ಉದ್ಘಾಟನೆಯಾದ 2ನೇ ದಿನವೇ ಅಯೋಧ್ಯೆ ರಾಮ ಮಂದಿರದೊಳಕ್ಕೆ ಮಂಗ(ಹುನುಮಂತ)ನ ಪ್ರವೇಶ….

ಅಯೋಧ್ಯೆ: ಭಗವಾನ್‌ ರಾಮ ಇರುವಲ್ಲಿ ಹನುಮಂತ ಇದ್ದೇ ಇರುತ್ತಾನೆ ಎನ್ನುವುದು ಬಲವಾದ ನಂಬಿಕೆ. ಈ ನಂಬಿಕೆಗೆ ಕಾಕತಾಳೀಯವಾದ ಘಟನೆ ಅಯೋಧ್ಯೆ ರಾಮ ಮಂದಿರದಲ್ಲಿ ನಡೆದಿದೆ. ಮಂದಿರ ಉದ್ಘಾಟನೆಯಾದ ಮಾರನೇ ದಿನ ಮಂಗವೊಂದು ಮಂದಿರದ ಗರ್ಭಗುಡಿ ಪ್ರವೇಶಿಸಿ, ರಾಮನನ್ನು ಕಣ್ತುಂಬಿಕೊಂಡ ಘಟನೆ ನಡೆದಿದೆ. ಈ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಾಮಾಜಿಕ ಜಾಲತಾಣ … Continued

1949ರಲ್ಲಿ ಬಾಬರಿ ಮಸೀದಿಯೊಳಗೆ ʼಕಂಡುಬಂದʼ ಹಳೆಯ ರಾಮನ ಮೂರ್ತಿಯನ್ನು ನೂತನ ರಾಮ ಮಂದಿರದಲ್ಲಿ ಎಲ್ಲಿ ಪ್ರತಿಷ್ಠಾಪಿಸ್ತಾರೆ….?

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನಾ ಸಮಾರಂಭವು ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಕೋಟ್ಯಂತರ ಹಿಂದೂಗಳಿಂದ ವೀಕ್ಷಿಸಲ್ಪಟ್ಟಿತು. ಈಗ ಯೋಜಿಸಲಾಗುತ್ತಿರುವ ಮತ್ತೊಂದು ಪ್ರಮುಖ ಸಂಗತಿಯೆಂದರೆ ಹಳೆಯ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸುವುದು, ಇದು ಡಿಸೆಂಬರ್ 22, 1949 ರ ರಾತ್ರಿ ಬಾಬರಿ ಮಸೀದಿಯೊಳಗೆ ಕಂಡುಬಂದ ನಂತರದಿಂದ ಈವರೆಗೂ ತಾತ್ಕಾಲಿಕ ಟೆಂಟ್‌ ತರಹದ ರಚನೆಯಲ್ಲಿ ಪೂಜಿಸಲ್ಪಡುತ್ತಿದೆ. ಬಾಬರಿ ಮಸೀದಿಯಲ್ಲಿ ರಾಮನ ವಿಗ್ರಹವು … Continued

ಪ್ರಧಾನಿ ಮೋದಿ 11 ದಿನ ಉಪವಾಸ ಮಾಡಿದ ಬಗ್ಗೆ ಅನುಮಾನವಿದೆ, ಅವ್ರನ್ನ ರಾಮಮಂದಿರ ಗರ್ಭಗುಡಿ ಒಳಗೆ ಬಿಡ್ಬಾರ್ದಿತ್ತು..: ವೀರಪ್ಪ ಮೊಯ್ಲಿ

ಚಿಕ್ಕಬಳ್ಳಾಪುರ : ಪ್ರಧಾನಿ ಮೋದಿ ಉಪವಾಸ ಮಾಡಿದ್ದರ ಬಗ್ಗೆ ಅನುಮಾನವಿದೆ. ಅವರನ್ನು ಗರ್ಭಗುಡಿ ಒಳಗೆ ಬಿಡಬಾರದಿತ್ತು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ನಾಯಕ ವೀರಪ್ಪ ಮೊಯ್ಲಿ ಹೇಳಿದ್ದಾರೆ. ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಉಪವಾಸ ಮಾಡಿದ್ದ ಬಗ್ಗೆಯೇ ಅನುಮಾನವಿದೆ. ಏಳನೀರು ಮಾತ್ರ ಕುಡಿದು ಉಪವಾಸ ಮಾಡಿದ್ದರೆ ಒಂದೆರೆಡು ದಿನದಲ್ಲಿ … Continued

ಅಯೋಧ್ಯೆ ರಾಮಲಲ್ಲಾ ವಿಗ್ರಹಕ್ಕೆ 11 ಕೋಟಿ ರೂಪಾಯಿ ಮೌಲ್ಯದ ಕಿರೀಟ ದಾನ ಮಾಡಿದ ಗುಜರಾತ್ ವಜ್ರದ ವ್ಯಾಪಾರಿ

ಅಯೋಧ್ಯೆ : ಗುಜರಾತಿನ ಸೂರತ್‌ನ ವಜ್ರದ ವ್ಯಾಪಾರಿಯೊಬ್ಬರು ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರದಲ್ಲಿ ಸ್ಥಾಪಿಸಲಾದ ರಾಮಲಲ್ಲಾನ ವಿಗ್ರಹಕ್ಕೆ 11 ಕೋಟಿ ಮೌಲ್ಯದ ಕಿರೀಟವನ್ನು ದಾನ ಮಾಡಿದ್ದಾರೆ. ಇದನ್ನು ಹೊಸದಾಗಿ ನಿರ್ಮಿಸಲಾಗಿರುವ ರಾಮಮಂದಿರದ ಭಗವಾನ್‌ ರಾಮಲಲ್ಲಾನಿಗಾಗಿ ವಿಶೇಷವಾಗಿ ತಯಾರಿಸಲಾಗಿದೆ. ಸೂರತ್‌ನ ಗ್ರೀನ್ ಲ್ಯಾಬ್ ಡೈಮಂಡ್ ಕಂಪನಿಯ ಮಾಲೀಕ ಮುಖೇಶ ಪಟೇಲ್ ಅವರು 6 ಕಿಲೋಗ್ರಾಂ ತೂಕದ ಕಿರೀಟವನ್ನು … Continued

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ : ವಿರಾಟ ಕೊಹ್ಲಿಯಂತೆ ಕಾಣುವ ತದ್ರೂಪಿ ಪ್ರತ್ಯಕ್ಷ, ಕಿಂಗ್‌ ಕೊಹ್ಲಿ ಎಂದೇ ಭಾವಿಸಿ ಸೆಲ್ಫಿಗೆ ಮುಗಿಬಿದ್ದ ಜನ..| ವೀಕ್ಷಿಸಿ

ಅಯೋಧ್ಯೆ : ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಸೋಮವಾರ ಅದ್ಧೂರಿಯಾಗಿ ನೆರವೇರಿದ್ದು, ಮಂಗಳವಾರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಾಲಿವುಡ್‌ ಸೇರಿ ಹಲವು ಕ್ಷೇತ್ರಗಳ ತಾರೆಯರು ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ ಇದೇವೇಳೆ ಭಾರತದ ಕ್ರಿಕೆಟ್‌ ತಂಡದ ಮಾಜಿ ನಾಯಕ ವಿರಾಟ ಕೊಹ್ಲಿಯಂತೆ ಕಾಣುವ ವ್ಯಕ್ತಿಯೊಬ್ಬರು ನೀಲಿ ಜರ್ಸಿಯಲ್ಲಿ  ಕಾಣಿಸಿಕೊಂಡಿದ್ದು, ಆತ … Continued

ವೀಡಿಯೊ…| ನಾವು ಅಯೋಧ್ಯೆಯಲ್ಲಿ ಏನು ನೋಡಿದ್ದೇವೆ…”: ರಾಮ ಮಂದಿರ ಕಾರ್ಯಕ್ರಮದ ಮಿಂಚು ನೋಟ ಹಂಚಿಕೊಂಡ ಪ್ರಧಾನಿ ಮೋದಿ

ನವದೆಹಲಿ : ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಸೋಮವಾರ ಉದ್ಘಾಟನೆ ಮಾಡಿದ ಕುರಿತಾದ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ ಮತ್ತು “ಮುಂದಿನ ವರ್ಷಗಳಲ್ಲಿ ಇದು ನಮ್ಮ ನೆನಪಿನಲ್ಲಿ ಉಳಿಯುತ್ತದೆ” ಎಂದು ಹೇಳಿದ್ದಾರೆ. ಮೂರು ನಿಮಿಷಗಳ ವೀಡಿಯೊದಲ್ಲಿ, ಮಡಚಿದ ಕೆಂಪು ದುಪಟ್ಟಾದಲ್ಲಿ ಬೆಳ್ಳಿಯ ಛತ್ರಿಯನ್ನು ಹಿಡಿದುಕೊಂಡು ಪ್ರಧಾನಿ ದೇವಾಲಯದ ಗರ್ಭಗುಡಿಗೆ ಕಾಲಿಡುತ್ತಿರುವುದನ್ನು ಕಾಣಬಹುದು. ನೂತನವಾಗಿ ನಿರ್ಮಿಸಲಾದ … Continued

1528ರಿಂದ 2024ರ ರಾಮಮಂದಿರ ಉದ್ಘಾಟನೆವರೆಗೆ : 500 ವರ್ಷಗಳ ಕಾಯುವಿಕೆ, ಶತಮಾನದ ಕಾನೂನು ಸಂಘರ್ಷಗಳು ; ರಾಮಜನ್ಮಭೂಮಿ ಹೋರಾಟ ಸಾಗಿಬಂದ ಹಾದಿ…

ನವದೆಹಲಿ : ಅಯೋಧ್ಯೆಯಲ್ಲಿ ಸುಮಾರು 400 ಕಂಬಗಳು, 44 ಬಾಗಿಲುಗಳುಳ್ಳ ನೂತನ ರಾಮಂದಿರದ ನೂತನ ರಾಮನ ವಿಗ್ರಹಕ್ಕೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪ್ರಾಣ ಪ್ರತಿಷ್ಠೆ ಮಾಡಿದರು. ನೂರಾರು ಧಾರ್ಮಿಕ ವ್ಯಕ್ತಿಗಳು, ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅಯೋಧ್ಯಾ ನಗರದಲ್ಲಿ ನಡೆದ ಸಮಾರಂಭಕ್ಕೆ ದೇಶವು ಸಾಕ್ಷಿಯಾಯಿತು. ಅಯೋಧ್ಯೆಯಲ್ಲಿ ಈ ನೂತನ ರಾಮಮಂದಿರ ನಿರ್ಮಾಣ ಆಗುವ … Continued

ಅಯೋಧ್ಯೆ ರಾಮಮಂದಿರದ ರಾಮಲಲ್ಲಾ ವಿಗ್ರಹದ ಮೇಲೆ ಯಾವೆಲ್ಲ ಆಭರಣಗಳಿವೆ…?

ಅಯೋಧ್ಯೆ: ರಾಮ ಮಂದಿರದಲ್ಲಿ ಭಗವಾನ್‌ ರಾಮ ಲಲ್ಲಾ ವಿಗ್ರಹ ‘ಪ್ರಾಣ ಪ್ರತಿಷ್ಠೆ’ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅದ್ಧೂರಿ ಸಮಾರಂಭದಲ್ಲಿ ನೆರವೇರಿಸಿದರು. ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ನಡೆದ ಐತಿಹಾಸಿಕ ಕಾರ್ಯಕ್ರಮದಲ್ಲಿ ಸಾವಿರಾರು ಸಂತರು, ಕಲಾವಿದರು, ಸೆಲೆಬ್ರಿಟಿಗಳು, ಉದ್ಯಮಿಗಳು, ರಾಜಕಾರಣಿಗಳು ಸೇರಿದಂತೆ ಏಳು ಸಾವಿರಕ್ಕೂ ಹೆಚ್ಚು ವಿಶೇಷ ಆಹ್ವಾನಿತರು ಭಾಗವಹಿಸಿದ್ದರು. ಜನವರಿ 23 ರಿಂದ ಭಕ್ತರಿಗಾಗಿ ದೇವಾಲಯವನ್ನು … Continued

ವೀಡಿಯೊ…| ರಾಮಮಂದಿರ ಉದ್ಘಾಟನೆ : ಅಯೋಧ್ಯೆಯಲ್ಲಿ ಪರಸ್ಪರ ಅಪ್ಪಿಕೊಂಡು ಆನಂದ ಭಾಷ್ಪ ಸುರಿಸಿದ ಸಾಧ್ವಿ ಋತಂಭರಾ-ಉಮಾಭಾರತಿ

ಅಯೋಧ್ಯೆ: ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಉಮಾಭಾರತಿ ಪಾಲ್ಗೊಂಡಿದ್ದಾರೆ. ಅವರು 32 ವರ್ಷ 46 ದಿನಗಳ ಹಿಂದೆ ಇದೇ ಪವಿತ್ರ ಪಟ್ಟಣದಲ್ಲಿದ್ದರು. ಅಂದು ಬಾಬರಿ ಮಸೀದಿಯನ್ನು ಹಿಂದೂ ಕಾರ್ಯಕರ್ತರು ಧ್ವಂಸಗೊಳಿಸಿದ್ದರು. ಇಂದು, ಅದೇ ಸ್ಥಳದಲ್ಲಿ ಭವ್ಯವಾದ ರಾಮಮಂದಿರವೊಂದು ನಿರ್ಮಾಣವಾಗಿದ್ದು, ಕೋಟ್ಯಂತರ ಹಿಂದೂಗಳು ಭಗವಾನ್ ರಾಮನ ಜನ್ಮಸ್ಥಳವೆಂದು ನಂಬುತ್ತಾರೆ. ರಾಂ ಜನ್ಮಭೂಮಿ ಆಂದೋಲನದ ಮುಂಚೂಣಿಯಲ್ಲಿದ್ದ … Continued

ವೀಡಿಯೊ…| ನಾನು ನಾಸ್ತಿಕನಲ್ಲ-ಆಸ್ತಿಕ ; ʼಜೈ ಶ್ರೀರಾಮʼ ಘೋಷಣೆ ಕೂಗಿದ ಸಿದ್ದರಾಮಯ್ಯ

ಬೆಂಗಳೂರು: ನಾನು ನಾಸ್ತಿಕನಲ್ಲ, ನಾನು ಆಸ್ತಿಕ. ನಮ್ಮೂರಲ್ಲೂ ರಾಮನ ಗುಡಿ ಕಟ್ಟಿಸಿದ್ದೇನೆ. ರಾಜ್ಯದ ಹಳ್ಳಿ ಹಳ್ಳಿಗಳಲ್ಲೂ ರಾಮನ ಗುಡಿಗಳಿವೆ. ಪ್ರತಿಯೊಬ್ಬರೂ ಅವರವರ ನಂಬಿಕೆಯಂತೆ ರಾಮನನ್ನು ಪೂಜಿಸುತ್ತಾರೆ, ಗುಡಿ ಕಟ್ಟುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಜೈ ಶ್ರೀರಾಮ ಎನ್ನುವುದು ಯಾರದ್ದೋ ಖಾಸಗಿ ಸ್ವತ್ತಲ್ಲ. ಅದು ಪ್ರತಿಯೊಬ್ಬ ಭಕ್ತರ ಸ್ವತ್ತು ಎಂದು ಹೇಳಿದ ಅವರು, ಜೈ ಶ್ರೀರಾಮ … Continued