ವಿಡಿಯೋ | ಅಹಮದಾಬಾದ್ : ವಿಮಾನದ ಸ್ಪೀಕರ್ ಬಾಕ್ಸ್‌ನಲ್ಲಿ ಬಚ್ಚಿಟ್ಟಿದ್ದ ₹4.26 ಕೋಟಿ ಮೌಲ್ಯದ ಚಿನ್ನದ ಬಿಸ್ಕತ್‌ ಪತ್ತೆ

ಅಹಮದಾಬಾದ್: ಇಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ದುಬೈನಿಂದ ಬಂದ ಇಂಡಿಗೋ ವಿಮಾನದಲ್ಲಿ ಸ್ಪೀಕರ್ ಬಾಕ್ಸ್‌ನಲ್ಲಿ ಅಡಗಿಸಿಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 4.26 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ದುಬೈನಿಂದ ಆಗಮಿಸಿದ ಇಂಡಿಗೋ ಸಂಸ್ಥೆಯ ‘6E-1478’ ವಿಮಾನದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮತ್ತು ವಿಮಾನದ … Continued

ವಿಡಿಯೋ | ಕಗ್ಗತ್ತಲಿನಲ್ಲಿ ಭಾರತ-ಪಾಕ್‌ ಗಡಿಯಲ್ಲಿ ʼಹೊಳೆಯುವ ಬೆಳಕಿನ ರೇಖೆʼ : ವಿಮಾನದಿಂದ ಪೈಲಟ್ ಸೆರೆಹಿಡಿದ ಅಪರೂಪದ ದೃಶ್ಯ !

ನವದೆಹಲಿ : ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿಯು ಆಕಾಶದಿಂದ ನೋಡಿದಾಗಲೂ ಎಷ್ಟು ಸ್ಪಷ್ಟವಾಗಿ ಮತ್ತು ಆಕರ್ಷಕವಾಗಿ ಕಾಣುತ್ತದೆ ಎಂಬುದನ್ನು ತೋರಿಸುವ ಅದ್ಭುತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಇಂಡಿಗೊ (IndiGo) ವಿಮಾನದ ಪೈಲಟ್ ಕ್ಯಾಪ್ಟನ್ ಪ್ರದೀಪ ಕೃಷ್ಣನ್ ಅವರು ಕಾಕ್‌ಪಿಟ್‌ನಿಂದ ರಾತ್ರಿಯ ಸಮಯದಲ್ಲಿ ಚಿತ್ರೀಕರಿಸಿದ ಈ ಅಪರೂಪದ ದೃಶ್ಯ ನೆಟ್ಟಿಗರನ್ನು … Continued

ಇಂಡಿಗೋ ಸಂಸ್ಥೆಗೆ 22.20 ಕೋಟಿ ರೂ. ದಂಡ ವಿಧಿಸಿದ ಡಿಜಿಸಿಎ

ನವದೆಹಲಿ: ವಿಮಾನಗಳ ಹಾರಾಟದಲ್ಲಿ ವ್ಯಾಪಕ ವಿಳಂಬ ಮತ್ತು ರದ್ದತಿಯಿಂದ ಪ್ರಯಾಣಿಕರಿಗೆ ಉಂಟಾದ ತೊಂದರೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ವಿಮಾನಯಾನ ನಿಯಂತ್ರಕ ಸಂಸ್ಥೆ (DGCA), ಇಂಡಿಗೋ (IndiGo) ಏರ್‌ಲೈನ್ಸ್‌ಗೆ 22.20 ಕೋಟಿ ರೂಪಾಯಿ ಭಾರಿ ದಂಡ ವಿಧಿಸಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ನಡೆಸಿದ ಸುದೀರ್ಘ ತನಿಖೆಯಲ್ಲಿ ಇಂಡಿಗೋ ಸಂಸ್ಥೆಯ ಹಲವು ಲೋಪದೋಷಗಳು ಬೆಳಕಿಗೆ ಬಂದಿವೆ. ಸಿಬ್ಬಂದಿ … Continued

ಇಂಡಿಗೋ ವಿಮಾನ ಬಿಕ್ಕಟ್ಟು : ಟಿಕೆಟ್‌ಗಳ ಹಣ 610 ಕೋಟಿ ರೂ. ಗ್ರಾಹಕರಿಗೆ ಮರುಪಾವತಿ, ವಿಮಾನಗಳ ಸಂಚಾರದಲ್ಲಿ ಸುಧಾರಣೆ

ನವದೆಹಲಿ: ಇಂಡಿಗೋ (IndiGo) ವಿಮಾನಯಾನ ಸಂಸ್ಥೆಯ ಬಿಕ್ಕಟ್ಟು ಶಮನಗೊಳ್ಳುವ ಲಕ್ಷಣಗಳು ಕಾಣಿಸುತ್ತಿದ್ದಂತೆ ವಿಮಾನಗಳ ವ್ಯಾಪಕ ರದ್ದತಿ ಮತ್ತು ವಿಳಂಬದಿಂದ ತೊಂದರೆಗೊಳಗಾದ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಯು ಈವರೆಗೆ ₹ 610 ಕೋಟಿ ಮರುಪಾವತಿ ಮಾಡಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯವು ಭಾನುವಾರ ತಿಳಿಸಿದೆ. ಶನಿವಾರದ ಹೊತ್ತಿಗೆ, ದೇಶಾದ್ಯಂತ ಸುಮಾರು 3,000 ಸಾಮಾನು ಸರಂಜಾಮುಗಳನ್ನು ಸಹ ಪ್ರಯಾಣಿಕರಿಗೆ ತಲುಪಿಸಲಾಗಿದೆ. … Continued

ಇಂಡಿಗೋ ವಿಮಾನಗಳ ಪ್ರಯಾಣಿಕರ ಟಿಕೆಟ್‌ ಹಣ ತಕ್ಷಣವೇ ಮರುಪಾವತಿಗೆ ಆದೇಶ

ನವದೆಹಲಿ : ಇಂಡಿಗೋ (IndiGo) ವಿಮಾನಯಾನ ಸಂಸ್ಥೆಗೆ ವಿಮಾನ ಹಾರಾಟದ ಬಿಕ್ಕಟ್ಟಿನಿಂದಾಗಿ ರದ್ದಾದ ಮತ್ತು ಅಸ್ತವ್ಯಸ್ತಗೊಂಡ ವಿಮಾನಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಹಣವನ್ನು ತಕ್ಷಣವೇ ಮರುಪಾವತಿಸುವಂತೆ ನಾಗರಿಕ ವಿಮಾನಯಾನ ಸಚಿವಾಲಯವು ನಿರ್ದೇಶನ ನೀಡಿದೆ. ಶನಿವಾರ ಹೊರಡಿಸಲಾದ ಈ ನಿರ್ದೇಶನದ ಪ್ರಕಾರ, ವಿಮಾನಯಾನ ಸಂಸ್ಥೆಯು ಡಿಸೆಂಬರ್ 7, 2025 ರ ಭಾನುವಾರ ಸಂಜೆ 8:00 … Continued

ಇಂಡಿಗೋ ಬಿಕ್ಕಟ್ಟು : ಟಿಕೆಟ್ ದರ ನಿಯಂತ್ರಣಕ್ಕೆ ದೇಶಾದ್ಯಂತ ವಿಮಾನ ದರ ಮಿತಿ ಜಾರಿ ಮಾಡಿದ ಸರ್ಕಾರ

ನವದೆಹಲಿ:ಸದ್ಯ ದೇಶದಲ್ಲಿ ಉಂಟಾಗಿರುವ ಇಂಡಿಗೋ (IndiGo) ವಿಮಾನಗಳ ಸೇವೆಯ ಬಿಕ್ಕಟ್ಟಿನ ವಿಮಾನ ಹಿನ್ನೆಲೆಯಲ್ಲಿ ಟಿಕೆಟ್ ದರಗಳು ಗಗನಕ್ಕೇರಿರುವುದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಶನಿವಾರ ಅತ್ಯಂತ ಕಠಿಣ ನಿರ್ದೇಶನವನ್ನು ಹೊರಡಿಸಿದೆ. “ಅವಕಾಶವಾದಿ ದರ ನಿಗದಿ”ಯಿಂದ ಪ್ರಯಾಣಿಕರನ್ನು ರಕ್ಷಿಸುವ ಉದ್ದೇಶದಿಂದ, ಎಲ್ಲಾ ಏರ್‌ಲೈನ್ಸ್‌ಗಳು ನಿಗದಿಪಡಿಸಲಾದ ಗರಿಷ್ಠ ದರ ಮಿತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯವು ಆದೇಶಿಸಿದೆ. … Continued

ಇಂಡಿಗೋ ಬಿಕ್ಕಟ್ಟು : ಉನ್ನತ ಮಟ್ಟದ ತನಿಖೆಗೆ ಕೇಂದ್ರ ಸರ್ಕಾರದ ಆದೇಶ

ನವದೆಹಲಿ: ಇಂಡಿಗೋ ವಿಮಾನಗಳ ರದ್ದತಿ ಮತ್ತು ವಿಳಂಬದಿಂದ ತೀವ್ರ ತೊಂದರೆಗೊಳಗಾದ ಪ್ರಯಾಣಿಕರಿಗೆ ಸಂತಸದ ಸುದ್ದಿ ಎಂಬಂತೆ, ವಿಮಾನಗಳ ವೇಳಾಪಟ್ಟಿ ಶನಿವಾರದೊಳಗೆ ಸ್ಥಿರಗೊಳ್ಳುವ ನಿರೀಕ್ಷೆಯಿದೆ ಮತ್ತು ಸೋಮವಾರದೊಳಗೆ ಅಂದರೆ ಮೂರು ದಿನಗಳಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಸತತ ಎರಡನೇ ದಿನವೂ ಇಂಡಿಗೋದ ವಿಮಾನಗಳ ರದ್ದತಿ 500 ಗಡಿಯನ್ನು … Continued

ವೀಡಿಯೊ..| ಇಂಡಿಗೋ ವಿಮಾನ ರದ್ದು : ತನ್ನದೇ ಮದುವೆ ಆರತಕ್ಷತೆಗೆ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಹಾಜರಾದ ಹುಬ್ಬಳ್ಳಿ ಯುವತಿ

ಬೆಂಗಳೂರು: ದೇಶಾದ್ಯಂತ ಇಂಡಿಗೋ ವಿಮಾನಗಳು ವ್ಯಾಪಕವಾಗಿ ರದ್ದುಗೊಂಡ ಪರಿಣಾಮ, ನವದಂಪತಿ ಹುಬ್ಬಳ್ಳಿಯಲ್ಲಿ ನಡೆಯಬೇಕಿದ್ದ ತಮ್ಮ ಆರತಕ್ಷತೆ ಸಮಾರಂಭಕ್ಕೆ ಖುದ್ದಾಗಿ ಹಾಜರಾಗಲು ಸಾಧ್ಯವಾಗದೆ, ವರ್ಚುಯಲ್ (ಆನ್‌ಲೈನ್) ಮೂಲಕ ಭಾಗವಹಿಸಿದ ಅನಿರೀಕ್ಷಿತ ಘಟನೆ ನಡೆದಿದೆ. ವರದಿಗಳ ಪ್ರಕಾರ, ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ ಹುಬ್ಬಳ್ಳಿಯ ಮೇಧಾ ಮತ್ತು ಒಡಿಶಾದ ಭುವನೇಶ್ವರದ ಸಂಗಮ ದಾಸ್ ಅವರ ಆರತಕ್ಷತೆ ಸಮಾರಂಭವನ್ನು ಹುಬ್ಬಳ್ಳಿಯ … Continued

ದೇಶಾದ್ಯಂತ ಒಂದೇ ದಿನ 200ಕ್ಕೂ ಹೆಚ್ಚು ಇಂಡಿಗೋ ವಿಮಾನ ರದ್ದು ; ಪ್ರಯಾಣಿಕರ ಪರದಾಟ

ನವದೆಹಲಿ: ಭಾರತದ ವಿಮಾನ ನಿಲ್ದಾಣಗಳಲ್ಲಿ ಬುಧವಾರ ಇಂಡಿಗೋ ವಿಮಾನ ಸಂಚಾರದಲ್ಲಿ ಭಾರೀ ಅಸ್ತವ್ಯಸ್ತತೆ ಉಂಟಾಗಿದ್ದು, ಸುಮಾರು 200ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ ಎಂದು ವರದಿಯಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ವಿಮಾನಯಾನ ಸಂಸ್ಥೆಯ ಅತ್ಯಂತ ಗಂಭೀರ ಕಾರ್ಯಾಚರಣೆಯ ವೈಫಲ್ಯಗಳಲ್ಲಿ ಒಂದಾಗಿದೆ. ನೂರಾರು ಪ್ರಯಾಣಿಕರು ಸಿಲುಕಿಕೊಂಡಿದ್ದು, ಇಂಡಿಗೋ ಈ ಅನನುಕೂಲತೆಗಾಗಿ ಕ್ಷಮೆಯಾಚಿಸಿದೆ. ನ್ಯೂಸ್18 ವರದಿಯ ಪ್ರಕಾರ, ಬುಧವಾರ ಮಧ್ಯಾಹ್ನದವರೆಗೆ … Continued

ವೀಡಿಯೊ..| ಬಿರುಗಾಳಿ-ಆಲಿಕಲ್ಲು ಮಳೆಯ ಹೊಡೆತಕ್ಕೆ ಇಂಡಿಗೋ ವಿಮಾನಕ್ಕೆ ಹಾನಿ ; ಕಿರುಚಿಕೊಂಡ ಪ್ರಯಾಣಿಕರು

ನವದೆಹಲಿ: ದೆಹಲಿಯಿಂದ ಶ್ರೀನಗರಕ್ಕೆ 220 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ಇಂಡಿಗೋ ವಿಮಾನವು ಬುಧವಾರ ಪ್ರತಿಕೂಲ ಹವಾಮಾನದಿಂದಾಗಿ ತೀವ್ರ ಪ್ರಕ್ಷುಬ್ಧತೆಯನ್ನು ಎದುರಿಸಿತು. ಹಾಗೂ ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯಿಂದಾಗಿ ವಿಮಾನದ ಮೂತಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಪೈಲಟ್ ಶ್ರೀನಗರದ ವಾಯು ಸಂಚಾರ ನಿಯಂತ್ರಣ (ಎಟಿಸಿ) ಗೆ ತುರ್ತು ಸ್ಥಿತಿಯನ್ನು ವರದಿ ಮಾಡಿದರು. ತೀವ್ರವಾದ ಗಾಳಿಯಿಂದ ವಿಮಾನವು … Continued