ಇಂಡಿಗೋ ವಿಮಾನ ಬಿಕ್ಕಟ್ಟು : ಟಿಕೆಟ್‌ಗಳ ಹಣ 610 ಕೋಟಿ ರೂ. ಗ್ರಾಹಕರಿಗೆ ಮರುಪಾವತಿ, ವಿಮಾನಗಳ ಸಂಚಾರದಲ್ಲಿ ಸುಧಾರಣೆ

ನವದೆಹಲಿ: ಇಂಡಿಗೋ (IndiGo) ವಿಮಾನಯಾನ ಸಂಸ್ಥೆಯ ಬಿಕ್ಕಟ್ಟು ಶಮನಗೊಳ್ಳುವ ಲಕ್ಷಣಗಳು ಕಾಣಿಸುತ್ತಿದ್ದಂತೆ ವಿಮಾನಗಳ ವ್ಯಾಪಕ ರದ್ದತಿ ಮತ್ತು ವಿಳಂಬದಿಂದ ತೊಂದರೆಗೊಳಗಾದ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಯು ಈವರೆಗೆ ₹ 610 ಕೋಟಿ ಮರುಪಾವತಿ ಮಾಡಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯವು ಭಾನುವಾರ ತಿಳಿಸಿದೆ. ಶನಿವಾರದ ಹೊತ್ತಿಗೆ, ದೇಶಾದ್ಯಂತ ಸುಮಾರು 3,000 ಸಾಮಾನು ಸರಂಜಾಮುಗಳನ್ನು ಸಹ ಪ್ರಯಾಣಿಕರಿಗೆ ತಲುಪಿಸಲಾಗಿದೆ. … Continued

ಪ್ರಖರ ಸೌರ ವಿಕಿರಣದಿಂದ ಏರ್‌ಬಸ್ ವಿಮಾನಗಳ ಸಾಫ್ಟ್‌ವೇರ್‌ನಲ್ಲಿ ದೋಷ ಪತ್ತೆ ; ಜಗತ್ತಿನಾದ್ಯಂತ ಸಾವಿರಾರು ವಿಮಾನಗಳು ಸ್ಥಗಿತ…!

ತೀವ್ರ ಸೌರ ವಿಕಿರಣದಿಂದಾಗಿ (Intense Solar Radiation) ಏರ್‌ಬಸ್ ಎ320 ಸರಣಿಯ ವಿಮಾನಗಳ ನಿರ್ಣಾಯಕ ಸಾಫ್ಟ್‌ವೇರ್‌ನಲ್ಲಿ ದೋಷ ಕಂಡುಬಂದಿದ್ದು, ಅದನ್ನು ಸರಿಪಡಿಸುವವರೆಗೆ ಜಗತ್ತಿನಾದ್ಯಂತ ಸಾವಿರಾರು ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಏರ್‌ಬಸ್ ಕಂಪನಿಯ 55 ವರ್ಷಗಳ ಇತಿಹಾಸದಲ್ಲಿ ಇದುವರೆಗೆ ಕಂಡ ಅತಿ ದೊಡ್ಡ ‘ವಿಮಾನ ಹಿಂಪಡೆಯುವಿಕೆ’ ಅಥವಾ ‘ರಿಕೌಂಟ್’ ಇದಾಗಿದೆ. ಏನಿದು ತಾಂತ್ರಿಕ ದೋಷ? ಈ ಸಮಸ್ಯೆ … Continued

ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ಇಂಡಿಗೋ ವಿಮಾನವು ಅದರ ವಾಯುಪ್ರದೇಶ ಬಳಸಲು ಮಾಡಿದ ಮನವಿ ತಿರಸ್ಕರಿಸಿದ ಪಾಕಿಸ್ತಾನ

 ನವದೆಹಲಿ: ದೆಹಲಿಯಿಂದ ಶ್ರೀನಗರಕ್ಕೆ ಹಾರುತ್ತಿದ್ದ ಇಂಡಿಗೋ ವಿಮಾನವು, ಆಕಾಶದಲ್ಲಿ ತೀವ್ರ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಗೆ ತುತ್ತಾದ ನಂತರ ಪ್ರಕ್ಷುಬ್ಧತೆ ತಪ್ಪಿಸಲು ಪಾಕಿಸ್ತಾನದ ವಾಯುಪ್ರದೇಶವನ್ನು ಸ್ವಲ್ಪ ಸಮಯ ಪ್ರವೇಶಿಸಲು ಅನುಮತಿ ಕೋರಿತ್ತು, ಆದರೆ ಪಾಕಿಸ್ತಾನದ ಲಾಹೋರ್ ವಾಯು ಸಂಚಾರ ನಿಯಂತ್ರಣವು ತುರ್ತು ಸಂದರ್ಭದ ಈ ಮನವಿಯನ್ನು ತಿರಸ್ಕರಿಸಿದೆ ಎಂದು ಪಿಟಿಐ ಗುರುವಾರ ವರದಿ ಮಾಡಿದೆ. 6E … Continued

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದ್ದ ಇಂಡಿಗೋ ವಿಮಾನಕ್ಕೆ ಡಿಕ್ಕಿ ಹೊಡೆದ ಟೆಂಪೋ ಟ್ರಾವೆಲರ್…!

ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಇಂಡಿಗೋ ವಿಮಾನಕ್ಕೆ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದಿದ್ದು, ಅದರ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಾಲಕನ ನಿರ್ಲಕ್ಷ್ಯದಿಂದಾಗಿ ಟೆಂಪೋ ಟ್ರಾವೆಲರ್ ವಿಮಾನಕ್ಕೆ ಡಿಕ್ಕಿ ಹೊಡೆದಿದ್ದು, ತನಿಖೆ ನಡೆಯುತ್ತಿದೆ ಎಂದು ಇಂಡಿಗೋ ಹೇಳಿಕೆ ತಿಳಿಸಿದೆ. ಶುಕ್ರವಾರ ಮಧ್ಯಾಹ್ನ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಬೆಂಗಳೂರು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ. … Continued

ವೀಡಿಯೋ: ವಿಮಾನ ವಿಳಂಬದ ಬಗ್ಗೆ ಘೋಷಣೆ ಮಾಡುತ್ತಿದ್ದಾಗ ದೆಹಲಿ-ಗೋವಾ ಇಂಡಿಗೋ ಕ್ಯಾಪ್ಟನ್‌ ಗೆ ಗುದ್ದಿದ ಪ್ರಯಾಣಿಕ

ನವದೆಹಲಿ : ವಿಮಾನ ವಿಳಂಬದ ಬಗ್ಗೆ ಘೋಷಣೆ ಮಾಡುತ್ತಿದ್ದಾಗ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ವಿಮಾನದ ಪೈಲಟ್‌ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದು, ಹಲ್ಲೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೆಹಲಿಯಿಂದ ಗೋವಾಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ (6E-2175) ಈ ಘಟನೆ ನಡೆದಿದ್ದು, ಮಂಜಿನಿಂದಾಗಿ ವಿಮಾನ ಹೊರಡುವುದು ಹಲವು ಗಂಟೆಗಳ ಕಾಲ ವಿಳಂಬವಾಗಿತ್ತು. … Continued

ಇನ್ನು ಹುಬ್ಬಳ್ಳಿಯಿಂದ ಪುಣೆಗೆ ಪ್ರತಿದಿನ ವಿಮಾನ ಸಂಚಾರ ಆರಂಭ

ಹುಬ್ಬಳ್ಳಿ: ಪುಣೆಗೆ ಹುಬ್ಬಳ್ಳಿಯಿಂದ ಪ್ರತಿ ದಿನ ವಿಮಾನ ಸೇವೆ ಪ್ರಾರಂಭವಾಗಲಿದ್ದು, ಇದರಿಂದ ವಾಣಿಜ್ಯ ನಗರಿಯ ವಿಮಾನಯಾನ ಸಂಪರ್ಕ ಮತ್ತಷ್ಟು ಬಲಗೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ. ಇಂಡಿಗೋ ವಿಮಾನಯಾನ ಸಂಸ್ಥೆ ಮಾರ್ಚ್ 13 ರಿಂದ ಹುಬ್ಬಳ್ಳಿಯಿಂದ ಪುಣೆಗೆ ಪ್ರತಿ ದಿನ ವಿಮಾನಯಾನ ಸೇವೆ ಪ್ರಾರಂಭಿಸಲಿದೆ ಎಂದು ಅವರು ತಿಳಿಸಿದ್ದಾರೆ. ಪ್ರತಿ ದಿನ 6E … Continued