ಆಘಾತಕಾರಿ…: ಪತ್ನಿಯನ್ನು ಕೊಂದು, ಶವದ ಜೊತೆ ಸೆಲ್ಫಿ ತೆಗೆದುಕೊಂಡು ವಾಟ್ಸಾಪ್ ಸ್ಟೇಟಸ್ ಪೋಸ್ಟ್ ಮಾಡಿದ ವ್ಯಕ್ತಿ

ಚೆನ್ನೈ: ತಮಿಳುನಾಡಿನಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳ ಬಗ್ಗೆ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಘಟನೆಯಲ್ಲಿ, ಕೋಯಮತ್ತೂರಿನ ಮಹಿಳಾ ವಸತಿ ನಿಲಯದೊಳಗೆ ತಿರುನೆಲ್ವೇಲಿ ಮೂಲದ ಮಹಿಳೆಯೊಬ್ಬರನ್ನು ಅವರಿಂದ ಬೇರೆಯಾಗಿರುವ ಪತಿ ಅತ್ಯಂತ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಘಟನೆ ಭಾನುವಾರ ನಡೆದಿದೆ ಎಂದು ವರದಿಯಾಗಿದೆ. ಕೋಯಮತ್ತೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀಪ್ರಿಯಾ ಅವರು ತಮ್ಮ ಪತಿ … Continued

ಬಂಡೀಪುರ | ಸೆಲ್ಫಿ ತೆಗೆಯುವ ವೇಳೆ ಕಾಡಾನೆ ದಾಳಿ, ಅದೃಷ್ಟವಶಾತ್‌ ಪ್ರಾಣ ಉಳಿದ ವ್ಯಕ್ತಿಗೆ ಅರಣ್ಯ ಇಲಾಖೆ 25 ಸಾವಿರ ರೂ. ದಂಡ…!

ಮೈಸೂರು: ಬಂಡೀಪುರ ಅರಣ್ಯದೊಳಗೆ ಆನೆಯ ಮುಂದೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಆನೆ ದಾಳಿಗೆ ಸಿಲುಕಿ ಅದೃಷ್ಟವಶಾತ್‌ ಪಾರಾಗಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆ ಆತನಿಗೆ 25 ಸಾವಿರ ರೂ. ದಂಡ ವಿಧಿಸಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಹಾದುಹೋಗಿರುವ ಕೆಕ್ಕನಹಳ್ಳ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಯ ಮುಂದೆ ಸೆಲ್ಫಿ ತೆಗೆದುಕೊಳ್ಳಲು ಹೋದಾಗ ಕಾಡಾನೆ ಬಸವರಾಜ … Continued

ಸೆಲ್ಫಿ ತೆಗೆಯಲು ಹೋಗಿ ಕಾಡಾನೆಯಿಂದ ಸಾವಿಗೀಡಾದ ಯುವಕ…!

ಮುಂಬೈ : ಗುರುವಾರ (ಅಕ್ಟೋಬರ್ 24) ನಡೆದ ಅಹಿತಕರ ಘಟನೆಯಲ್ಲಿ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಮುಟ್ನೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ 24 ವರ್ಷದ ವ್ಯಕ್ತಿಯೊಬ್ಬರು ಆನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಡಾನೆ ದಾಳಿಯಿಂದ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ವ್ಯಕ್ತಿ ಸಮೀಪ ಹೋಗಿ ಆನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಆನೆ ಆತನ ಮೇಲೆ ದಾಳಿ … Continued

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ತಂದೆ- ಮಗಳು ಸಾವು

ಕೋಲಾರ : ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಹೋಬಳಿಯ ಮಜರಗೊಲ್ಲಹಳ್ಳಿಗೆ ಮದುವೆಗೆಂದು ಬಂದಿದ್ದ ತಂದೆ-ಮಗಳು, ಭಾನುವಾರ ಸಂಜೆ ಕಾಮಸಮುದ್ರದ ವೃಷಭಾವತಿ ಕೆರೆ ದಡದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಾವಿಗೀಡಾದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಸಯ್ಯದ್‌ ಅಯೂಬ್‌ (35) ಹಾಗೂ ಫಾತಿಮಾ (10) ಎಂದು ಗುರುತಿಸಲಾಗಿದೆ.ಮಜರಗೊಲ್ಲಹಳ್ಳಿಯ ಇಮ್ತಿಯಾಜ್‌ ಎಂಬವರ ಮನೆಯಲ್ಲಿ ನಡೆದಿದ್ದ ಮದುವೆ ಸಮಾರಂಭಕ್ಕೆ … Continued

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ : ವಿರಾಟ ಕೊಹ್ಲಿಯಂತೆ ಕಾಣುವ ತದ್ರೂಪಿ ಪ್ರತ್ಯಕ್ಷ, ಕಿಂಗ್‌ ಕೊಹ್ಲಿ ಎಂದೇ ಭಾವಿಸಿ ಸೆಲ್ಫಿಗೆ ಮುಗಿಬಿದ್ದ ಜನ..| ವೀಕ್ಷಿಸಿ

ಅಯೋಧ್ಯೆ : ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಸೋಮವಾರ ಅದ್ಧೂರಿಯಾಗಿ ನೆರವೇರಿದ್ದು, ಮಂಗಳವಾರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಾಲಿವುಡ್‌ ಸೇರಿ ಹಲವು ಕ್ಷೇತ್ರಗಳ ತಾರೆಯರು ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ ಇದೇವೇಳೆ ಭಾರತದ ಕ್ರಿಕೆಟ್‌ ತಂಡದ ಮಾಜಿ ನಾಯಕ ವಿರಾಟ ಕೊಹ್ಲಿಯಂತೆ ಕಾಣುವ ವ್ಯಕ್ತಿಯೊಬ್ಬರು ನೀಲಿ ಜರ್ಸಿಯಲ್ಲಿ  ಕಾಣಿಸಿಕೊಂಡಿದ್ದು, ಆತ … Continued

ಸೆಲ್ಫಿ ತೆಗೆದುಕೊಳ್ಳಲು ಹೋಗಿ ನೀರು ಪಾಲಾದ ಯುವಕ

ಹುಬ್ಬಳ್ಳಿ: ನೀರಸಾಗರ ಜಲಾಶಯದಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಯುವಕನೊಬ್ಬ ಜಾರಿ ಬಿದ್ದು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ನಡೆದಿದೆ. ಮೃತ ಯುವಕನನ್ನು ಕಿರಣ್ ರಜಪೂತ(22) ಎಂದು ಗುರುತಿಸಲಾಗಿದೆ. ಕಲಘಟಗಿ ತಾಲೂಕಿನ ಬೇಗೂರು ಗ್ರಾಮದ ನಿವಾಸಿ ಕಿರಣ್, ಭಾನುವಾರ ತನ್ನ ಗೆಳೆಯರೊಡನೆ ಪ್ರವಾಸಕ್ಕೆಂದು ಹೋಗಿದ್ದ. ಜಲಾಶಯದ ದಡದಲ್ಲಿ ನಿಂತು ಸೆಲ್ಫಿ … Continued

ಸೆಲ್ಫಿ ತೆಗೆದುಕೊಳ್ಳುವ ವೇಳೆ ಕಾಲು ಜಾರಿ ಜಲಪಾತಕ್ಕೆ ಬಿದ್ದು ಸಾವು

ಚಾಮರಾಜನಗರ: ಹನೂರು ತಾಲೂಕಿನಲ್ಲಿರುವ ಹೊಗೇನಕಲ್ ಜಲಪಾತ ವೀಕ್ಷಣೆಗೆ ಹೋಗಿದ್ದ ವಿದ್ಯಾರ್ಥಿಯೊಬ್ಬ ಸೆಲ್ಫಿ ತೆಗೆದುಕೊಳ್ಳುವ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ. ಮೈಸೂರು ಮೂಲದ ನರ್ಸಿಂಗ್ ವಿದ್ಯಾರ್ಥಿ ಉಮಾಶಂಕರ (19) ಮೃತ ಎಂದು ಗುರುತಿಸಲಾಗಿದೆ. ಸ್ನೇಹಿತರೊಂದಿಗೆ ಗುರುವಾರ ಹೊಗೇನಕಲ್ ಜಲಪಾತಕ್ಕೆ ತೆರಳಿದ್ದ ವೇಳೆ ನೀರು ಧುಮ್ಮಿಕ್ಕುವ ಸ್ಥಳದ ಅಂಚಿನಲ್ಲಿ ನಿಂತುಕೊಂಡು ಸೆಲ್ಳಿ ತೆಗೆದುಕೊಳ್ಳುವಾಗ ಘಟನೆ ನಡೆದಿದೆ ಎಂದು … Continued