ಅಯೋಧ್ಯೆಯಿಂದ ಕಾಶಿಗೆ ʼರಾಮಜ್ಯೋತಿʼ ತಂದು ಮೆರವಣಿಗೆ ಮಾಡಲಿರುವ ಮುಸ್ಲಿಂ ಮಹಿಳೆಯರು…!

ಲಕ್ನೋ:  ಕಾಶಿ (ವಾರಾಣಸಿ)ಯ  ಇಬ್ಬರು ಮುಸ್ಲಿಂ ಮಹಿಳೆಯರಾದ ನಜ್ನೀನ್ ಅನ್ಸಾರಿ ಮತ್ತು ನಜ್ಮಾ ಪರ್ವಿನ್ ಅವರು ಅಯೋಧ್ಯೆ ರಾಂಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಮುಂಚಿತವಾಗಿ ಮಹತ್ವದ ಪ್ರಯಾಣ ಪ್ರಾರಂಭಿಸಲಿದ್ದಾರೆ.
ರಾಮ ಜ್ಯೋತಿ ತಂದು ಅದನ್ನು ಕಾಶಿಯ  ಮುಸ್ಲಿಂ ಪ್ರದೇಶಗಳಲ್ಲಿ ಮೆರವಣಿಗೆ ಮಾಡಿ ರಾಮ ಜ್ಯೋತಿ ಎಲ್ಲೆಡೆ ದರ್ಶನ ಮಾಡಿಸಲು ಮುಂದಾಗಿದ್ದಾರೆ. ಭಗವಾನ್ ರಾಮನು ತಮ್ಮ ಪೂರ್ವಜ ಮತ್ತು ಭಗವಾನ್‌ ರಾಮನೊಂದಿಗೆ ಪ್ರತಿಯೊಬ್ಬ ಭಾರತೀಯನ ಡಿಎನ್‌ಎ ಹೆಣೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.
ವಾರಾಣಸಿ ನಿವಾಸಿಗಳಾದ ನಜೀನ್‌ ಅನ್ಸಾರಿ ಹಾಗೂ ನಜ್ಮಾ ಪರ್ವೀನ್‌ ಎಂಬ ಮುಸ್ಲಿಂ ಮಹಿಳೆಯರು ರಾಮ ಜ್ಯೋತಿಯನ್ನು ತರಲು ಅಯೋಧ್ಯೆಗೆ ತೆರಳಿದ್ದು, ರಾಮ ಜ್ಯೋತಿಗೆ ಪಾತಾಳಪುರಿ ಮಠದ ಮಹಂತರಾದ ಬಾಲಕ ದಾಸ್‌ ಹಾಗೂ ದೊಮ್‌ರಾಜ್‌ ಓಂ ಚೌಧರಿ ಶನಿವಾರ ಚಾಲನೆ ದೊರೆತಿದೆ.
ಅವರು ಅಯೋಧ್ಯೆಯಲ್ಲಿ ಮಹಂತ ಶಂಭು ದೇವಾಚಾರ್ಯ ಅವರಿಗೆ ರಾಮಜ್ಯೋತಿಯನ್ನು ಒಪ್ಪಿಸುತ್ತಾರೆ. ಇವರಿಬ್ಬರು ಭಾನುವಾರ ರಾಮಜ್ಯೋತಿಯೊಂದಿಗೆ ಅಯೋಧ್ಯೆಯ ಮಣ್ಣು ಮತ್ತು ಸರಯೂ ನದಿಯ ಪವಿತ್ರ ಜಲದೊಂದಿಗೆ ವಾರಾಣಸಿಗೆ ಬರಲು ಯೋಜಿಸಿದ್ದಾರೆ. ಜನವರಿ 21 ರಿಂದ ರಾಮಜ್ಯೋತಿ ಸಂಚಾರ ಪ್ರಾರಂಭವಾಗುತ್ತದೆ.

ಪ್ರಮುಖ ಸುದ್ದಿ :-   ಖರ್ಗೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಪಾಸಣೆ: ಚುನಾವಣಾಧಿಕಾರಿಗಳ ವಿರುದ್ಧ ಕಾಂಗ್ರೆಸ್‌ ಕಿಡಿ

ಈ ಮಹಿಳೆಯರು ಯಾರು..?
ಬನಾರಸ್‌ ಹಿಂದೂ ವಿಶ್ವ ವಿದ್ಯಾಲಯದಲ್ಲಿ ಸಂಘರ್ಷ ನಿರ್ವಹಣೆ ವಿಚಾರದ ಕುರಿತು ಅಧ್ಯಯನ ಮಾಡುತ್ತಿರುವ ನಜ್ಮಾ ಪರ್ವೀನ್‌ ಅವರು ಹನುಮಾನ್‌ ಚಾಲೀಸಾ ಹಾಗೂ ರಾಮ ಚರಿತ ಮಾನಸವನ್ನು ಉರ್ದುಗೆ ಭಾಷಾಂತರಿಸಿ ಖ್ಯಾತಿ ಗಳಿಸಿದ್ದಾರೆ. ಹಾಗೂ ಹಿಂದೂ-ಮುಸ್ಲಿಂ ಸಮುದಾಯಗಳ ನಡುವಿನ ಏಕತೆ ಮತ್ತು ಶಾಂತಿಗಾಗಿ ಅವಿರತವಾಗಿ ಶ್ರಮಿಸಿದ್ದಾರೆ. ಅಲ್ಲದೆ, ಪ್ರಧಾನಿ ಮೋದಿ ಕುರಿತಂತೆ ಪಿಎಚ್‌ಡಿ ಮಾಡಿದ ಹೆಗ್ಗಳಿಕೆಯೂ ಇವರದ್ದಾಗಿದೆ. ರಾಮಭಕ್ತಿಯಲ್ಲಿ ಬೇರೂರಿರುವ ಸಾಮಾಜಿಕ ಕಾರ್ಯಗಳ ಮೇಲೆ ಕೇಂದ್ರೀಕರಿಸಿದ ಸಂಘಟನೆಯಾದ ರಾಮ ಪಂಥ ಜೊತೆಗಿನ ಒಡನಾಟದ ಮೂಲಕ ರಾಮ ಪರಿವಾರ ಭಕ್ತಿ ಪ್ರಚಾರ ಮಾಡುವಲ್ಲಿ ಅವರು ತನ್ನ ಗುರುಗಳಾದ ಮಹಂತ ಬಾಲಕ ದಾಸ್ ಜೊತೆಗೆ ತೊಡಗಿಕೊಂಡಿದ್ದಾರೆ. ನಜ್ಮಾ ಅವರು ರಾಮ ಪರಿವಾರ ಭಕ್ತಿ ಆಂದೋಳನದಲ್ಲಿ 17 ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ. ತ್ರಿವಳಿ ತಲಾಖ್ ವಿರುದ್ಧ ಧ್ವನಿಯೆತ್ತಿದ್ದಾರೆ.

ಮುಸ್ಲಿಂ ಮಹಿಳಾ ಫೌಂಡೇಶನ್‌ನ ಅಧ್ಯಕ್ಷೆಯಾಗಿರುವ ನಜೀನ್‌ ಅನ್ಸಾರಿ ಅವರು 2006ರಲ್ಲಿ ಸಂಕಟ ಮೋಚನ ದೇವಸ್ಥಾನದ ಮೇಲೆ ಬಾಂಬ್‌ ದಾಳಿ ನಡೆದು ಕೋಮು ಸಂಘರ್ಷ ಶುರುವಾಗಿದ್ದ ಸಂದರ್ಭದಲ್ಲಿ 70 ಮುಸ್ಲಿಂ ಮಹಿಳೆಯರೊಟ್ಟಿಗೆ ದೇವಸ್ಥಾನಕ್ಕೆ ತೆರಳಿ ಹನುಮನ್‌ ಚಾಲೀಸಾ ಪಠಿಸಿ ಕೋಮುಸೌಹಾರ್ದಕ್ಕೆ ಕರೆ ನೀಡಿದವರಾಗಿದ್ದಾರೆ. ಯಾವುದೇ ವ್ಯಕ್ತಿ ತನ್ನ ಧರ್ಮವನ್ನು ಬದಲಿಸಬಹುದೇ ವಿನಃ ಪೂರ್ವಜರನ್ನಲ್ಲ. ರಾಮ ನಮ್ಮ ಪೂರ್ವಜ. ಮುಸಲ್ಮಾನರಿಗೆ ಮೆಕ್ಕಾ ಹೇಗೋ ಹಾಗೆಯೇ ಭಾರತದ ಸಂಸ್ಕೃತಿ ಮೇಲೆ ನಂಬಿಕೆ ಹೊಂದಿರುವವರಿಗೆ, ಅಯೋಧ್ಯೆ ಪುಣ್ಯಧಾಮವಾಗಿದೆ ಎಂದು ನಜ್ಮಾ ಪರ್ವೀನ್‌ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಗರ್ಭಧಾರಣೆ ಕುರಿತ ಪುಸ್ತಕದಲ್ಲಿ 'ಬೈಬಲ್' ಪದ ಬಳಕೆ: ನಟಿ ಕರೀನಾ ಕಪೂರಗೆ ಮಧ್ಯಪ್ರದೇಶ ಹೈಕೋರ್ಟ್ ನೋಟಿಸ್

 

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement