ಅಯೋಧ್ಯೆಗೆ ಬರುವ ಯಾತ್ರಿಕರಿಗೆ ಉಚಿತ ಚಿಕಿತ್ಸೆ ನೀಡಲು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ : ಅಪೋಲೋ ಹಾಸ್ಪಿಟಲ್ಸ್ ಘೋಷಣೆ

ಅಯೋಧ್ಯೆ : ಅಪೋಲೋ ಹಾಸ್ಪಿಟಲ್ಸ್ ಗ್ರೂಪ್ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಯಾತ್ರಾಸ್ಥಳದಲ್ಲಿ ಅತ್ಯಾಧುನಿಕ ಮಲ್ಟಿ-ಸ್ಪೆಷಾಲಿಟಿ ತುರ್ತು ವೈದ್ಯಕೀಯ ಕೇಂದ್ರ ಪ್ರಾರಂಭಿಸುವುದಾಗಿ ಘೋಷಿಸಿದೆ.
ಕೇಂದ್ರದ ಸುಧಾರಿತ ಸೇವೆಗಳ ಕುರಿತು ಮಾತನಾಡಿದ ಅಪೋಲೋ ಹಾಸ್ಪಿಟಲ್ಸ್ ಗ್ರೂಪ್ ಅಧ್ಯಕ್ಷ ಡಾ. ಪ್ರತಾಪ್ ಸಿ.ರೆಡ್ಡಿ ಈ ಮಲ್ಟಿ-ಸ್ಪೆಷಾಲಿಟಿ ತುರ್ತು ವೈದ್ಯಕೀಯ ಕೇಂದ್ರ(multi-specialty emergency medical centre)ದಲ್ಲಿ ಉತ್ತಮವಾದ ವಿಸ್ತೃತ ವೈದ್ಯಕೀಯ ಸೇವೆಗಳು ಲಭ್ಯವಾಗಲಿವೆ. ಇವುಗಳಲ್ಲಿ ಪ್ರಾಥಮಿಕ ಪ್ರಥಮ ಚಿಕಿತ್ಸೆಯಿಂದ ಹಿಡಿದು ವೈದ್ಯಕೀಯ ತುರ್ತು ಸೇವೆಗಳು, ಹೃದಯಾಘಾತ ಮತ್ತು ಪಾರ್ಶ್ವವಾಯು ಸೇರಿದಂತೆ ಎಲ್ಲ ವೈದ್ಯಕೀಯ ಸೇವೆಗಳು ಇರಲಿವೆ ಎಂದು ಅವರು ಹೇಳಿದರು.
ವೈದ್ಯಕೀಯ ಕೇಂದ್ರವು ವಾರದ 24 ಗಂಟೆಗಳ ಕಾಲ (24×7) ಕ್ರಿಟಿಕಲ್ ಕೇರ್ ಬೆಂಬಲ ಮತ್ತು ವಯಸ್ಕರು ಮತ್ತು ಮಕ್ಕಳಿಗಾಗಿ ಐಸಿಯು ಬ್ಯಾಕಪ್ ಅನ್ನು ಸಹ ಹೊಂದಿರುತ್ತದೆ. ಈ ಆಸ್ಪತ್ರೆ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಡಾ ರೆಡ್ಡಿ ಹೇಳಿದರು.

ಹೇಳಿಕೆಯ ಪ್ರಕಾರ, ಇತ್ತೀಚಿನ ಟೆಲಿಮೆಡಿಸಿನ್ ತಂತ್ರಜ್ಞಾನದ ಮೂಲಕ ಆನ್‌ಲೈನ್ ಸೂಪರ್ ಸ್ಪೆಷಾಲಿಟಿ ಸಮಾಲೋಚನೆ ಕೇಂದ್ರದಲ್ಲಿ ಲಭ್ಯವಿರುತ್ತದೆ. ಇದರ ಮೂಲಕ, ತಜ್ಞರಿಗೆ ರೋಗಿಯ ಪ್ರವೇಶವು ತುಂಬಾ ಸುಲಭವಾಗುತ್ತದೆ. ಸರಿಸುಮಾರು 5,000 ಚದರ ಅಡಿ ಪ್ರದೇಶದಲ್ಲಿ ತುರ್ತು ವೈದ್ಯಕೀಯ ಕೇಂದ್ರವನ್ನು ನಿರ್ಮಿಸಲಾಗುತ್ತದೆ. ಹೇಳಿಕೆಯ ಪ್ರಕಾರ, ಶ್ರೀರಾಮ ಲಲ್ಲಾನ ದರ್ಶನಕ್ಕೆ ಬರುವ ಯಾತ್ರಾರ್ಥಿಗಳಿಗೆ ಕೇಂದ್ರದಲ್ಲಿ ವೈದ್ಯಕೀಯ ಸೇವೆಗಳು ಸಂಪೂರ್ಣವಾಗಿ ಉಚಿತವಾಗಿರುತ್ತದೆ.
ಲಕ್ನೋದ ಅಪೋಲೋ ಹಾಸ್ಪಿಟಲ್ಸ್ ಲಕ್ನೋದ ಎಂಡಿ ಮತ್ತು ಸಿಇಒ ಡಾ ಮಯಾಂಕ್ ಸೋಮಾನಿ ಮಾತನಾಡಿ, ಅಪೋಲೋ ಹಾಸ್ಪಿಟಲ್ಸ್ ಲಕ್ನೋ ನಡೆಸುತ್ತಿರುವ ಈ ಕೇಂದ್ರದ ಸೇವೆಗಳು ನಮ್ಮ ಸಮರ್ಪಣೆಗೆ ಸಾಕ್ಷಿಯಾಗಿದೆ.ಈ ಉಪಕ್ರಮವು ಅಯೋಧ್ಯೆಗೆ ಭೇಟಿ ನೀಡುವ ಯಾತ್ರಾರ್ಥಿಗಳ ಆರೋಗ್ಯ ಮತ್ತು ಯೋಗಕ್ಷೇಮದ ಕಡೆಗೆ ಅಪೋಲೋ ಆಸ್ಪತ್ರೆಗಳ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣದ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement