ಗುದನಾಳದಲ್ಲಿ 36 ಲಕ್ಷ ರೂ. ಮೌಲ್ಯದ ಚಿನ್ನ ಬಚ್ಚಿಟ್ಟು ಕಳ್ಳ ಸಾಗಣೆ

posted in: ರಾಜ್ಯ | 0

ಮಂಗಳೂರು: 36 ಲಕ್ಷ ರೂ. ಮೌಲ್ಯದ 706 ಗ್ರಾಂ ಚಿನ್ನವನ್ನು ಗುದನಾಳದಲ್ಲಿ ಬಚ್ಚಿಟ್ಟುಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಯಾಣಿಕನೊಬ್ಬನನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಶುಕ್ರವಾರ (ಮಾರ್ಚ್ 18) ಬಂಧಿಸಿದ್ದಾರೆ. ದುಬೈಯಿಂದ ಬಂದಿದ್ದ ವ್ಯಕ್ತಿ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಗುದನಾಳದಲ್ಲಿ ಬಚ್ಚಿಟ್ಟುಕೊಂಡು ಬಂದಿದ್ದ. ಆತನ ಬಳಿ 24 ಕ್ಯಾರೆಟ್ ನ 706 ಗ್ರಾಂ ಚಿನ್ನ ಪತ್ತೆಯಾಗಿದ್ದು, … Continued

ಹೇರ್‌ಬ್ಯಾಂಡ್‌ನಲ್ಲಿ ಚಿನ್ನ ಸಾಗಾಟ : ಏರ್‌ಪೋರ್ಟ್‌ನಲ್ಲಿ ವಶ

posted in: ರಾಜ್ಯ | 0

ಮಂಗಳೂರು : ಹೇರ್‌ಬ್ಯಾಂಡ್‌ನಲ್ಲಿ ಚಿನ್ನ ಸಾಗಾಟ ಮಾಡುವವನನ್ನು ಮಂಗಳೂರಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದಾರೆ. ಮತ್ತೊಂದು ಪ್ರಕರಣವನ್ನೂ ಭೇದಿಸಿದ್ದಾರೆ. ಎರಡು ಪ್ರಕರಣಗಳಿಂದ ಬರೋಬ್ಬರಿ 21 ಲಕ್ಷ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ದುಬೈನಿಂದ ಬಂದಿದ್ದ ಮುರುಡೇಶ್ವರದ ವ್ಯಕ್ರಿಯೋರ್ವರು ಮಹಿಳೆಯ ಹೇರ್‌ಬ್ಯಾಂಡ್‌ನಲ್ಲಿ ಚಿನ್ನ ಸಾಗಾಟ ಮಾಡುತ್ತಿರುವ ಕುರಿತು ಮಂಗಳೂರಿನ ಕಸ್ಟಮ್ಸ್‌ ಅಧಿಕಾರಿಗಳು ಮಾಹಿತಿಯ ಮೇರೆಗೆ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ. … Continued

ಪೆನ್ – ಎಮರ್ಜನ್ಸಿ ಲೈಟಲ್ಲಿ ಚಿನ್ನ ಸಾಗಾಟ ಮಾಡಿದ್ರೂ ಸಿಕ್ಕಿಬಿದ್ದರು

posted in: ರಾಜ್ಯ | 0

ಮಂಗಳೂರು: ಪೆನ್ ಹಾಗೂ ಎಮರ್ಜನ್ಸಿ ಲೈಟಿನ ಬ್ಯಾಟರಿಯಲ್ಲಿ ಚಿನ್ನ ಅಡಗಿಸಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕಾಸರಗೋಡಿನ ಅಬ್ದುಲ್ ರಶೀದ್ ಹಾಗೂ ಅಬ್ದುಲ್ ನಿಸಾದ್ ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳು ದುಬೈನಿಂದ ಮಂಗಳೂರಿಗೆ ಬಂದಿದ್ದರು. ಆರೋಪಿ ಅಬ್ದುಲ್ ರಶೀದ್ ಪೌಡರ್ ರೂಪದ … Continued