ಮೀನುಗಾರನ ತಲೆಕೆಳಗಾಗಿ ನೇತು ಹಾಕಿ ಹಲ್ಲೆ : 6 ಜನರ ಬಂಧನ

ಮಂಗಳೂರು: ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಆಂಧ್ರಪ್ರದೇಶ ಮೂಲದ ಮೀನುಗಾರಿಕಾ ಕಾರ್ಮಿಕರು ವ್ಯಕ್ತಿಯೊಬ್ಬನನ್ನು ಉಲ್ಟಾ ನೇತು ಹಾಕಿ ಅಮಾನವೀಯವಾಗಿ ವರ್ತಿಸಿದ ಘಟನೆ ಸಂಬಂಧ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಮೊಬೈಲ್ ಕದ್ದ ಆರೋಪದಲ್ಲಿ ವೈಲ ಶೀನುನನ್ನು ಮೀನುಗಾರಿಕ ಬೋಟ್‍ನಲ್ಲಿಯೇ ಉಲ್ಟಾ ನೇತು ಹಾಕಿ ಆಂಧ್ರಪ್ರದೇಶ ಮೂಲದ ಆರು ಜನ ಮೀನುಗಾರಿಕಾ ಕಾರ್ಮಿಕರು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹಲ್ಲೆ ನಡೆಸಿದ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬಂಧಿತರನ್ನು ಕೊಂಡೂರು ಪೋಲಯ್ಯ (23), ಅವುಲ ರಾಜ್‌ ಕುಮಾರ್‌ (26), ಕಾಟಂಗೇರಿ ಮನೋಹರ್‌‌ (21), ವೂಟುಕೋರಿ ಜಾಲಯ್ಯ (30), ಕರಪಿಂಗಾರ ರವಿ (27) ಹಾಗೂ ಪ್ರಲಯಕಾವೇರಿ ಗೋವಿಂದಯ್ಯ (47) ಎಂದು ಗುರುತಿಸಲಾಗಿದ್ದು, ಎಲ್ಲಾ ಆರೋಪಿಗಳು ಆಂಧ್ರಪ್ರದೇಶಕ್ಕೆ ಸೇರಿದವರು ಎನ್ನಲಾಗಿದೆ.
ಡಿ.14ರಂದು ಆರೋಪಿಗಳು ಮಂಗಳೂರಿನ ಮೀನುಗಾರಿಕಾ ದಕ್ಕೆಯಲ್ಲಿ ಶೈಲೇಶ್ 2 ಎಂಬ ಬೋಟಿನಲ್ಲಿ ಪಾರ್ಟಿಯೊಂದನ್ನು ಮಾಡಿದ್ದಾರೆ. ಆ ಪಾರ್ಟಿಗೆ ಪರಿಚಯದ ವೈಲ ಶೀನುನನ್ನು ಕರೆದಿದ್ದಾರೆ. ಮರುದಿನ ಬೆಳಗ್ಗೆ ಎದ್ದು ನೋಡಿದಾಗ ಪಾರ್ಟಿಯಲ್ಲಿದ್ದವರ ಎರಡು ಮೊಬೈಲ್ ನಾಪತ್ತೆಯಾಗಿದೆ. ಈ ಮೊಬೈಲ್‍ ಅನ್ನು ವೈಲ ಶೀನು ಕದ್ದಿದ್ದಾನೆ ಎಂದು ಆರೋಪಿಸಿ ಉಲ್ಟಾ ನೇತು ಹಾಕಿ ಸರಪಳಿಯಿಂದ ಹಲ್ಲೆ ನಡೆಸಲಾಗಿದೆ. ಆ ಬಳಿಕ ಸಾರ್ವಜನಿಕರ ಸಹಾಯಯಿಂದ ವೈಲ ಶೀನು ಪಾರಾಗಿ ಕಾರವಾರಕ್ಕೆ ತೆರಳಿದ್ದಾನೆ. ಈ ವಿಚಾರ ಪೊಲೀಸರಿಗೆ ತಿಳಿಯುತ್ತಿದ್ದಂತೆ ಹಲ್ಲೆ ನಡೆಸಿದ ಆರೋಪಿಗಳು ನಾಪತ್ತೆಯಾಗಿದ್ದರು. ಪೊಲೀಸರು ಆರೋಪಿಗಳನ್ನು ಈಗ ಬಂಧಿಸಿದ್ದಾರೆ.

ಪ್ರಮುಖ ಸುದ್ದಿ :-   ಚಾಮರಾಜನಗರ : ಇಂಡಿಗನತ್ತ ಮತಗಟ್ಟೆ ಮೇಲೆ ಕಲ್ಲು ತೂರಾಟ, ಗಲಾಟೆ, ಮತಯಂತ್ರಕ್ಕೆ ಹಾನಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement