಫೇಸ್​ಬುಕ್ ಬಗ್ಗೆ 2.5 ಸಾವಿರ ದೂರುಗಳು ದಾಖಲಾಗಿವೆ ಎಂದು ವರದಿಯೊಂದು ತಿಳಿಸಿದೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

“ನಮ್ಮ ಅಪ್ಲಿಕೇಶನ್‌ಗಳನ್ನು ಪ್ರವೇಶಿಸುವ ಕೆಲವು ಬಳಕೆದಾರರಿಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ ಎಂದು ನಮಗೆ ತಿಳಿದಿದೆ. ನಾವು ಸಾಧ್ಯವಾದಷ್ಟು ಬೇಗ ಇದನ್ನು ಸಾಮಾನ್ಯ ಸ್ಥಿತಿಗೆ ತರಲು ಕೆಲಸ ಮಾಡುತ್ತಿದ್ದೇವೆ ಮತ್ತು ಯಾವುದೇ ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇವೆ” ಎಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಮೆಟಾ ಹೇಳಿದೆ. ನಮ್ಮೊಂದಿಗೆ ಸಹಕರಿಸಿದ್ದಕ್ಕಾಗಿ ಧನ್ಯವಾದಗಳು! ನಾವು 99% ನಷ್ಟು ಸಫಲರಾಗಿದ್ದೇವೆ. ಕೆಲವು ಕೊನೆಯ ಹಂತ ತಪಾಸಣೆಗಳನ್ನು ಮಾಡುತ್ತಿದ್ದೇವೆ. ಸ್ಥಗಿತದಿಂದ ತೊಂದರೆಗೊಳಗಾದವರಿಗೆ ನಾವು ಕ್ಷಮೆಯಾಚಿಸುತ್ತೇವೆ ಎಂದು ಮೆಟಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement