ಹಾರ್ಮುಜ್ ಜಲಸಂಧಿ ಈಗ ಅಮೆರಿಕ ನಿಯಂತ್ರಣದಲ್ಲಿ : ಭದ್ರತೆಗಾಗಿ ವಾಣಿಜ್ಯ ಹಡಗುಗಳಿಂದ 20% ಶುಲ್ಕ ವಸೂಲಿ; ಟ್ರಂಪ್‌ ಘೋಷಣೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಮಹತ್ವದ ಘೋಷಣೆ ಮಾಡಿದ್ದು, ಹಾರ್ಮುಜ್ ಜಲಸಂಧಿಯ (Strait of Hormuz) ಮೂಲಕ ಸಾಗುವ ಎಲ್ಲ ಸರಕು ಸಾಗಣೆಯ ಮೇಲೆ ಅಮೆರಿಕವು ಇನ್ನು ಮುಂದೆ 20 ಪ್ರತಿಶತ ಶುಲ್ಕ ವಿಧಿಸಲಿದೆ ಎಂದು ಪ್ರಕಟಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಟ್ರೂತ್ ಸೋಷಿಯಲ್ (Truth Social) ನಲ್ಲಿ ಈ ಕುರಿತು ಪ್ರಕಟಣೆ … Continued

ಹಾರ್ಮುಜ್ ಜಲಸಂಧಿ ಮೂಲಕ ಸಂಚರಿಸುವ ಹಡಗುಗಳಿಗೆ ಇರಾನಿನಿಂದ 18 ಕೋಟಿ ರೂಪಾಯಿಗೂ ಹೆಚ್ಚು ಸುಂಕ…!

ತೆಹ್ರಾನ್‌ : ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಸಂಘರ್ಷದ ನಡುವೆ, ಜಾಗತಿಕ ಹಡಗು ಸಂಚಾರದ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯ (Strait of Hormuz) ಮೇಲೆ ತನ್ನ ನಿಯಂತ್ರಣವನ್ನು ಸಾಧಿಸಲು ಇರಾನ್ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಕೆಲವು ಹಡಗುಗಳು ಜಲಸಂಧಿಯನ್ನು ದಾಟಲು 2 ಮಿಲಿಯನ್ ಡಾಲರ್ (ಸುಮಾರು 18.8 ಕೋಟಿ ರೂಪಾಯಿ) ಶುಲ್ಕವನ್ನು ಪಾವತಿಸುವಂತೆ ಇರಾನ್ … Continued

ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪಿಗೆ ಸೆಡ್ಡು ಹೊಡೆದ ಟ್ರಂಪ್ ; ಜಾಗತಿಕ ಸುಂಕ ಶೇ. 15ಕ್ಕೆ ಹೆಚ್ಚಿಸಿ ಆದೇಶ…!

ವಾಷಿಂಗ್ಟನ್: ಅಮೆರಿಕದ ಸುಪ್ರೀಂ ಕೋರ್ಟ್‌ನಿಂದ ಭಾರಿ ಹಿನ್ನಡೆ ಅನುಭವಿಸಿದ ಮರುದಿನವೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ರಮಣಕಾರಿ ನಿರ್ಧಾರ ಕೈಗೊಂಡಿದ್ದಾರೆ. ಶನಿವಾರದಂದು ಅವರು ಜಾಗತಿಕ ಆಮದು ಸುಂಕವನ್ನು (Tariffs) ಶೇ. 10ರಿಂದ ಶೇ. 15ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ‘ಟ್ರೂತ್ ಸೋಶಿಯಲ್’ನಲ್ಲಿ ಈ ಕುರಿತು ಬರೆದುಕೊಂಡಿರುವ ಟ್ರಂಪ್, “ನಿನ್ನೆಯಷ್ಟೇ ಸುಪ್ರೀಂ ಕೋರ್ಟ್ ಸುಂಕಗಳ … Continued

ಟ್ರಂಪ್‌ ತೆರಿಗೆಗಳ ವಿರುದ್ಧ ಅಮೆರಿಕ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿ ಗೆದ್ದ ಭಾರತೀಯ ಮೂಲದ ವಕೀಲ…!

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಧಿಸಿದ್ದ ವ್ಯಾಪಕ ಆಮದು ಸುಂಕಗಳನ್ನು (Tariffs) ರದ್ದುಗೊಳಿಸಿರುವ ಅಮೆರಿಕ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪಿನ ಹಿಂದೆ ಭಾರತೀಯ ಮೂಲದ ಖ್ಯಾತ ವಕೀಲ ನೀಲ್ ಕಾತ್ಯಾಲ್ ಅವರ ಶ್ರಮ ಎದ್ದು ಕಾಣುತ್ತಿದೆ. ಒಮ್ಮೆ ಅಮೆರಿಕ ಸರ್ಕಾರದ ಪರ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸುತ್ತಿದ್ದ ಈ ‘ಭಾರತದ ಸುಪುತ್ರ’, ಈಗ … Continued

ಟ್ರಂಪ್ ‘ಸುಂಕ’ ಸಮರಕ್ಕೆ ಭಾರತದ ಉತ್ತರ ಹೇಗಿರಬೇಕು..? ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ ಕಂಡುಬಂದ ಜನಾಭಿಪ್ರಾಯವೇನು..?

ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ ಜಾಗತಿಕ ವ್ಯಾಪಾರ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ. ಸ್ನೇಹ-ವ್ಯಾಪಾರ ಎರಡನ್ನೂ ವ್ಯವಹಾರಿಕವಾಗಿಯೇ ನೋಡುತ್ತಿರುವ ಟ್ರಂಪ್, ಮಿತ್ರ ರಾಷ್ಟ್ರಗಳನ್ನೂ ಬಿಡದೆ ಭಾರಿ ಪ್ರಮಾಣದ ಆಮದು ಸುಂಕ ವಿಧಿಸುತ್ತಿದ್ದಾರೆ. ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್‌ ಭಾರತದ ಮೇಲೂ ಅತಿಹೆಚ್ಚು ಅಂದರೆ ಶೇ. 50ರಷ್ಟು … Continued

ಭಾರತದ ಮೇಲಿನ ಶೇ. 25ರಷ್ಟು ಹೆಚ್ಚುವರಿ ಸುಂಕ ಹಿಂಪಡೆಯುವ ಸುಳಿವು ನೀಡಿದ ಅಮೆರಿಕ

ದಾವೋಸ್: ರಷ್ಯಾ ಕಚ್ಚಾ ತೈಲ ಖರೀದಿಯ ಹಿನ್ನೆಲೆಯಲ್ಲಿ ಭಾರತದ ಮೇಲೆ ವಿಧಿಸಲಾಗಿದ್ದ ಶೇ. 25ರಷ್ಟು ಹೆಚ್ಚುವರಿ ಆಮದು ಸುಂಕವನ್ನು ಅಮೆರಿಕ ಸರ್ಕಾರ ಶೀಘ್ರದಲ್ಲೇ ಹಿಂಪಡೆಯುವ ಸಾಧ್ಯತೆ ಇದೆ. ಅಮೆರಿಕದ ಖಜಾನೆ ಕಾರ್ಯದರ್ಶಿ (Treasury Secretary) ಸ್ಕಾಟ್ ಬೆಸೆಂಟ್ ಅವರು ಈ ಕುರಿತು ಮಹತ್ವದ ಸುಳಿವು ನೀಡಿದ್ದಾರೆ. ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ (WEF) … Continued

ಪ್ರಧಾನಿ ಮೋದಿ ಹೊಗಳಿ, ಭಾರತದ ಜೊತೆ ಉತ್ತಮ ವ್ಯಾಪಾರ ಒಪ್ಪಂದದ ವಿಶ್ವಾಸ ವ್ಯಕ್ತಪಡಿಸಿದ ಟ್ರಂಪ್

ನವದೆಹಲಿ: ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ (WEF) ಶೃಂಗಸಭೆಯ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಂಬಂಧಗಳ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು ಹಾಗೂ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ … Continued

ಅಮೆರಿಕದ ಗ್ರೀನ್‌ಲ್ಯಾಂಡ್ ಸ್ವಾಧೀನ ಪ್ರಸ್ತಾವನೆಗೆ ವಿರೋಧ : ಯುರೋಪಿಯನ್ ರಾಷ್ಟ್ರಗಳ ಮೇಲೆ ಭಾರೀ ಸುಂಕ ಹೇರಿದ ಟ್ರಂಪ್‌

ಅಮೆರಿಕದ ಗ್ರೀನ್‌ಲ್ಯಾಂಡ್ ಸ್ವಾಧೀನ ಪಡಿಸಿಕೊಳ್ಳುವ ಯೋಜನೆಯನ್ನು ವಿರೋಧಿಸುತ್ತಿರುವ ಯುರೋಪಿಯನ್ ರಾಷ್ಟ್ರಗಳ ಮೇಲೆ ಶೇ. 10 ರಷ್ಟು ಆಮದು ಸುಂಕವನ್ನು (Tariff) ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಪ್ರಕಟಿಸಿದ್ದಾರೆ. ಫೆಬ್ರವರಿ 1 ರಿಂದ ಡೆನ್ಮಾರ್ಕ್, ಬ್ರಿಟನ್, ಫ್ರಾನ್ಸ್ ಮತ್ತು ಇತರ ಐರೋಪ್ಯ ಒಕ್ಕೂಟದ (EU) ರಾಷ್ಟ್ರಗಳ ಮೇಲೆ ಈ ಸುಂಕ ಜಾರಿಗೆ ಬರಲಿದೆ. ತಮ್ಮ … Continued

ಸುಂಕದ ಮೂಲಕ ಜಗತ್ತನ್ನು ಹೆದರಿಸುತ್ತಿರುವ ಟ್ರಂಪ್ ; ಆದ್ರೆ ಈಗ ಭಾರತದ ಸುಂಕಕ್ಕೆ ಹೆದರಿದ ಅಮೆರಿಕ ಸೆನೆಟರ್‌ಗಳು…!

ವಾಷಿಂಗ್ಟನ್ : ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಮಾತುಕತೆಗಳು ಮುಂದುವರಿಯುತ್ತಿರುವ ಬೆನ್ನಲ್ಲೇ, ಅಮೆರಿಕದ ಇಬ್ಬರು ಪ್ರಭಾವಿ ಸೆನೆಟರ್‌ಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮಹತ್ವದ ಮನವಿ ಮಾಡಿದ್ದಾರೆ. ಭಾರತವು ಅಮೆರಿಕದ ಬೇಳೆಕಾಳುಗಳ (Pulse crops) ಆಮದಿನ ಮೇಲೆ ವಿಧಿಸಿರುವ ಹೆಚ್ಚಿನ ಸುಂಕವನ್ನು ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಲು ಅವರು … Continued

ರಷ್ಯಾದಿಂದ ತೈಲ ಖರೀದಿ: ಭಾರತದ ಮೇಲೆ ಶೇ. 500ರಷ್ಟು ಸುಂಕ ಹೇರುವ ಮಸೂದೆಗೆ ಟ್ರಂಪ್ ಸಮ್ಮತಿ…!

ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿ ಮುಂದುವರಿಸುತ್ತಿರುವ ಭಾರತ ಸೇರಿದಂತೆ ಪ್ರಮುಖ ರಾಷ್ಟ್ರಗಳ ಮೇಲೆ ಸುಂಕದ ಕ್ರಮಕ್ಕೆ ಅಮೆರಿಕ ಮತ್ತೆ ಮುಂದಾಗಿದೆ. ರಷ್ಯಾದ ಮೇಲೆ ಕಠಿಣ ಆರ್ಥಿಕ ದಿಗ್ಬಂಧನ ವಿಧಿಸುವ ದ್ವಿಪಕ್ಷೀಯ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಸಿರು ನಿಶಾನೆ ತೋರಿಸಿದ್ದಾರೆ ಎಂದು ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ತಿಳಿಸಿದ್ದಾರೆ. ಈ ಮಸೂದೆಯು ಕಾನೂನಾಗಿ ಜಾರಿಗೆ … Continued