ಕಾರು ಚಲಾಯಿಸಲಿಕ್ಕೂ ಹೆಲ್ಮೆಟ್ ಕಡ್ಡಾಯವೇ? ‘ಹೆಲ್ಮೆಟ್ ಹಾಕಿಲ್ಲ’ವೆಂದು ಕಾರು ಮಾಲೀಕನಿಗೆ ₹500 ದಂಡ….!

ಬೆಳಗಾವಿ : ಅಸಾಮಾನ್ಯ ವಿದ್ಯಮಾನವೊಂದರಲ್ಲಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿಗೆ ‘ಹೆಲ್ಮೆಟ್ ಧರಿಸಿಲ್ಲ’ ಎಂಬ ಕಾರಣ ನೀಡಿ ₹500 ದಂಡದ ಚಲನ್ (Challan) ನೀಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ ಎಂದು ವರದಿಯಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಥಣಿ ನಿವಾಸಿ ಸುಭಾಷ ಬೋಜಾನೆ ಎಮಬವರಿಗೆ ಈ ದಂಡದ ನೋಟಿಸ್ ಬಂದಿದ್ದು, … Continued

ರಷ್ಯಾ ತೈಲ ಖರೀದಿ ನಿರ್ಬಂಧ ಮಸೂದೆಗೆ ಅಮೆರಿಕ ಸೆನೆಟ್ ಅಸ್ತು ; ಭಾರತ ಸೇರಿ 5 ದೇಶಗಳಿಗೆ ಶೇ.100 ಸುಂಕ ಹೇರಿಕೆ ಭೀತಿ

ನವದೆಹಲಿ: ರಷ್ಯಾದಿಂದ ಅತಿ ಹೆಚ್ಚು ತೈಲ ಅಥವಾ ನೈಸರ್ಗಿಕ ಅನಿಲ ಖರೀದಿಸುವ ವಿಶ್ವದ ಅಗ್ರ ಐದು ದೇಶಗಳ ಮೇಲೆ ಗರಿಷ್ಠ ಶೇ.100ರಷ್ಟು ಸುಂಕ ವಿಧಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಧಿಕಾರ ನೀಡುವ ಮಸೂದೆಗೆ ಅಮೆರಿಕ ಸೆನೆಟ್ ಅನುಮೋದನೆ ನೀಡಿದೆ. ಈ ಪಟ್ಟಿಯಲ್ಲಿ ಭಾರತ ಮತ್ತು ಚೀನಾ ಕೂಡ ಸೇರಿವೆ. ಉಕ್ರೇನ್ ಪರ ಬಲವಾಗಿ … Continued

ದೇಶದ ಜನರ ಖಾಸಗಿತನದ ಹಕ್ಕಿನ ಜೊತೆ ಆಟವಾಡಲು ಸಾಧ್ಯವಿಲ್ಲ: ಗೌಪ್ಯತಾ ನೀತಿ ಕುರಿತು ವಾಟ್ಸಾಪ್ ಗೆ ಸುಪ್ರೀಂಕೋರ್ಟ್ ತರಾಟೆ

ನವದೆಹಲಿ: ಮಂಗಳವಾರ ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್, ವಾಟ್ಸಾಪ್ ಮತ್ತು ಅದರ ಮಾಲೀಕತ್ವದ ಮೆಟಾ (Meta) ಸಂಸ್ಥೆಯ ‘ಒಪ್ಪಿಕೊಳ್ಳಿ ಅಥವಾ ಬಿಟ್ಟುಬಿಡಿ’ (Take it or leave it) ಎಂಬ ವಿವಾದಾತ್ಮಕ ಗೌಪ್ಯತಾ ನೀತಿಯನ್ನು ತೀವ್ರವಾಗಿ ಟೀಕಿಸಿದೆ. ಈ ನೀತಿಯು “ಖಾಸಗಿ ಮಾಹಿತಿಯ ಕಳ್ಳತನಕ್ಕೆ” ದಾರಿ ಮಾಡಿಕೊಡುವಂತಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಭಾರತದ ಮುಖ್ಯ ನ್ಯಾಯಮೂರ್ತಿ … Continued

ಇಂಡಿಗೋ ಸಂಸ್ಥೆಗೆ 22.20 ಕೋಟಿ ರೂ. ದಂಡ ವಿಧಿಸಿದ ಡಿಜಿಸಿಎ

ನವದೆಹಲಿ: ವಿಮಾನಗಳ ಹಾರಾಟದಲ್ಲಿ ವ್ಯಾಪಕ ವಿಳಂಬ ಮತ್ತು ರದ್ದತಿಯಿಂದ ಪ್ರಯಾಣಿಕರಿಗೆ ಉಂಟಾದ ತೊಂದರೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ವಿಮಾನಯಾನ ನಿಯಂತ್ರಕ ಸಂಸ್ಥೆ (DGCA), ಇಂಡಿಗೋ (IndiGo) ಏರ್‌ಲೈನ್ಸ್‌ಗೆ 22.20 ಕೋಟಿ ರೂಪಾಯಿ ಭಾರಿ ದಂಡ ವಿಧಿಸಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ನಡೆಸಿದ ಸುದೀರ್ಘ ತನಿಖೆಯಲ್ಲಿ ಇಂಡಿಗೋ ಸಂಸ್ಥೆಯ ಹಲವು ಲೋಪದೋಷಗಳು ಬೆಳಕಿಗೆ ಬಂದಿವೆ. ಸಿಬ್ಬಂದಿ … Continued

ಬಂಡೀಪುರ | ಸೆಲ್ಫಿ ತೆಗೆಯುವ ವೇಳೆ ಕಾಡಾನೆ ದಾಳಿ, ಅದೃಷ್ಟವಶಾತ್‌ ಪ್ರಾಣ ಉಳಿದ ವ್ಯಕ್ತಿಗೆ ಅರಣ್ಯ ಇಲಾಖೆ 25 ಸಾವಿರ ರೂ. ದಂಡ…!

ಮೈಸೂರು: ಬಂಡೀಪುರ ಅರಣ್ಯದೊಳಗೆ ಆನೆಯ ಮುಂದೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಆನೆ ದಾಳಿಗೆ ಸಿಲುಕಿ ಅದೃಷ್ಟವಶಾತ್‌ ಪಾರಾಗಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆ ಆತನಿಗೆ 25 ಸಾವಿರ ರೂ. ದಂಡ ವಿಧಿಸಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಹಾದುಹೋಗಿರುವ ಕೆಕ್ಕನಹಳ್ಳ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಯ ಮುಂದೆ ಸೆಲ್ಫಿ ತೆಗೆದುಕೊಳ್ಳಲು ಹೋದಾಗ ಕಾಡಾನೆ ಬಸವರಾಜ … Continued

ಭಾರತದಿಂದ ಆಮದಿಗೆ ಸುಂಕ-ದಂಡ ; ಪಾಕಿಸ್ತಾನದ ಜೊತೆ ತೈಲ ಒಪ್ಪಂದಕ್ಕೆ ಸಹಿ ಹಾಕಿದ ಡೊನಾಲ್ಡ್ ಟ್ರಂಪ್ ; ಇದರ ಅರ್ಥವೇನು?

ವಾಷಿಂಗ್ಟನ್‌ : ತನ್ನ “ಸ್ನೇಹಿತ” ಭಾರತದ ಮೇಲೆ ಶೇಕಡಾ 25 ರಷ್ಟು ‘ಪ್ರತಿ ಸುಂಕ’ ಮತ್ತು ರಷ್ಯಾದಿಂದ ಶಸ್ತ್ರಾಸ್ತ್ರಗಳು ಮತ್ತು ತೈಲವನ್ನು ಖರೀದಿಸಿದ್ದಕ್ಕಾಗಿ ದಂಡವನ್ನು ಘೋಷಿಸಿದ ನಂತರ, ಡೊನಾಲ್ಡ್ ಟ್ರಂಪ್ ಗುರುವಾರ ಅಮೆರಿಕವು ಪಾಕಿಸ್ತಾನದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ ಎಂದು ಪ್ರಕಟಿಸಿದ್ದಾರೆ. ಇದರಲ್ಲಿ “ಬೃಹತ್” ತೈಲ ನಿಕ್ಷೇಪಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳೂ ಸೇರಿವೆ. ಉಕ್ರೇನ್ ವಿರುದ್ಧ ಯುದ್ಧ … Continued

ಗೂಗಲ್‌ ಗೆ $20 ಡಿಸಿಲಿಯನ್ ದಂಡ ವಿಧಿಸಿದ ರಷ್ಯಾ ; ಈ ದಂಡದ ಮೊತ್ತ ಹೇಳುವುದೇ ಕಷ್ಟ ; ಯಾಕೆಂದರೆ 2ರ ಮುಂದೆ 34 ಸೊನ್ನೆಗಳು ಬರುತ್ತವೆ…!!

ನವದೆಹಲಿ : ರಷ್ಯಾದ ನ್ಯಾಯಾಲಯವೊಂದು ಟೆಕ್‌ ದೈತ್ಯ ಗೂಗಲ್‌ ಕಂಪನಿಗೆ ದಿಗ್ಭ್ರಮೆಗೊಳಿಸುವ $20 ಡೆಸಿಲಿಯನ್ ದಂಡ ವಿಧಿಸಿದೆ. ಇದು ಈವರೆಗೆ ವಿಧಿಸಲಾದ ಅತಿದೊಡ್ಡ ಆರ್ಥಿಕ ದಂಡ ಎಂದು ಪರಿಗಣಿಸಲಾಗಿದೆ. 20 ಡೆಸಿಲಿಯನ್ ಅಂದರೆ 2 ನಂತರ 34 ಸೊನ್ನೆಗಳು ಬರುತ್ತವೆ. ರಷ್ಯಾದ ಉಕ್ರೇನ್‌ನ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ರಷ್ಯಾದ ಸರ್ಕಾರಿ ಮಾಧ್ಯಮ ಚಾನೆಲ್‌ಗಳನ್ನು ನಿರ್ಬಂಧಿಸುವ ನಿರ್ಧಾರ ತೆಗೆದುಕೊಂಡ … Continued

ವಾಹನಗಳಿಗೆ ಕಣ್ಣುಕುಕ್ಕುವ ಎಲ್‌ಇಡಿ ಲೈಟ್‌ ಹಾಕಿಸಿದ್ದೀರಾ : ಜುಲೈ 1ರಿಂದ ಬೀಳಲಿದೆ ದಂಡ…

ಬೆಂಗಳೂರು : ಕೇಂದ್ರ ಮೋಟಾರು ಕಾಯಿದೆಯ ಮಾನದಂಡದಂತೆ ವಾಹನಗಳಿಗೆ ಹೆಡ್‌ಲೈಟ್‌ ಅಳವಡಿಸಬೇಕು. ಈ ಕಾಯಿದೆ ಉಲ್ಲಂಘಿಸಿ ಹೆಚ್ಚು ಪ್ರಕಾಶಮಾನವಾದ ಅಥವಾ ಕಣ್ಣಿಗೆ ಕುಕ್ಕುವಂತಹ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಅಳವಡಿಸುವ ಹಾಗಿಲ್ಲ. ಈ ಬಗ್ಗೆ ಜುಲೈ 1ರಿಂದ ರಾಜ್ಯ ಪೊಲೀಸ್‌ ವಿಶೇಷ ಅಭಿಯಾನ ಕೈಗೊಳ್ಳಲಿದೆ. ವಾಹನಗಳಿಗೆ ಕಣ್ಣಿಗೆ ಕುಕ್ಕುವಂತಹ ಎಲ್ಇಡಿ ದೀಪ ಅಳವಡಿಸಿದ್ದರೆ ಅಂತಹ ವಾಹನ ಸವಾರರ ವಿರುದ್ಧ … Continued

ಹೊನ್ನಾವರ : ಹೆಲ್ಮೆಟ್‌ ಧರಿಸಿಲ್ಲವೆಂದು ಲಾರಿ ಚಾಲಕನಿಗೆ ದಂಡ ಹಾಕಿದ ಪೊಲೀಸರು…!

ಹೊನ್ನಾವರ : ಟಿಪ್ಪರ್ ಲಾರಿ ಚಾಲಕರೊಬ್ಬರಿಗೆ ಹೆಲ್ಮೆಟ್​ ಧರಿಸಿಲ್ಲವೆಂದು ಹೊನ್ನಾವರ ಸಂಚಾರ ಠಾಣೆ ಪೊಲೀಸರು ದಂಡ ಹಾಕಿರುವ ವಿಲಕ್ಷಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಮರಳು ತುಂಬಿದ ಟಿಪ್ಪರ್ ಲಾರಿ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಹೊನ್ನಾವರ ಸಂಚಾರಿ ಪೊಲೀಸರು, ಅಳ್ಳಂಕಿ ಬಳಿ ತಡೆದು ಲಾರಿ ಚಾಲಕನಿಗೆ 500 ರೂಪಾಯಿ ದಂಡ … Continued

ವೀಡಿಯೊ..| ಹೋಳಿಯ ವೇಳೆ ಚಲಿಸುತ್ತಿರುವ ಸ್ಕೂಟರಿನಲ್ಲಿ ಮಹಿಳೆ ಟೈಟಾನಿಕ್‌ ಸ್ಟಂಟ್ ಮಾಡುವಾಗ ಯಡವಟ್ಟು : ಪೊಲೀಸರಿಂದ 33,000 ರೂ ದಂಡ..!

ವ್ಯಾಪಕ ಗಮನ ಸೆಳೆದಿರುವ ಘಟನೆಯೊಂದರಲ್ಲಿ, ಹೋಳಿ ಆಚರಣೆಯ ಮಧ್ಯೆ ಚಲಿಸುವ ಸ್ಕೂಟರ್‌ನಲ್ಲಿ ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸಲು ಯಡವಟ್ಟು ಮಾಡಿಕೊಂಡ ನಂತರ ಇಬ್ಬರು ವ್ಯಕ್ತಿಗಳಿಗೆ ನೋಯ್ಡಾ ಪೊಲೀಸರು ಸೋಮವಾರ 33,000 ರೂಪಾಯಿಗಳ ಭಾರಿ ದಂಡವನ್ನು ವಿಧಿಸಿದ್ದಾರೆ…! ಅಜಾಗರೂಕ ವರ್ತನೆಯ ವೀಡಿಯೊಗಳು ವೈರಲ್ ಆಗಿದ್ದು, ನೆಟಿಜನ್‌ಗಳು ಮತ್ತು ಅಧಿಕಾರಿಗಳಿಂದ ಕೋಪ ಮತ್ತು ಕಳವಳದ ನಂತರ ಈ ದಂಡದ ಕ್ರಮ … Continued