ವಿಮಾನದಲ್ಲಿ ರಾಮ ನಾಮ ಬರೆದ ಕೆ.ಎಚ್‌. ಮುನಿಯಪ್ಪ : 20 ವರ್ಷಗಳಿಂದ ರಾಮ ಕೋಟಿ ಬರೆಯುತ್ತಿದ್ದೇನೆ ಎಂದ ಸಚಿವರು

ನವದೆಹಲಿ: ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ಹೋಗದಿರಲು ನಿರ್ಧರಿಸಿರುವ ವಿಚಾರ ಬೆನ್ನಲ್ಲೇ ಬಿಜೆಪಿ-ಕಾಂಗ್ರೆಸ್ ನಾಯಕರ ನಡುವೆ ಪರಸ್ಪರ ವಾಗ್ವಾದ ಜೋರಾಗಿದೆ. ಇದೇ ವೇಳೆ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಾಮನಾಮ ಜಪ ಬರೆಯುತ್ತಿದ್ದ ವೀಡಿಯೊ ಕೂಡ ವೈರಲ್ ಆಗಿದೆ. ಕೆ.ಎಚ್.‌ ಮುನಿಯಪ್ಪ ಅವರು ಎಐಸಿಸಿ ಸಭೆ ನಿಮಿತ್ತ ನವದೆಹಲಿಗೆ ಪ್ರಯಾಣ … Continued

ಅಯೋಧ್ಯೆಯಿಂದ ಕಾಶಿಗೆ ʼರಾಮಜ್ಯೋತಿʼ ತಂದು ಮೆರವಣಿಗೆ ಮಾಡಲಿರುವ ಮುಸ್ಲಿಂ ಮಹಿಳೆಯರು…!

ಲಕ್ನೋ:  ಕಾಶಿ (ವಾರಾಣಸಿ)ಯ  ಇಬ್ಬರು ಮುಸ್ಲಿಂ ಮಹಿಳೆಯರಾದ ನಜ್ನೀನ್ ಅನ್ಸಾರಿ ಮತ್ತು ನಜ್ಮಾ ಪರ್ವಿನ್ ಅವರು ಅಯೋಧ್ಯೆ ರಾಂಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಮುಂಚಿತವಾಗಿ ಮಹತ್ವದ ಪ್ರಯಾಣ ಪ್ರಾರಂಭಿಸಲಿದ್ದಾರೆ. ರಾಮ ಜ್ಯೋತಿ ತಂದು ಅದನ್ನು ಕಾಶಿಯ  ಮುಸ್ಲಿಂ ಪ್ರದೇಶಗಳಲ್ಲಿ ಮೆರವಣಿಗೆ ಮಾಡಿ ರಾಮ ಜ್ಯೋತಿ ಎಲ್ಲೆಡೆ ದರ್ಶನ ಮಾಡಿಸಲು ಮುಂದಾಗಿದ್ದಾರೆ. ಭಗವಾನ್ ರಾಮನು ತಮ್ಮ ಪೂರ್ವಜ … Continued

ಅಯೋಧ್ಯೆ ರಾಮ ಮಂದಿರ : ಈ ವರ್ಷದ ಮಾರ್ಚ್‌ ವರೆಗೆ 900 ಕೋಟಿ ಖರ್ಚು, ಬ್ಯಾಂಕ್ ಖಾತೆಗಳಲ್ಲಿ 3,000 ಕೋಟಿ ರೂ ಇದೆ: ಚಂಪತ್ ರಾಯ್‌

ಅಯೋಧ್ಯೆ : ಫೆಬ್ರವರಿ 5, 2020 ಮತ್ತು ಈ ವರ್ಷದ ಮಾರ್ಚ್ 31 ರ ನಡುವೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ 900 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಮತ್ತು ಟ್ರಸ್ಟ್ ತನ್ನ ಬ್ಯಾಂಕ್ ಖಾತೆಗಳಲ್ಲಿ 3,000 ಕೋಟಿ ರೂಪಾಯಿಗಳನ್ನು ಹೊಂದಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಅಯೋಧ್ಯೆಯಲ್ಲಿ … Continued