ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ತಂದೆ- ಮಗಳು ಸಾವು

ಕೋಲಾರ : ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಹೋಬಳಿಯ ಮಜರಗೊಲ್ಲಹಳ್ಳಿಗೆ ಮದುವೆಗೆಂದು ಬಂದಿದ್ದ ತಂದೆ-ಮಗಳು, ಭಾನುವಾರ ಸಂಜೆ ಕಾಮಸಮುದ್ರದ ವೃಷಭಾವತಿ ಕೆರೆ ದಡದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಾವಿಗೀಡಾದ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಮೃತರನ್ನು
ಸಯ್ಯದ್‌ ಅಯೂಬ್‌ (35) ಹಾಗೂ ಫಾತಿಮಾ (10) ಎಂದು ಗುರುತಿಸಲಾಗಿದೆ.ಮಜರಗೊಲ್ಲಹಳ್ಳಿಯ ಇಮ್ತಿಯಾಜ್‌ ಎಂಬವರ ಮನೆಯಲ್ಲಿ ನಡೆದಿದ್ದ ಮದುವೆ ಸಮಾರಂಭಕ್ಕೆ ಬೆಂಗಳೂರಿನಿಂದ ಸಯ್ಯದ್‌ ಅಯೂಬ್‌ ಅವರು ಪತ್ನಿ ಹಾಗೂ ಮಗಳ ಜೊತೆ ಬಂದಿದ್ದರು. ಸಂಜೆ ಅವರು ಕೆರೆ ನೋಡಲು ಹೋದಾಗ ಫಾತಿಮಾ ಕೆರೆ ದಡದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ಬಿದ್ದಿದ್ದು, ಆಗ ಮಗಳನ್ನು ರಕ್ಷಿಸಲು ತಂದೆ ಸಯ್ಯದ್‌ ಅವರು ಕೆರೆಗೆ ಧುಮುಕಿದ್ದಾರೆ. ಈಜು ಬಾರದ ಕಾರಣ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಅಗ್ನಿಶಾಮಕದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಹೊರ ತೆಗೆದಿದ್ದಾರೆ.

ಪ್ರಮುಖ ಸುದ್ದಿ :-   ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ : ಸ್ವತಂತ್ರ ಸಂಸ್ಥೆಯಿಂದ ತನಿಖೆಗೆ ಕೋರಿದ್ದ ಅರ್ಜಿ ತುರ್ತು ವಿಚಾರಣೆಗೆ ಹೈಕೋರ್ಟ್‌ ನಕಾರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement