1528ರಿಂದ 2024ರ ರಾಮಮಂದಿರ ಉದ್ಘಾಟನೆವರೆಗೆ : 500 ವರ್ಷಗಳ ಕಾಯುವಿಕೆ, ಶತಮಾನದ ಕಾನೂನು ಸಂಘರ್ಷಗಳು ; ರಾಮಜನ್ಮಭೂಮಿ ಹೋರಾಟ ಸಾಗಿಬಂದ ಹಾದಿ…

ನವದೆಹಲಿ : ಅಯೋಧ್ಯೆಯಲ್ಲಿ ಸುಮಾರು 400 ಕಂಬಗಳು, 44 ಬಾಗಿಲುಗಳುಳ್ಳ ನೂತನ ರಾಮಂದಿರದ ನೂತನ ರಾಮನ ವಿಗ್ರಹಕ್ಕೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪ್ರಾಣ ಪ್ರತಿಷ್ಠೆ ಮಾಡಿದರು. ನೂರಾರು ಧಾರ್ಮಿಕ ವ್ಯಕ್ತಿಗಳು, ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅಯೋಧ್ಯಾ ನಗರದಲ್ಲಿ ನಡೆದ ಸಮಾರಂಭಕ್ಕೆ ದೇಶವು ಸಾಕ್ಷಿಯಾಯಿತು. ಅಯೋಧ್ಯೆಯಲ್ಲಿ ಈ ನೂತನ ರಾಮಮಂದಿರ ನಿರ್ಮಾಣ ಆಗುವ … Continued

ಅಯೋಧ್ಯೆಯಿಂದ ಕಾಶಿಗೆ ʼರಾಮಜ್ಯೋತಿʼ ತಂದು ಮೆರವಣಿಗೆ ಮಾಡಲಿರುವ ಮುಸ್ಲಿಂ ಮಹಿಳೆಯರು…!

ಲಕ್ನೋ:  ಕಾಶಿ (ವಾರಾಣಸಿ)ಯ  ಇಬ್ಬರು ಮುಸ್ಲಿಂ ಮಹಿಳೆಯರಾದ ನಜ್ನೀನ್ ಅನ್ಸಾರಿ ಮತ್ತು ನಜ್ಮಾ ಪರ್ವಿನ್ ಅವರು ಅಯೋಧ್ಯೆ ರಾಂಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಮುಂಚಿತವಾಗಿ ಮಹತ್ವದ ಪ್ರಯಾಣ ಪ್ರಾರಂಭಿಸಲಿದ್ದಾರೆ. ರಾಮ ಜ್ಯೋತಿ ತಂದು ಅದನ್ನು ಕಾಶಿಯ  ಮುಸ್ಲಿಂ ಪ್ರದೇಶಗಳಲ್ಲಿ ಮೆರವಣಿಗೆ ಮಾಡಿ ರಾಮ ಜ್ಯೋತಿ ಎಲ್ಲೆಡೆ ದರ್ಶನ ಮಾಡಿಸಲು ಮುಂದಾಗಿದ್ದಾರೆ. ಭಗವಾನ್ ರಾಮನು ತಮ್ಮ ಪೂರ್ವಜ … Continued

ವೀಡಿಯೊ..| 5,000 ಅಮೆರಿಕನ್ ವಜ್ರಗಳು-2 ಕೆಜಿ ಬೆಳ್ಳಿ ಬಳಸಿ ʼರಾಮಮಂದಿರʼ ನೆಕ್ಲೇಸ್ ತಯಾರಿಕೆ : ವಜ್ರದ ವ್ಯಾಪಾರಿಯಿಂದ ಅಯೋಧ್ಯಾ ರಾಮನಿಗೆ ನೆಕ್ಲೇಸ್ ಸಮರ್ಪಣೆ

ಸೂರತ್: ಜನವರಿಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಮುನ್ನ ವಜ್ರದ ವ್ಯಾಪಾರಿಯೊಬ್ಬರು ರಾಮಮಂದಿರದ ನೆಕ್ಲೇಸ್ ಅನ್ನು ತಯಾರಿಸಿದ್ದಾರೆ. ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿರುವ ಈ ನೆಕ್ಲೇಸ್ ಅನ್ನು 5,000 ಅಮೆರಿಕನ್ ವಜ್ರಗಳು ಮತ್ತು ಎರಡು ಕೆಜಿ ಬೆಳ್ಳಿಯನ್ನು ಬಳಸಿ ತಯಾರಿಸಲಾಗಿದೆ. ‘ಡೈಮಂಡ್-ಸಿಟಿ’ ಸೂರತ್‌ನಲ್ಲಿ ವಜ್ರದ ವ್ಯಾಪಾರದಿಂದ ನೆಕ್ಲೇಸ್ ಮಾಡಲಾಗಿದೆ. ನೆಕ್ಲೇಸ್ ತಯಾರಿಕೆಯಲ್ಲಿ ಏನು ಬಳಸಲಾಗಿದೆ? ಒಟ್ಟು 40 ಕುಶಲಕರ್ಮಿಗಳು … Continued

ರಾಮಮಂದಿರ ಉದ್ಘಾಟನೆ ವೇಳೆ ಗೋಧ್ರಾ ರೀತಿ ಘಟನೆಯ ಸಾಧ್ಯತೆ ಬಗ್ಗೆ ಉದ್ಧವ್ ಠಾಕ್ರೆ ನೀಡಿದ ಹೇಳಿಕೆಯಿಂದ ಹೊಸ ವಿವಾದ

ಮುಂಬೈ : ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ರಾಮ ಮಂದಿರ ಉದ್ಘಾಟನೆ ವೇಳೆ ಗೋಧ್ರಾ ರೈಲು ದಹನದಂತಹ ಘಟನೆ ಸಂಭವಿಸುವ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಠಾಕ್ರೆ, “ಸರ್ಕಾರವು ರಾಮಮಂದಿರ ಉದ್ಘಾಟನೆಗೆ ಹೆಚ್ಚಿನ ಸಂಖ್ಯೆಯ ಜನರನ್ನು ಆಹ್ವಾನಿಸಬಹುದು ಮತ್ತು ಅವರ ಹಿಂದಿರುಗುವಾಗ ಪ್ರಯಾಣದ ಸಮಯದಲ್ಲಿ ಗೋಧ್ರಾದಲ್ಲಿ ನಡೆದಂತಹ ಘಟನೆ … Continued